Thursday, 12th December 2024

ಯಾದೋಂಕೀ ಕ್ಯಾರವಾ‌ನ್‌

ತುಂಟರಗಾಳಿ

ಹರಿ ಪರಾಕ್‌

ಸಿನಿಗನ್ನಡ

ಸಿನಿಮಾರಂಗದಲ್ಲಿ ನಮ್ಮನ್ನು ಗುರುತಿಸುತ್ತಿಲ್ಲ ಅನ್ನೋ ಕೊರಗು ಬಹಳಷ್ಟು ಜನರಿಗೆ ಇರುತ್ತದೆ. ಕನಿಷ್ಠ ಪಕ್ಷ ಅವರಿಗೆ ಅಲ್ಲದಿದ್ದರೂ ಅವರ ಅಭಿಮಾನಿಗಳು ಮತ್ತು ಬೆಂಬಲಿಗರಿಗಂತೂ ಇದು ಖಂಡಿತ ಇದ್ದೇ ಇರುತ್ತದೆ. ಬೇರೆಯವರಿಗೆ ಇಲ್ಲದಿದ್ದರೂ ನಟ ವಿಷ್ಣುವರ್ಧನ್ ಅವರ ಅಭಿಮಾನಿಗಳು ಮತ್ತು ಅವರ ಕುಟುಂಬಸ್ಥರಿಗೆ ಅಂತೂ ಇದು ಮತ್ತೆ ಮತ್ತೆ ಕಾಡುವಂಥ ವಿಷಯ.

ಅಂದಹಾಗೆ ಇದು ಚಿತ್ರರಂಗದಲ್ಲಿ ಹೊಸ ವಿಷಯವೇನೂ ಅಲ್ಲ. ಇತ್ತೀಚೆಗೆ ವಾಣಿಜ್ಯ ಮಂಡಳಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನಟ ಸಂಚಾರಿ ವಿಜಯ್ ಅವರ ಭಾವಚಿತ್ರ ಹಾಕಿರಲಿಲ್ಲ ಎಂದು ಹಲವರು ಅಸಮಾಧಾನಗೊಂಡಿದ್ದಾರೆ. ಅದು ಸಹಜ. ಆದರೆ ವಿಷ್ಣುವರ್ಧನ್ ಅವರನ್ನು ಕಡೆಗಣಿಸಲಾಗುತ್ತಿದೆ ಅನ್ನೋದು ಅವರ ಕುಟುಂಬಸ್ಥರ ಮತ್ತು ಅಭಿಮಾನಿಗಳ ಬಾಯಲ್ಲಿ ಆಗಾಗ ಬರುವಂಥ ಮಾತು. ಅದು ಈಗ ಮತ್ತೊಮ್ಮೆ ಬಂದಿದೆ.

ಅದಕ್ಕೆ ಕಾರಣ ಅಥವಾ ನೆಪ ಕಲಾವಿದರ ಸಂಘ. ಕಲಾವಿದರ ಸಂಘದ ಭವನದಲ್ಲಿ ವಿಷ್ಣುವರ್ಧನ್ ಅವರ ಹೆಸರಿಲ್ಲ, ಅಲ್ಲಿ ಬರೀ ಡಾ. ರಾಜ್ ಕುಮಾರ್ ಮತ್ತು ಅಂಬರೀಶ್ ಅವರಿಗೆ ಬೆಲೆ ಕೊಡಲಾಗಿದೆ ಅನ್ನೋದು ಇವರ ಇತ್ತೀಚಿನ ಆರೋಪ. ಆದರೆ ಇದನ್ನು ತಪ್ಪು ತಿಳಿವಳಿಕೆ ಎಂದಷ್ಟೇ ಹೇಳಬಹುದು. ಏಕೆಂದರೆ ಕನ್ನಡ ಚಿತ್ರರಂಗದಲ್ಲಿ ಏನೇ ಒಳ್ಳೆಯ ಸಂಗತಿಗಳು ನಡೆದರೂ ಅದಕ್ಕೆ ನಟ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಬಳಸುವುದು ಸಾಮಾನ್ಯ. ಅದು ಅವರವರ ಪ್ರೀತಿ. ಇನ್ನು ಕಲಾವಿದರ ಸಂಘದ ಭವನ ನಿರ್ಮಾಣ ಆಗಲು ಮುಖ್ಯ ಕಾರಣ ಅಂಬರೀಶ್ ಅವರು.

