Sunday, 15th December 2024

ಜೂ.18 ರಂದು ಭಾರತೀಯ ವೈದ್ಯಕೀಯ ಸಂಘದ ಪ್ರತಿಭಟನೆ

ನವದೆಹಲಿ : ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆಗಳ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ‘ಸೇವ್​ ದ ಸೇವಿಯರ್​'(ರಕ್ಷಕನನ್ನು ರಕ್ಷಿಸಿ) ಎಂಬ ಘೋಷವಾಕ್ಯದೊಂದಿಗೆ ಜೂ. 18 ರಂದು ಪ್ರತಿಭಟನೆ ಹಮ್ಮಿಕೊಂಡಿದೆ.

ಪ್ರತಿಭಟನೆಗಾಗಿ ಯಾವುದೇ ಆಸ್ಪತ್ರೆಗಳನ್ನು ಮುಚ್ಚಲಾಗುವುದಿಲ್ಲ. ಬದಲಿಗೆ ಕರ್ತವ್ಯಕ್ಕೆ ಹಾಜರಾಗುವ ವೈದ್ಯರು ಕಪ್ಪು ಬ್ಯಾಡ್ಜ್, ಕಪ್ಪು ಮಾಸ್ಕ್ ಅಥವಾ ಕಪ್ಪು ಅಂಗಿ ತೊಟ್ಟು ತಮ್ಮ ವಿರೋಧವನ್ನು ಸೂಚಿಸಲಿದ್ದಾರೆ ಎಂದು ಐಎಂಎ ಅಧ್ಯಕ್ಷ ಡಾ. ಜೆ.ಎ.ಜಯಲಾಲ್ ಹೇಳಿದ್ದಾರೆ.

ಕೋವಿಡ್​ ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಯುಪಿ ಮತ್ತು ಕರ್ನಾಟಕ ದಲ್ಲಿ ಥಳಿಸಲಾಗಿದೆ ಮತ್ತು ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮುಂಚೂಣಿ ಕಾರ್ಮಿಕ ರಾಗಿ ಶ್ರಮಿಸುತ್ತಿರುವವರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಡಾ.ಜಯಲಾಲ್ ಹೇಳಿದ್ದಾರೆ.

ವೈದ್ಯರ ಸುರಕ್ಷೆಗಾಗಿ ಸಿಆರ್​ಪಿಸಿ ಮತ್ತು ಐಪಿಸಿ ರೀತಿಯ ಕಲಂಗಳನ್ನು ಹೊಂದಿರುವ ಕೇಂದ್ರೀಯ ಸಂರಕ್ಷಣಾ ಕಾನೂನನ್ನು ಸರ್ಕಾರ ಜಾರಿಗೊಳಿಸಬೇಕೆಂದು ಐಎಂಎ ಬೇಡಿಕೆ ಇಟ್ಟಿದೆ.