Friday, 22nd November 2024

ಪಿಡಬ್ಲುಡಿ: ನೇಮಕಾತಿಯನ್ನು ತ್ವರಿತಗತಿಯಲ್ಲಿ ಮುಂದುವರೆಸಿ

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 300 ಕಿರಿಯ ಹಾಗೂ 570 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಇದೇ ವರ್ಷದಲ್ಲಿ ಮಾರ್ಚ್ 7ರ 2019 ರಂದು ಇಲಾಖೆಯ ವೆಬ್ಸೈಟ್‌ನಲ್ಲಿ ಪ್ರಕಟಿಸಿರುತ್ತಾಾರೆ. ಅದರ ಅಧಿಸೂಚನೆ ಸಂಖ್ಯೆೆಯನ್ನು ಮೇಲೆ ಉಲ್ಲೇಖಿಸಲಾಗಿದೆ. ಸದರಿ ಹುದ್ದೆಗೆ ನಾವುಗಳು ಅರ್ಜಿ ಸಲ್ಲಿಸಿ 22-23ನೇ ಜೂನ್‌ನಲ್ಲಿ ಪರೀಕ್ಷೆಯನ್ನು ಬರೆದ ನಂತರದಲ್ಲಿ ನೇಮಕಾತಿಯ ಗತಿಯು ಕುಂಠಿತವಾಗಿರುವುದನ್ನು ಮನಗಂಡ ನಾವುಗಳು ಲೋಕೋಪಯೋಗಿ ಸಚಿವರನ್ನು ಮತ್ತು ಮಾನ್ಯ ಮುಖ್ಯಮಂತ್ರಿಿಗಳನ್ನು ಭೇಟಿಯಾಗಿ ಮನವಿಯನ್ನು ಮಾಡಿದ್ದೂ ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ,

ಇನ್ನು ಲೋಕೋಪಯೋಗಿ ಮತ್ತು ಕರ್ನಾಟಕ ಪರೀಕ್ಷೆ ಪ್ರಾಾಧಿಕಾರಕ್ಕೆೆ (ಕೆಇಎ) ಈ ವಿಷಯವಾಗಿ ಎಷ್ಟೇ ಸಂಪರ್ಕಿಸಿದರೂ ಅವರು ಸರಿಯಾದ ಮಾಹಿತಿ ನೀಡುತ್ತಿಿಲ್ಲ. ಇದರಿಂದ ನಮಗೆ ಬಹಳ ಆಘಾತವಾಗಿದೆ. ಪರೀಕ್ಷೆಗೆ ಪಟ್ಟ ಶ್ರಮ ಹಾಗೂ ವ್ಯಯಿಸಿದ ಕಾಲ ಎರಡೂ ವ್ಯರ್ಥವಾಯಿತೇನೋ ಎಂಬ ಆತಂಕ ಕಾಡುತ್ತಿಿದೆ. ಈ ನೇಮಕಾತಿಗಾಗಿ ನಾವು ವರ್ಷಗಟ್ಟಲೆ ಕಾದು ಕೊನೆಗೆ ಪರೀಕ್ಷೆ ಬರೆದು ಫಲಿತಾಂಶಕ್ಕೆೆ ಕಾದು ಕುಳಿತಿರುವ ಸಂದರ್ಭದಲ್ಲಿ ತಿಳಿದುಬಂದ ಈ ವಿಷಯ ನೇಮಕಾತಿಯ ಆಕಾಂಕ್ಷಿಗಳಿಗೆ ವಿಶಪ್ರಾಾಶನ ಮಾಡಿಸಿದಂತಾಗಿದೆ. ರಾಜ್ಯದಲ್ಲಿ ಕಿತ್ತು ತಿನ್ನುತ್ತಿಿರುವ ನಿರುದ್ಯೋೋಗ ಸಮಸ್ಯೆೆಯನ್ನು ತಿಳಿದಿರುವ ನಿಮ್ಮಿಿಂದ ನಮಗೆ ಅನ್ಯಾಾಯವಾಗುವುದಿಲ್ಲವೆಂದು ಭಾವಿಸಿ ನಿಮಗೆ ಈ ಪತ್ರವನ್ನು ಸಲ್ಲಿಸಲಿಚ್ಚಿಿಸುತ್ತೇವೆ, ಕಡು ಬಡತನದಲ್ಲೂ ಸಹ ಅಭ್ಯಸಿಸಿ ಪರೀಕ್ಷೆ ಎದುರಿಸಿ ಸಂದರ್ಶನಕ್ಕೆೆ ಕಾಯುತ್ತಿಿರುವ ರಾಜ್ಯದ ಸಾವಿರಾರು ಉದ್ಯೋೋಗಾಕಾಂಕ್ಷಿಗಳ ಮನವಿಯನ್ನು ಹೊತ್ತು ನಿಮ್ಮ ಮುಂದೆ ಸಾದರ ಪಡಿಸಿರುತ್ತೇವೆ.

