ಅಭಿಮತ
ಸಿಂಚನಾ ಎಂ.ಕೆ
ದಕ್ಷ ಅಧಿಕಾರಿ, ಪ್ರಾಮಾಣಿಕ ಅಧಿಕಾರಿ, ದಿಟ್ಟ ಅಧಿಕಾರಿ ಎಂಬಂತಹ ಬಿರುದುಗಳನ್ನು ಸ್ವತಃ ಜನರಿಂದಲೇ ಪಡೆದುಕೊಂಡಿರುವ ರೋಹಿಣಿ ಸಿಂಧೂರಿ ಅವರ ಜನಸ್ನೇಹಿ ಕಾರ್ಯಗಳು ಯಾವುವು? ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳನ್ನು ಎದುರು ಹಾಕಿ ಕೊಳ್ಳುವ ಈ ದಿಟ್ಟ ಮಹಿಳೆಯ ಸಾಮರ್ಥ್ಯವನ್ನು ಪರಿಚಯಿಸುವ ಅವರ ಕಾರ್ಯಶೈಲಿ ಹೇಗಿದೆ? ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳನ್ನೇ ಮೀರಿಸುವಂತೆ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಅವರ ಪ್ರಸಿದ್ಧಿ ಎಂತಹದ್ದು? ಯಾವುದೇ ಕ್ಷಣದಲ್ಲಿ ಬೇಕಿದ್ದರೂ ತಮ್ಮ ಟೇಬಲ್ ಮೇಲೆ ವರ್ಗಾವಣೆ ಪತ್ರ ಬಂದು ಬೀಳುವಷ್ಟರ ಮಟ್ಟಿಗೆ ವೃತ್ತಿಪರತೆಯಲ್ಲಿ ಪರಾಕಾಷ್ಠತೆಯನ್ನು
ತಲುಪಿರುವ ಅವರ ಕಾರ್ಯದಕ್ಷತೆ ಎಷ್ಟು ಪ್ರಖರ? ತಮ್ಮ ವರ್ಚಸ್ಸನ್ನು ಕುಗ್ಗಿಸಲು ಹರಸಾಹಸ ಪಡುತ್ತಾ ಮಿಥ್ಯ ಆಪಾದನೆ, ನಿಂದನೆಗಳನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ತಮ್ಮ ಕಾರ್ಯಗಳ ಮೂಲಕವೇ ಸ್ಪಷ್ಟ ಉತ್ತರ ನೀಡುವ ಇವರ ಆತ್ಮಬಲದ ಹಿಂದಿನ ರಹಸ್ಯವೇನು?
8 ತಿಂಗಳ ಹಿಂದೆಯಷ್ಟೆ ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ರೋಹಿಣಿ ಸಿಂಧೂರಿ ಅವರ ಮೇಲೆ ಏಳು ತಿಂಗಳುಗಳಿಂದ ಯಾವುದೇ ರೀತಿಯ ಆಪಾದನೆ, ಆರೋಪಗಳು ಕೇಳಿ ಬಾರದೇ ಇದ್ದದ್ದು ಕಳೆದ ಒಂದು ತಿಂಗಳಿಂದ ದಿಢೀರನೇ ಎಲ್ಲಾ ಪಕ್ಷದವರಿಂದಲೂ ಹಾಗೆಯೇ ಮುಖ್ಯವಾಗಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್ ಅವರಿಂದಲೂ ಕೇಳಿ ಬಂದಿದೆ.
