ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಕರ್ನಾಟಕದಲ್ಲಿ ಚಿತ್ರಮಂದಿರಗಳು ಮುಚ್ಚೋದು ಹೊಸ ಸುದ್ದಿ ಏನಲ್ಲ. ಆದರೆ ಈಗ ಕರೋನಾ ಕಾರಣದಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ. ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ, ಸಿನಿಮಾ ಕ್ರೇಜ್ ಸಿಕ್ಕಾಪಟ್ಟೆ ಇರೋ ತಮಿಳುನಾಡಿ ನಲ್ಲೂ 150ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುತ್ತಿವೆಯಂತೆ.
ನಮ್ಮಲ್ಲಿಯೂ ಕೂಡ ಇನ್ನೇನು ಹಲವು ಚಿತ್ರಮಂದಿರಗಳು ಕೌಂಟರ್ ಕ್ಲೋಸ್ ಮಾಡುವ ಮಾತನ್ನಾಡುತ್ತಿವೆ. ಸ್ಟಾರ್ ಸಿನಿಮಾ ಗಳೂ ಕಾಸು ಮಾಡದೆ, ಗಲ್ಲಾ ಪೆಟ್ಟಿಗೆ ತುಂಬುತ್ತಿಲ್ಲ ಎಂದು ಮೊದಲೇ ಸಂಕಷ್ಟದಲ್ಲಿದ್ದ ಈ ಚಿತ್ರಮಂದಿರಗಳು ಈಗ ಕರೋನಾ ಕೊಟ್ಟಿರೋ ಪೆಟ್ಟಿಗೆ, ಗಲ್ಲದ ಮೇಲೆ ಕೈ ಇಟ್ಟು ಕೂತಿವೆ. ಅಂದಹಾಗೆ ಇವೆಲ್ಲ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸಮಸ್ಯೆ. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್‌ಗಳು ಹೇಗೋ ಬಚಾವಾಗಲು ಹಲವು ಇನ್ನೋವೇಟಿವ್ ದಾರಿಗಳನ್ನು ಹುಡುಕಿಕೊಳ್ಳುತ್ತವೆ.
ಆದ್ರೆ ಸಿಂಗಲ್ ಸ್ಕ್ರೀನ್‌ಗಳ ಕತೆ ಹಾಗಿಲ್ಲ. ಹಾಗಾಗಿ ಜನ ಒಂದು ಕಡೆ ಮಿಂಗಲ್ ಆಗೋಕೆ ಸಾಧ್ಯ ಇಲ್ಲ ಎನ್ನುವಂಥ ಕರೋನಾ ಟೈಮಲ್ಲಿ ಸಿಂಗಲ್ ಥಿಯೇಟರ್‌ಗಳು ವಿರಹ ವೇದನೆಯಿಂದ ನರಳುವ ಸಿಂಗಲ್‌ಗಳಂತೆ ಆಗಿವೆ. ಸದ್ಯಕ್ಕೆ ಕರೋನಾ ಕಷ್ಟ
ಮುಗಿಯುವುದು ದೂರದ ಮಾತು ಎಂಬ ಸೆನ್ಸ್ ಇರುವ ಹಲವು ಚಿತ್ರಮಂದಿರಗಳ ಮಾಲೀಕರು ತಮ್ಮ ಲೈಸೆನ್ಸ್ ರಿನ್ಯೂ ಮಾಡೋಕೆ ಅರ್ಜಿಯನ್ನೂ ಹಾಕಿಲ್ಲವಂತೆ. ಇಷ್ಟು ದಿನ ತಮ್ಮ ಮರ್ಜಿ ಎನ್ನುವಂತೆ ಟಿಕೆಟ್ ದರವನ್ನು ಹೆಚ್ಚಿಸುತ್ತಿದ್ದ ಚಿತ್ರಮಂದಿರಗಳ ಮಾಲೀಕರು ಸರಕಾರದ ಫಿಫ್ಟಿ ಫಿಫ್ಟಿ ನೀತಿಯಿಂದಾಗಿ ಮೊದಲ ಲಾಕ್ ಡೌನ್‌ನ ಒಂದಿಷ್ಟು ಕಂಗೆಟ್ಟಿದ್ದರು.