ಅವರು ಅದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದರು. ಹಾಗಾಗಿ ಅಲ್ಲಿ ಅಂಬರೀಷ್ ಅವರ ಹೆಸರನ್ನು ಬಳಸಲಾಗಿದೆ. ಅಷ್ಟೇ ಹೊರತು ಇದರಲ್ಲಿ ವಿಷ್ಣುವರ್ಧನ್ ಅವರನ್ನು ಕಡೆಗಣಿಸಬೇಕು ಎಂಬ ಯಾವ ಉದ್ದೇಶವೂ, ಯಾರಿಗೂ ಇರಲಿಕ್ಕಿಲ್ಲ. ವಿಷ್ಣುವರ್ಧನ್ ಅವರಿಗೆ ಸಲ್ಲಬೇಕಾದ ಎಲ್ಲ ಗೌರವವನ್ನೂ ಕನ್ನಡ ಚಿತ್ರರಂಗ ಕೊಟ್ಟಿದೆ. ಹಾಗಾಗಿ ಇದನ್ನೇ ನೆಪವಾಗಿಟ್ಟುಕೊಂಡು ಅಭಿಮಾನಿಗಳ ನಡುವೆ ವಿರಸ ತಂದಿಡುವಂಥ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎನ್ನುವುದು ಅಪ್ಪಟ ಸಿನಿಪ್ರೇಮಿಗಳ ಅನಿಸಿಕೆ.

ನೆಟ್ ಪಿಕ್ಸ್
ವಯಸ್ಸಾದ ಮೇಲೆ ರೋಡ್ ಟ್ರಿಪ್ ಹೋಗೋದು ಕಷ್ಟ. ಆದ್ರೂ ನಮ್ಮ ಖೇಮುಗೆ 80 ವರ್ಷ ವಯಸ್ಸಾದ ಮೇಲೆ ಗೆಳೆಯ ರೊಂದಿಗೆ ಜಾಲಿ ಟ್ರಿಪ್ ಹೋಗಬೇಕು ಅಂತ ಆಸೆ ಬಂತು. ಅದು ಬರೀ ಆಸೆ ಆಗಿ ಉಳಿಯದೇ ಹಠ ಆಯ್ತು. ಸರಿ ಹೇಗೋ ತನ್ನ ಎಲ್ಲಾ ಗೆಳೆಯರನ್ನೂ ಕಲೆ ಹಾಕಿ ನಾವು ನನ್ನ ಕಾರಲ್ಲಿ ಲಾಂಗ್ ಡ್ರೈವ್ ಮಾಡ್ಕೊಂಡು ಟ್ರಿಪ್ ಹೋಗೋಣ ಅಂದ.

ಎಲ್ಲರೂ ಒಪ್ಪಿದರು. ಆದ್ರೆ ಡ್ರೈವ್ ಮಾಡೋದು ಯಾರು ಅನ್ನೋ ಪ್ರಶ್ನೆ ಬಂತು. ಖೇಮು ನಾನೇ ಕಾರ್ ಓಡಿಸ್ತೀನಿ ಅಂತ ಹಠ ಹಿಡಿದ. ಎಲ್ಲರೂ ಭಯ ಪಟ್ಕೊಂಡ್ರೂ ಕೊನೆಗೆ ಖೇಮು ಬೇಜಾರಾಗ್ತಾನೆ ಅಂತ ಒಪ್ಪಿಕೊಂಡ್ರು. ಸರಿ ಟ್ರಿಪ್ ಶುರು ಆಯ್ತು. ಖೇಮು ತುಂಬಾ ಉತ್ಸಾಹದಿಂದ ಗಾಡಿ ಓಡಿಸ್ತಿದ್ದ. ಸ್ವಲ್ಪ ಹೊತ್ತು ಮಾತಾಡ್ತಾ ಇದ್ದ ಎಲ್ಲರೂ ನಂತರ ಮೌನಕ್ಕೆ ಶರಣಾದರು. ಹೀಗೆ ಹೈ ವೇ ನಲ್ಲಿ ಹೋಗುವಾಗ ಖೇಮುಗೆ ದಾರಿಯಲ್ಲಿ ಟ್ರಾಫಿಕ್ ಪೊಲೀಸ್ ಕಾಣಿಸಿದರು. ಕೈ ತೋರಿಸಿ ಗಾಡಿ ನಿಲ್ಲಿಸಿದರು.