ಶಿಲ್ಪಾನಾಗ್ ಅವರು ರೋಹಿಣಿ ಅವರ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಹೊರಿಸಿ ರಾಜೀನಾಮೆ ಸಹ ನೀಡಿದ್ದರು. ಒಬ್ಬ ಜನಸ್ನೇಹಿ ಅಽಕಾರಿಯ ವಿರುದ್ಧ ಹಲವಾರು ಶಾಸಕರು, ಅಽಕಾರಿಗಳು, ಸಂಸದರು ಒಗ್ಗೂಡಿದ್ದೀರೆಂದರೆ ಅದರ ತಾತ್ಪರ್ಯ ಏನು ಎಂಬುದು ನಿಮಗೇ ಅರ್ಥವಾಗುತ್ತದೆ. ಒಟ್ಟಿನಲ್ಲಿ ಈಗ ಮೈಸೂರು ಡಿಸಿ ಸ್ಥಾನದಿಂದ ವರ್ಗಾವಣೆ ಮಾಡಿ ರೋಹಿಣಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ನೇಮಕ ಮಾಡಿ, ಶಿಲ್ಪಾನಾಗ್ ಅವರನ್ನು ಗ್ರಾಮೀಣ ಅಭಿವೃದ್ಧಿ
ಹಾಗೂ ಪಂಚಾಯತ್ ರಾಜ್ ಇಲಾಖೆಯ ಇ-ಗವರ್ನೆ ನ ನಿರ್ದೇಶಕರನ್ನಾಗಿ ವರ್ಗಾಯಿಸಿ ಇಬ್ಬರು ಐಎಎಸ್ ಅಧಿಕಾರಿಗಳ ಪ್ರತಿಷ್ಠೆಯ ಕದನಕ್ಕೆ ತೆರೆ ಎಳೆಯಲಾಗಿದೆ.
ಮೂಲತಃ ಆಂಧ್ರ ಪ್ರದೇಶದವರಾದ ರೋಹಿಣಿ ಅವರು ಚಿಕ್ಕಂದಿನಿಂದಲೇ ಶಿಸ್ತು, ಆಧ್ಯಾತ್ಮಿಕ ಬುನಾದಿಯ ಸುಭದ್ರ ಶಿಕ್ಷಣ ಪಡೆದರು. ಅವರೇ ಹೇಳುವಂತೆ ಈ ಶಕ್ತಿಯೇ ಅವರ ಭವಿಷ್ಯ ಹೀಗೆ ಉಜ್ವಲವಾಗಿ ಬೆಳಗಲು ಸಹಕಾರಿಯಾಗಿದೆ. ಕೆಮಿಕಲ್ ಎಂಜಿನಿಯರಿಂಗ್ ಕೋರ್ಸ್ ಮಾಡಿದರೂ ತನ್ನ ದಾರಿ ಬೇರೆಯೇ ಎಂಬುದನ್ನು ಅರಿತುಕೊಂಡು, ತಮ್ಮ ಸ್ವಂತ ನಿರ್ಧಾರ ದಿಂದಲೇ ನಾಗರಿಕ ಸೇವಾ ವಿಭಾಗದ ಪರೀಕ್ಷೆಯನ್ನು ಬರೆಯುತ್ತಾರೆ. ತಮ್ಮ ಮೊದಲ ಪ್ರಯತ್ನದ 43ನೇ ರಾಂಕ್ ಪಡೆದು ಯಶಸ್ವಿಯಾಗುತ್ತಾರೆ. ತುಮಕೂರಿನ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಳ್ಳುವ ಇವರು ತಮ್ಮ ಮಿಂಚಿನ ಕಾರ್ಯಶೈಲಿ ಯಿಂದ ಮುನ್ಸಿಪಾಲಿಟಿ ಕಮಿಷನರ್ ಆಗಿ ನೇಮಕಗೊಳ್ಳುತ್ತಾರೆ.
ತುಮಕೂರಿನ ಪ್ರಮುಖ ರಸ್ತೆಯಾದ ಎಂಜಿ ರಸ್ತೆಗಳ ಅಗಲೀಕರಣವನ್ನು ಮಾಡುತ್ತಾರೆ. ಹಾಗೆಯೇ ತೆರಿಗೆ ಸಂಗ್ರಹ, ಆಸ್ತಿ ವಿವರಗ ಳಿಗೆ ಸಂಬಂಽಸಿದ ಅಪ್ಲಿಕೇಶನ್ ಅನ್ನು ಜಾರಿಗೊಳಿಸಿ ಕಂಪ್ಯೂಟರೀಕರಣಗೊಳಿಸುತ್ತಾರೆ. ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆಗಾಗಿ ಸರಕಾರವು ನೀಡಿದ್ದ 40 ಎಕರೆ ಭೂಮಿಯ ಬಳಕೆಗೆ ಸ್ಥಳೀಯರಿಂದ ಬಹಳ ವಿರೋಧ ವ್ಯಕ್ತವಾದರೂ, ಕೊನೆಗೆ ಅವರೆಲ್ಲರಿಗೂ ತ್ಯಾಜ್ಯ ವಿಲೇವಾರಿಯ ಅನಿವಾರ್ಯತೆ ಬಗೆ ತಿಳಿಸಿ ಸೌಜನ್ಯದಿಂದಲೇ ಅರ್ಥೈಸಿ ಆ ಕಾರ್ಯವನ್ನು ಸಾಧಿಸುತ್ತಾರೆ.
ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸುತ್ತಾರೆ. ನಂತರ ಅವರು ಮಂಡ್ಯ ಜಿಲ್ಲಾ ಪಂಚಾಯತ್ ನ ಸಿಇಒ ಆಗಿ ನೇಮಕಗೊಳ್ಳುತ್ತಾರೆ. 2014-15ರ ಸ್ವಚ್ಛ ಭಾರತ್ ಮಿಷನ್ ಚಾಲ್ತಿಯಾಗಿದ್ದ ಕಾಲದಲ್ಲಿ ಅತಿ ವೇಗವಾಗಿ ಮಂಡ್ಯ ಜಿಯನ್ನು ಬಯಲು ಮುಕ್ತ ಜಿಯನ್ನಾಗಿಸುವ ಸಂಕಲ್ಪವನ್ನು ಮಾಡುತ್ತಾರೆ. ಒಂದು ವರ್ಷಕ್ಕೆ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡುವ ಪಣ ತೊಟ್ಟು ಕಾರ್ಯ ಸಾಧಿಸುತ್ತಾರೆ.
ಇದರ ಪರಿಣಾಮವಾಗಿ ಸ್ವಚ್ಛಭಾರತ ಅಭಿಯಾನದಲ್ಲಿ ಮಂಡ್ಯ ಜಿಲ್ಲಾ ಕರ್ನಾಟಕದ ನಂ.1 ಸ್ಥಾನದಲ್ಲಿತ್ತು ಹಾಗೂ ಭಾರತದಲ್ಲಿ 3ನೇ ಸ್ಥಾನದಲ್ಲಿತ್ತು. ದೇಶದೆಡೆ ಇವರ ಕೀರ್ತಿಯನ್ನು ಹೆಚ್ಚಿಸಿದ ಈ ಕಾರ್ಯವು ಈ ವೃತ್ತಿಕ್ಷೇತ್ರದವರಿಗೂ ಒಂದು ಮಹತ್ತರ ಉದಾಹರಣೆಯನ್ನು ಸೃಷ್ಟಿಸಿ ಇವರಿಗೆ ಕೇಂದ್ರ ಸರಕಾರವೇ ಸಮ್ಮಾನ ನೀಡಿ, ಇತರೆ ಎಲ್ಲಾ ಡಿಸಿಗಳಿಗೆ ತರಬೇತಿ ನೀಡುವ ದೊಡ್ಡ ಜವಾಬ್ದಾರಿಯನ್ನೇ ವಿಧಿಸಿತು.
ಕೇಂದ್ರದಿಂದ 65 ಕೋಟಿ ಅನುದಾನ ಪಡೆದ ಇವರು 100 ಶುದ್ಧ ಘಟಕಗಳನ್ನು ಸಹ ಸ್ಥಾಪಿಸುವಲ್ಲಿ ಸಫಲರಾಗುತ್ತಾರೆ.
ತಿಂಗಳಿಗೆ ಬರೋಬ್ಬರಿ ಶೇ.34ರ ಪ್ರಮಾಣದಲ್ಲಿದ್ದ ಶಿಶು ಮರಣ ದರವನ್ನು ತಗ್ಗಿಸಲು ಹಲವು ಕಾರ್ಯಕ್ರಮಗಳನ್ನು
ಹಮ್ಮಿ ಕೊಳ್ಳುತ್ತಾರೆ. ಕಬ್ಬಿನ ಬೆಳೆಯನ್ನೇ ಹೆಚ್ಚು ಅವಲಂಬಿಸಿದ್ದರಿಂದ ಒಂದೇ ರೀತಿಯ ಅಧಿಕ ಬೆಳೆಯಾಗಿ ಮಾರುಕಟ್ಟೆಯಲ್ಲಿ ಅದರ ಮೌಲ್ಯ ಕುಸಿದರೆ ರೈತರು ಬೇರೆ ದಾರಿ ಕಾಣದೆ ಅಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು.