ಈಗ ಫಿಫ್ಟಿ ಫಿಫ್ಟಿ ಇರಲಿ, ಚಿತ್ರಮಂದಿರಗಳಲ್ಲಿ ಶೋ ಗಳೇ ಇಲ್ಲದೆ ಅವರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡು ಸೀಟುಗಳನ್ನ ಬ್ಲಾಕ್ ಮಾಡಿಕೊಳ್ಳುತ್ತಿದ್ದ, ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಬ್ಲ್ಯಾಕ್ ಟಿಕೆಟ್
ಮಾರುತ್ತಿದ್ದ ಚಿತ್ರಮಂದಿರಗಳೇ ಈಗ ಬ್ಲಾಕ್ ಆಗುವ ಭಯದಲ್ಲಿವೆ. ಕರೋನಾ ಅನ್ನೋದು ಈ ಚಿತ್ರಮಂದಿರಗಳ ಸಿಟ್ ಔಟ್‌ನ ಕೂತು, ಪ್ರೇಕ್ಷಕರನ್ನು ಗೆಟೌಟ್ ಅನ್ನುತ್ತಿದೆ. ಇನ್ನು ಕಟ್ ಔಟ್ ಹಾಕಿಸುವ ಕಾಲ ಯಾವಾಗ ಬರುತ್ತದೋ? ಹಾಗಾಗಿ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್ ನೋಡಬೇಕಾಗಿದ್ದ ಹಲವು ಕಡೆ ಇನ್ನುಮುಂದೆ ಚಿತ್ರಮಂದಿರ ಮುಚ್ಚಿದೆ ಎಂಬ ಬೋರ್ಡ್ ತಗಲಾಕಿದರೆ ಅಚ್ಚರಿಯಿಲ್ಲ.
ನೆಟ್ ಪಿಕ್ಸ್
ಖೇಮು ಒಂದು ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡೋಕೆ ಸೇರಿಕೊಂಡ. ಅಲ್ಲಿಗೆ ಬರುವ ಕಸ್ಟಮರ್‌ಗಳಿಗೆ ಏನು ಬೇಕು ಅಂತ ಕೇಳಿ, ಅವರಿಗೆ ಗೈಡ್ ಮಾಡೋ ಕೆಲಸ ಅವನದ್ದು. ಮೊದಲ ದಿನ ಖೇಮು ಕೆಲಸಕ್ಕೆ ಹೋದ ಎಲ್ಲರ ಬಳಿಯೂ ನಗುಮೊಗದಿಂದ ವರ್ತಿಸುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಹೆಂಗಸು ಬಂದಳು. ಅವಳ ಜತೆ ಎರಡು ಪುಟ್ಟ ಮಕ್ಕಳಿದ್ದವು.
ಬಂದ ಕೂಡಲೇ ಆಕೆ ಎಲ್ಲರ ಜತೆಯೂ ಕಿರಿಕಿರಿ ಮಾಡೋಕೆ ಶುರು ಮಾಡಿದಳು. ಯಾರೇ ಬಂದು ಮಾತನಾಡಿಸಲು ಹೋದರೂ ನಿನ್ನ ಮುಖ ನೋಡ್ಕಂಡಿದೀಯ, ನಿನ್ನ ಮುಖಕ್ಕೆ ನೀನು ನಂಗೆ ಹೆಲ್ಪ ಮಾಡ್ತೀಯಾ? ಅಂತ ಎದುರಿಗಿದ್ದವರ ಮುಖದ ಬಗ್ಗೆಯೇ
ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಳು. ಅದನ್ನು ನೋಡಿದ ಸ್ಟೋರ್ ಮ್ಯಾನೇಜರ್‌ಗೆ ಕೋಪ ಬಂತು. ಆದ್ರೂ ಕಸ್ಟಮರ್ ಜೊತೆ ರೂಡ್ ಆಗಿ ಬಿಹೇವ್ ಮಾಡಬಾರದು ಅಂತ ಸುಮ್ಮನಿದ್ದ.
ಆದರೆ ಆಕೆ ಮಿತಿ ಮೀರಿದಾಗ, ಖೇಮುವನ್ನು ಕರೆದು, ನೋಡು ಇದು ನಿನ್ನ ಕೆಲಸದ ಮೊದಲ ದಿನ, ನೀನು ಆಕೆಯನ್ನು ಇಲ್ಲಿಂದ ಹೋಗುವಂತೆ ಮಾಡಿದರೆ ನಿನಗೆ ಇವತ್ತೇ ಪ್ರಮೋಷನ್ ಕೊಡ್ತೀನಿ ಅಂತ ಹೇಳಿದ. ಅದಕ್ಕೆ ಖೇಮು ಸರಿ ಸರ್ ಎಂದವನೇ ಆಕೆಯ ಬಳಿ ಹೋಗಿ ಮಾತನಾಡಲು ಯತ್ನಿಸಿದ. ಆಕೆ ಮಾಮೂಲಿಯಂತೆ ನಿನ್ನ ಮಖಾ ಮುಚ್ಚಾ ಅಂತಲೇ ಶುರು ಮಾಡಿದಳು. ಆಗ ಖೇಮು ಸಡನ್ನಾಗಿ, ಆಕೆಯ ಜೊತೆಗಿದ್ದ ಇಬ್ಬರು ಮಕ್ಕಳನ್ನು ನೋಡಿ, ನಿಮ್ಮ ಅವಳಿ ಜವಳಿ ಮಕ್ಕಳು ತುಂಬಾ ಮುದ್ದಾಗಿವೆ ಅಂದ. ಆಕೆಗೆ ಇನ್ನಷ್ಟು ಕೋಪ ಬಂತು.