ಒಬ್ಬ ಪೊಲೀಸ್, ಕಾರ್ ಹತ್ತಿರ ಬಂದು, ಯಾಕ್ ಸರ್, ಇಷ್ಟು ಮೆತ್ತಗೆ ಹೋಗ್ತಾ ಇದ್ದೀರಾ ಅಂತ ಡ್ರೈವ್ ಮಾಡ್ತಾ ಇದ್ದ ಖೇಮುನ ಕೇಳಿದ. ಅದಕ್ಕೆ ಖೇಮು, ಅದೂ, ಹಿಂದೆ 20 ಅಂತ ರೋಡ್ ಸೈನ್ ಬೋರ್ಡ್ ನೋಡಿದೆ. ಅದಕ್ಕೆ 20ಕಿಲೋ ಮೀಟರ್ ಸ್ಪೀಡಲ್ಲಿ
ಹೋಗ್ತಾ ಇದ್ದೀನಿ ಅಂದ. ಅದಕ್ಕೆ ಪೊಲೀಸ್ ಆಫೀಸರ್, ಈ ವಯಸ್ಸಲ್ಲಿ ಡ್ರೈವ್ ಮಾಡೋಕ್ ಹೋದ್ರೆ, ಹಿಂಗೇ ಆಗೋದು. ಅದು ಸ್ಪೀಡ್ ಲಿಮಿಟ್ ಅಲ್ಲ ಸರ್, NH 25 ಅಂತ ಬೋರ್ಡ್ ಹಾಕಿರೋದು ಅಂದ. ಅಷ್ಟು ಹೇಳಿ ಹೊರಟವನು ಮತ್ತೆ ಹಿಂದೆ ತಿರುಗಿ, ಅದ್ಸರಿ, ಹಿಂದೆ ಕೂತಿರೋರೆಲ್ಲ ಯಾಕೋ ತುಂಬಾ ಹೆದರಿಕೊಂಡಿರೋ ಥರ ಇದೆ, ಕೂದಲೆಲ್ಲ ಎದ್ದು ನಿಂತುಕೊಂಡಿದೆ, ಏನಾಯ್ತು ಅಂತ ಕೇಳಿದ. ಅದಕ್ಕೆ ಖೇಮು ಕಡೆಯಿಂದ ಉತ್ತರ ಬಂತು ‘ಅದೂ, ಈಗ ತಾನೇ NH 125 ಕಡೆಯಿಂದ ಪಾಸ್ ಆದ್ವಿ. ಅದಕ್ಕೇ ಅನ್ಸುತ್ತೆ’

ಲೂಸ್ ಟಾಕ್
ಅಪ್ಪ ಮಗನ ಮಾತುಕತೆ (ಕಾಲ್ಪನಿಕ)
ಅಪ್ಪ – ಇವತ್ತು ಅಪ್ಪಂದಿರ ದಿನ ಗೊತ್ತಾ, ಅವೆಲ್ಲ ಎಲ್ಲಿ ಗೊತ್ತಿರುತ್ತೆ, ಏನ್ ಮಕ್ಕಳೋ ಅಂತ ಹುಟ್ಟಿಬಿಟ್ಟಿರೋ?
ಮಗ – ಹಲೋ, -ಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನಿಮಗೆ ಅದನ್ನ ಜ್ಞಾಪಿಸೋದೇ ನಾವು ಮಕ್ಕಳು ಗೊತ್ತಾ?

ಅಪ್ಪ – ಫೇಸ್ ಬುಕ್ಕನು ಯಾರ್ ಬೇಕಾದ್ರೂ ಅಪ್ಪನ ಬಗ್ಗೆ ಪೋಸ್ಟ್ ಹಾಕ್ತಾರೆ. ನಾನೂ ಬೇಕಿದ್ರೆ ಅದರಪ್ಪನಂಥ ಪೋಸ್ಟ್ ಹಾಕ್ತೀನಿ.
ಮಗ- ಹಂಗೇನಿಲ್ಲ, ಗಾಡಿ ಕೊಡಿಸಿದ್ರೆ ಅದರ ಮೇಲೂ ಡ್ಯಾಡ್ಸ್ ಗಿಫ್ಟ್  ಅಂತ ಹಾಕ್ತೀವಿ

ಅಪ್ಪ- ಓ, ಈವಾಗ ಗಾಡಿ ಕೊಡ್ಸು ಅಂತ ಕೇಳೋಕ್ ಬಂದ್ಯಾ? ನಿಮ್ಗೆಲ್ಲ ಅಪ್ಪ ನೆನಪಾಗೋದು ಅಫಿಶಿಯಲ್ ಕೆಲಸಕ್ಕೆ ಅಪ್ಲಿಕೇಶನ್ ಫಿಲ್ ಮಾಡುವಾಗ, ಇಂದ್ರೆ ಏನಾದ್ರೂ ಬೇಕು ಅಂತ ನಮ್ಮತ್ರ ಅಪ್ಲಿಕೇಶನ್ ಹಾಕೋವಾಗ ಅಷ್ಟೇ.
ಮಗ- ಜಾಸ್ತಿ ಸ್ಕೋಪ್ ತಗೋಬೇಡಿ, ನಾನ್ ಹುಟ್ಟಿದ ಮೇಲೇನೇ ನೀವು ಅಪ್ಪ ಆಗಿದ್ದು. ಗೊತ್ತಾ?