ಇದನ್ನು ತಡೆಗಟ್ಟುವ ಸಲುವಾಗಿ ಬೆಳೆಗಳ ವಿವಿಧೀಕರಣಗಳ ಜತೆಗೆ ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆಗಾರಿಕೆಯ ತರಬೇ ತಿಗಳನ್ನು ರೈತರಿಗೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗುತ್ತಾರೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ
ನಡೆಯಲು ಕೇವಲ ಐದು ತಿಂಗಳು ಮಾತ್ರವೇ ಸಮಯವಿದ್ದಾಗ ಹಾಸನ ಡಿಸಿಯಾಗಿ ನಿಯುಕ್ತಗೊಂಡ ರೋಹಿಣಿ ಅವರು ಈ ಸವಾಲಿನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
25,00,000 ಜೈನ ತೀರ್ಥಯಾತ್ರಿಗಳ ನಿರೀಕ್ಷಣೆಯಲ್ಲಿ ಆಯೋಜಿಸಬೇಕಾದ ಹಾಗೂ ಕಠಿಣ ನಿಯಮಗಳನ್ನು ಪಾಲಿಸುವ ಹಲವಾರು ಮುನಿ-ಮಾತಾಗಳಿಗೆ ಹಲವು ದಿನಗಳವರೆಗೆ ಅವರ ಧರ್ಮ, ನಂಬಿಕೆಯನುಸಾರ ತಂಗಲು ಮಾಡಬೇಕಾದ ವ್ಯವಸ್ಥೆ ಯನ್ನು ಜಾರಿಗೊಳಿಸುತ್ತಾರೆ. ಜೈನ ಧರ್ಮದ ನಿಯಮಗಳು ಹಾಗೂ ಸರಕಾರದ ಆಡಳಿತಾತ್ಮಕ ನಿಯಮಗಳು ಎರಡನ್ನೂ ನಿಭಾಯಿಸಿ ಎಲ್ಲರ ಮನಗೆಲ್ಲುತ್ತಾರೆ.
ಮೈಸೂರು ಡಿಸಿಯಾದ ನಂತರವೂ ಕರೋನಾ ನಿರ್ವಹಣೆಯಲ್ಲಿ ಶ್ರಮಿಸಿರುವ ಇವರು ನಮ್ಮ ರಾಜ್ಯದ ಅತಿ ಹೆಚ್ಚು ಕರೋನಾ ಟೆಸ್ಟ್ ನಡೆಸಿರುವಹಾಗೂ ಅತಿ ಹೆಚ್ಚು ಲಸಿಕೆ ಮಾಡಿಸಿರುವ ಜಿಲ್ಲೆ ಎಂಬ ಖ್ಯಾತಿಯ ಪಟ್ಟವನ್ನು ಮೈಸೂರಿಗೆ ಗಳಿಸಿಕೊಟ್ಟಿರು ತ್ತಾರೆ. ದೇಶದ ನಾಗರಿಕರ ಸೇವೆ ಮಾಡಲು ವರ್ಷಗಳ ಕಾಲ ತಪಸ್ಸು ನಡೆಸಿ ಬರುವ ಸಂತಸದೃಶರಿಗೆ ಸೇವಾಭಾಗ್ಯವನ್ನೇ ಕಸಿದು ಕೊಳ್ಳುತಲಿಹರು, ಕಣ್ತೆರೆದು ನೋಡಿ ಧೈರ್ಯದಿಂದ ಹೋರಾಡಿದರಷ್ಟೆ ಕಾಣಬಹುದು ನ್ಯಾಯದ ಪರಿಣಾಮ.