ನಿನಗೇನು ತಲೆ ಕೆಟ್ಟಿದೆಯಾ, ಈ ಮಕ್ಕಳಲ್ಲಿ ಇಬ್ಬರಿಗೂ ಹೋಲಿಕೆನೇ ಇಲ್ಲ, ಅಲ್ಲದೆ ಅವನಿಗೆ ಆರು ವರ್ಷ. ಇವನಿಗೆ ೧೦ ವರ್ಷ. ಇವರನ್ನ ಅವಳಿ ಜವಳಿ ಅಂತೀಯಾ, ಅಷ್ಟೂ ಗೊತ್ತಾಗಲ್ವಾ ಅಂತ ಬಯ್ದಳು. ಅದಕ್ಕೆ ಖೇಮು ಸೀರಿಯಸ್ಸಾಗಿ ಹೇಳಿದ ಗೊತ್ತಾಗುತ್ತೆ, ಆದ್ರೂ ನಿಮ್ಮ ಮುಖ ನೋಡಿದ ಮೇಲೆ, ಯಾವ ಗಂಡಸೂ ಈ ಮುಖದ ಜೊತೆ ಎರಡೆರಡು ಸಲ ಮಲಗುವಷ್ಟು ಬರಗೆಟ್ಟಿರಲ್ಲ ಅನ್ನಿಸಿತು, ಅದಕ್ಕೇ ಕೇಳ್ದೆ. ಖೇಮುಗೆ ಪ್ರಮೋಷನ್ ಸಿಕ್ತು.
ಲೂಸ್ ಟಾಕ್
ರೋಹಿಣಿ ಸಿಂಧೂರಿ (ಕಾಲ್ಪನಿಕ ಸಂದರ್ಶನ)
ಇಬ್ಬರ ಜಗಳ ಇಬ್ರಿಗೂ ಲಾಸು ಅನ್ನೋ ಥರ ಆಯ್ತಲ್ಲ, ಶಿಲ್ಪಾ ಅವರ ಜತೆ ಕಿರಿಕ್ ಮಾಡ್ಕೊಂಡು, ಸೋರುತಿಹುದು ಮೈಸೂರು ಮಾಳಿಗಿ ಅನ್ನೋ ಥರ ಆಗಿದೆಯಲ್ಲ?
ಕಿರಿಕ್ ಏನಿಲ್ಲ, ತಿzಕೆ ಹೋದೆ ಅಷ್ಟೇ. ತಿದ್ದಿ ತೀಡಿದ್ರೆ ತಾನೇ ಕಲ್ಲು ಶಿಲ್ಪ ಆಗೋದು?
ಅಂದಹಾಗೆ, ಸ್ವಿಮ್ಮಿಂಗ್ ಪೂಲ್ ಕಟ್ಟಿಸೋ ವಿಷಯದ ಬಗ್ಗೆ ನಿಮ್ಮ ಮೇಲೆ ಆರೋಪ ಬಂದಿದೆಯ?
ಅದಕ್ಕೆ ನಾನು ಹೆದರೋಳಲ್ಲ. ಈಸಬೇಕು ಇದ್ದು ಜೈಸಬೇಕು ಅನ್ನೋ ಪಾಲಿಸಿ ನನ್ನದು.
ಇರೋಕ್ ಬಿಟ್ರೆ ತಾನೇ, ಇದ್ದು ಜಯಿಸೋದು? ರಾತ್ರೋ ರಾತ್ರಿ ನಿಮ್ಮನ್ನ ಟ್ರಾನ್ಸ್ ಫರ್ ಮಾಡಿಬಿಟ್ರ?
ಹೌದು, ಇದನ್ನ ನೋಡಿ ಅಲ್ಪನಿಗೆ ಅಹಂಕಾರ ಬಂದ್ರೆ ಅರ್ಧರಾತ್ರಿಲಿ ಟ್ರಾನ್ಸ್ ಫರ್ ಮಾಡಿಸಿದ್ನಂತೆ ಅನ್ನೋ ಮಾತು ಹುಟ್ಟಿಕೊಳ್ತದೆ ನೋಡಿ.