ಅಪ್ಪ- ತೆಗೆದ್, ಬಿಟ್ಟಾ ಅಂದ್ರೆ..ನನ್ನತ್ರನೇ ಓವರ್ ಸ್ಮಾರ್ಟ್ ಡೈಲಾಗ್ ಹೊಡಿಬೇಡ. ನೀನ್ ನನ್ನ ಎರಡನೇ ಮಗ. ನೀನ್ ಹುಟ್ಟೋಕ್ ಮುಂಚೆನೇ ನಾನ್ ಅಪ್ಪ ಆಗಿದ್ದೆ.
ಮಗ – ಓ ಸಾರಿ ಡ್ಯಾಡ್, ಗೊತ್ತಿಲ್ದೆ – ಅಲ್ಲಿ ಬಂದ್ ಬಿಡ್ತು…

ಅಪ್ಪ – ಒಂದ್ ಮಗು ಸಾಕು ಅಂತ -ಮಿಲಿ ಪ್ಲ್ಯಾನಿಂಗ್ ಮಾಡ್ತಿದ್ವಿ, ಗೊತ್ತಿಲ್ದೆ – ಅಲ್ಲಿ ಬಂದಿದ್ದು ನೀನು. ಎಲ್ಲ ನನ್ ಕರ್ಮ
ಮಗ – ನೋಡಿದ್ರಾ, ಸರ್ ಪ್ರೈಸ್ ಕೊಡೋದು ನನ್ನ ಹುಟ್ಟುಗುಣ. ಹ್ಯಾಪಿ ಫಾದರ್ಸ್ ಡೇ ಡ್ಯೂಡ್, ಸಾರಿ, ಡ್ಯಾಡ್

ಲೈನ್ ಮ್ಯಾನ್
USಇ ವಲ್ಡ ಟೆಸ್ಟ್ ಚಾಂಪಿಯನ್ ಶಿಪ್ ನಡೀತಾ ಇದೆ.
ಟ್ವಿನ್ ಟೀಮ್ಸನಲ್ಲಿ ಕೊಲ್ಯಾಪ್ಸ್ ಆಗೋದು ಯಾರು?

ಕ್ಲಬ್ ಹೌಸ್‌ನಲ್ಲಿ ತುಂಬಾ ಇಷ್ಟ ಆಗೋದು
ಔಛಿZqಛಿ ಕ್ಠಿಜಿಛಿಠ್ಝಿqs ಆಪ್ಶನ್

ಮುಳುಗುತ್ತಿರುವ ದೋಣಿಯನ್ನು ಕಷ್ಟಪಟ್ಟು ದಡ ಸೇರಿಸುವ ಅಂಬಿಗ
‘ಹುಟ್ಟು’ ಹೋರಾಟಗಾರ

ಅಸಿಡಿಟಿ ಬರಬಾರದು ಅಂದ್ರೆ ಏನ್ ಮಾಡಬೇಕು?
‘ತೇಗ’ದ ಮರವನ್ನು ಒಲೆಗೆ ಇಟ್ಟು ಅಡುಗೆ ಮಾಡಬೇಕು

ಆಪತ್ ಬಂದು ಚಾಪೆ ಸುತ್ಕೊಂಡೋಗ ಅನ್ನೋದನ್ನು ಇಂಗ್ಲಿಷ್‌ನಲ್ಲಿ ಹೆಂಗೆ ಹೇಳೋದು
‘ಮ್ಯಾಟ್’ ಫಿನಿಷ್
ಕೂದಲಿಗೆ ಒಳ್ಳೆ ಟ್ರೀಟ್ ಮೆಂಟ್ ಕೊಡುವವಳು
ಹೇರ್ ಹೋಸ್ಟೆಸ್
ಸೊಳ್ಳೆ ಪರದೆ ಮಾರಾಟ
‘ಹೋಲ್’ ಸೇಲ್
ಸೊಳ್ಳೆ ಪರದೆ ಡಿಸ್ಕೌಂಟ್ ಕೊಡುವಾಗ ಇರಬೇಕಾದ ಎಚ್ಚರ
೫೦% ‘ಕಡಿತ’ ಅಂತ ಹಾಕಬಾರದು.

ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸಲ್ಲ ಅನ್ನೋದನ್ನು ಹೇಳೋದು ಹೇಗೆ ಹಲ್ಲಲ್ಲಿ ಹೋಗೋ ಉಗುರಿಗೆ ಅಷ್ಟೊಂದು ದುಡ್ಡು ಯಾಕೆ ಕೊಡಲಿ?.

ಸ್ಟಾರ್ ನಟರ ಲೈಫು

ಎಲ್ಲಾ ಚೆನ್ನಾಗಿದ್ದಾಗ – ಲಕ್ಸುರಿ ಕ್ಯಾರವಾನ್
ವಯಸ್ಸಾಗಿ ಅವಕಾಶಗಳೇ ಇಲ್ಲದಾಗ – ಯಾದೋಂ ಕಿ ಕಾರ್ ವಾನ್