ಅದಲ್ಲದೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿಿದ್ದು, ಅದರಲ್ಲಿ ವ್ಯಕ್ತಿಿಯೊಬ್ಬ ತಾನು ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರ ಆಪ್ತಕಾರ್ಯದರ್ಶಿಯಾಗಿದ್ದು ಲೋಕೋಪಯೋಗಿ ಇಲಾಖೆಯು ಈಗಾಗಲೇ ನಡೆಸಿದ ಪರಿಕ್ಷೆಯನ್ನು ರದ್ದು ಪಡಿಸಿ ಮತ್ತೊೊಮ್ಮೆೆ ಹೊಸ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಹೇಳುತ್ತಿಿದ್ದು ಯಾಕೆ ಏನೂ ಎನ್ನನ್ನು ಹೇಳಿಲ್ಲ ಇದನ್ನೆೆಲ್ಲಾ ಕೇಳಿದ ಅಭ್ಯರ್ಥಿಗಳಿಗೆಲ್ಲಾ ಆಕಾಶವೇ ಕಳಚಿಬಿದ್ದಂತಾಗಿದೆ ದಯವಿಟ್ಟು ಅಭ್ಯರ್ಥಿಗಳೊಂದಿಗೆ ಚೆಲ್ಲಾಟವನ್ನು ಆಡದಿರಿ, ಒಂದು ವೇಳೆ ಮತ್ತೆೆ ಹೊಸ ಅಧಿಸೂಚನೆ ಏನಾದರೂ ಹೊರಡಿಸಿದ್ದೇ ಆದಲ್ಲಿ ಮೊದಲು ಪರೀಕ್ಷೆ ಬರೆದ ನಮಗೆಲ್ಲಾ ವಿಷಕೊಟ್ಟು ನಂತರ ನಿಮ್ಮ ಪ್ರಕ್ರಿಿಯೆಯನ್ನು ಮುಂದುವರೆಸಿ ಕರ್ನಾಟಕದಲ್ಲಿ ಹುಟ್ಟಿಿ ಕರ್ನಾಟಕ ಸರಕಾರದಿಂದ ಉಚಿತ ನಿರುದ್ಯೋೋಗದ ಜತೆಗೆ ಉಚಿತ ಸಾವಿನ ಭಾಗ್ಯವನ್ನು ಕೊಟ್ಟುಬಿಡಿ, ಕರ್ನಾಟಕದಲ್ಲಿ ಹುಟ್ಟಿಿ ಲಕ್ಷಾಂತರ ದುಡ್ಡು ಸುರಿದು ಎಂಜಿನೀಯರಿಂಗ್ ಕಲಿತು ಸರಕಾರಿ ಉದ್ಯೋೋಗಿ ಯಾಗಬೇಕೆಂಬ ಆಸೆಯನ್ನು ಇಟ್ಟುಕೊಂಡ ತಪ್ಪಿಿಗಾಗಿ ಬದುಕಿ ಸರಕಾರದ ವಿರುದ್ಧ ಹೋರಾಡುವದಕ್ಕಿಿಂತ ಆತ್ಮಹತ್ಯೆೆ ಮಾಡಿಕೊಂಡು ಸಾಯುವುದೇ ಲೇಸು ಎನ್ನಿಿಸುತ್ತಿಿದೆ.

ದಯವಿಟ್ಟು ಈಗಲಾದರೂ ಸರಕಾರ ನೇಮಕಾತಿ ಪ್ರಕ್ರಿಿಯೆ ಶೀಘ್ರದಲ್ಲಿ ಮುಗಿಸಿ ಅಂತಿಮ ಕೀ ಉತ್ತರಗಳೊಂದಿಗೆ ಆಯ್ಕೆೆಪಟ್ಟಿಿ ನೀಡಿದರೆ ಒಳಿತು ಇಲ್ಲಾ ಮುಂದಾಗುವ ಎಲ್ಲಾ ದುಷ್ಪರಿಣಾಮಕ್ಕೆೆ ನೇರವಾಗಿ ಈ ನನ್ನ ಸರಕಾರವೇ ಹೊಣೆವೆಂದು ತಿಳಿಸಲು ಇಷ್ಟ ಪಡುತ್ತೇನೆ.
– ಇಂತಿ ಉದ್ಯೋಗ ವಂಚಿತ ಕರ್ನಾಟಕದ ಲೋಕೋಪಯೋಗಿ ಇಲಾಖೆಯ ಆಕಾಂಕ್ಷಿಗಳು