ಆದ್ರೆ, ಈ ವಿಷಯದಲ್ಲಿ ಸರಕಾರ ಯಾಕೆ ನಿಮ್ಮ ಪರವಾಗಿಲ್ಲ?
ಇರ್ಲಿ ಬಿಡಿ, ಪರವಾಗಿಲ್ಲ.
ಅದ್ಸರಿ, ಆ ಸಾರಾ ಮಹೇಶ್ ನಿಮ್ಮ ಮೇಲೆ ಏನೆ ಆರೋಪ ಮಾಡಿದ್ದಾರಲ್ಲ?
ಆವರ ಆರೋಪದಲ್ಲಿ ಸಾರ ಇಲ್ಲ. ಅದನ್ನೆ ನಾನು ಸಾರಾ ಸಗಟಾಗಿ ತಳ್ಳಿಹಾಕುತ್ತೇನೆ.
ಲೈನ್ ಮ್ಯಾನ್
ಲಾಕ್ ಡೌನ್ ಲಾಜಿಕ್
ಸಾರ್, ನಿಮಗೊಂದು ಕೊರಿಯರ್ ಬಂದಿದೆ
ಸರಿ, ತಂದ್ಕೊಡಿ
ಲಾಕ್ ಡೌನ್ ಟೈಮು, ಡೋರ್ ಡೆಲಿವರಿ ಇಲ್ಲ, ಸಾರ್
ಪರವಾಗಿಲ್ಲ, ಕಿಟಕಿಯಿಂದಾನೆ ಕೊಡಿ
ಎಷ್ಟು ಪಾತ್ರೆ ತೊಳೆದರೂ ಖಾಲಿಯೇ ಆಗದ ಸಿಂಕ್ ಅನ್ನು ಏನಂತಾರೆ?
‘ಅಕ್ಷಯ ಪಾತ್ರೆ’
ಪೆಟ್ರೋಲ್ ೧೦೦ ? ಆಗಿದ್ದಕ್ಕೆ ಕೆಲವರು ವಿಷ್ಣು ‘ಸಹಸ್ರ’ನಾಮ ಜಪ ಮಾಡ್ತಾ ಇದ್ದಾರಂತೆ.
ಹಂಗೆಲ್ಲ ಮಾಡಿದ್ರೆ ೧೦೦೦? ಆಗ್ಬಿಡುತ್ತೆ, ಸುಮ್ನೆ ಇರ್ರೋ.
ಲೋಕಲ್ ಬಾರ್‌ಗಿಂತ ಹೆಚ್ಚು ಗಿಜಿಬಿಜಿ ಇರೋ ಜಾಗ.
ಕ್ಲಬ್ ಹೌಸ್ ಆಪ್
ಕ್ಲಬ್ ಹೌಸ್ ಆಪ್ ಮೆಂಬರ್ ಶಿಪ್ ಸಿಗೋಕೆ ಇರಬೇಕಾದ ಸ್ಕಿಲ್
ಮಾತ್ ಮ್ಯಾಟಿಕ್ಸ್
ಕ್ಲಬ್ ಹೌಸ್ ಅಂದ್ರೆ ಏನು?
ಕಾನ್ಫರೆನ್ಸ್ ಕಾಲ, ವಾಟ್ಸಾಪ್, ಫೇಸ್ಬುಕ್ ಎಲ್ಲವನ್ನೂ ಕ್ಲಬ್ ಮಾಡಿದ ಆಪ್
ಕ್ಲಬ್ ಹೌಸ್ ಆಪ್‌ನಲ್ಲಿ ಕವಿತೆ ಹೇಳಿದರೆ ಅದು
ಕ್ಲಬ್ಬಿಗರ ಕಾವ್ಯ
ಕ್ಲಬ್ ಹೌಸ್‌ನಲ್ಲಿ ಅಷ್ಟೊಂದ್ ಜನ ಮಾತಾಡ್ತಾ ಇರೋದನ್ನ ನೋಡಿ ಏನ್ ಮಾತಾಡಬೇಕು ಅಂತ ಕಂಗಾಲಾದವ
ಮಾತು ತಪ್ಪಿದ ಮಗ
ಅತಿ ಬೇಗನೇ ಫೇಮಸ್ ಆಗಿರೋ ಕ್ಲಬ್ ಹೌಸ್ ಈಗ
ಟಾಕ್ ಆಫ್ ದಿ ಟೌನ್
ಕ್ಲಬ್ ಹೌಸಿಗೆ ಮೊದಲು ಎಂಟ್ರಿ ಕೊಟ್ಟವನ ಹೆಸರೇನು?
ಮೈಕ್