Thursday, 12th December 2024

ಸುಣಧೋಳಿ ಸೇತುವೆ ಬಳಿ ಅಪ್ರಾಪ್ತೆಯ ಶವ ಪತ್ತೆ

ಮೂಡಲಗಿ : ಕಳೆದ ತಿಂಗಳ ಮೇ. 23ರಂದು ಪಟ್ಟಣದ ಶ್ರೀಕಾಂತ ಶಂಕರ ನಾಯಕ ಎಂಬಾತ ಅಪ್ರಾಪ್ತೆ ಬಾಲಕಿಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಯುವಕ ಹಿಂಡಲಗಾ ಜೈಲು ಪಾಲಾಗಿ 15 ದಿನಗಳ ಕಳೆಯುವ ಮುಂಚೆಯೇ ಆ ಅಪ್ರಾಪ್ತೆ ಮೃತಪಟ್ಟಿದ್ದಾಳೆ.

ಮೂಡಲಗಿ ಪಟ್ಟಣದ ಶೃತಿ ಎಂಬುವಳು ಮೃತ ದುರ್ದೈವಿ. ಇವಳು ಗುರುವಾರ ರಾತ್ರಿ ಮನೆಯಿಂದ ಹೊರಗೆ ಹೋದವಳು ಮೃತಪಪಟ್ಟಿದ್ದಾಳೆ ಎಂಬ ಮಾತು ಪಟ್ಟಣದಲ್ಲಿ ಹರಿದಾಡುತ್ತಿರುವ ಹಿನ್ನಲೆ ಪೊಲೀಸ್ ಅಧಿಕಾರಿಗಳು ಕೆಲವು ಸ್ಥಳಗಲ್ಲಿ ಪರಿಶೀಲನೆ ನಡೆಸಿದರು. ಅವಳ ಶವವು ಶುಕ್ರವಾರ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಸುಣಧೋಳಿ ಸೇತುವೆ ಬಳಿ ಪತ್ತೆಯಾಗಿದೆ.

ಅಪ್ರಾಪ್ತೆ ಸಾವಿಗೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣಕ್ಕೋ ಇಲ್ಲ. ಬೇರೆ ಯಾರಾದ್ರೂ ಕೊಲೆ ಮಾಡಿರಬಹುದಾ ಎಂಬ ಅನುಮಾನ ಹುಟ್ಟಿಕೊಂಡಿವೆ.

ಈ ಪ್ರಕರಣ ಕುಲಗೋಡ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾಲಕಿಯ ಜೊತೆಯಲ್ಲಿ ಎರಡು ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದ ಪಟ್ಟಣದ ಶ್ರೀಕಾಂತ ಶಂಕರ ನಾಯಕ ಎಂಬಾತ ಮತ್ತೆ ದೈಹಿಕ ಸಂಪರ್ಕ ಹೊಂದಲು ಬಾಲಕಿಯನ್ನು ಕರೆದೊಯ್ಯಲು ಅವಳು ತಿರಸ್ಕರಿಸಿದ್ದರಿಂದ ಅವಳಿಗೆ ಜೀವ ಬೆದರಿಕೆ ಹಾಕಿದ್ದಾನೆ.

ನಂತರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿದ್ದನ್ನು ತಿಳಿದ ಬಾಲಕಿಯ ಮನೆಯವರು ಹಾಗೂ ಬಾಲಕಿ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.