Tuesday, 5th November 2024

2023ರ ಚುನಾವಣೆ: ಶಾಸಕ ಎಂ.ವೈ.ಪಾಟೀಲರ ಉತ್ತರಾಧಿಕಾರಿ ?

ವಿಶೇಷ ವರದಿ: ಗುಂಡುರಾವ್ ಅಫಜಲಪುರ

ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಮುಂಬರುವ ವಿಧಾನಸಭೆ ಚುನಾವಣೆ ತಾಲ್ಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಕಣದಲ್ಲಿ ಶಾಸಕ ಎಮ್.ವೈ. ಪಾಟೀಲ್ ಅಥವಾ ಅವರ ಹಿರಿಯ ಪುತ್ರ ಮಾಶ್ಯಾಳ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸದ್ಯ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅರುಣಕುಮಾರ್ ಪಾಟೀಲ್ ಅವರು ಅಫಜಲಪುರ ವಿಧಾನ ಸಭೆ
ಕ್ಷೇತ್ರದಿಂದ ಇಬ್ಬರಲ್ಲಿ ಯಾರು ಚುನಾವಣೆಗೆ ನಿಲ್ಲುತ್ತಾರೆ? ಎನ್ನುವ ಕುರಿತು ಈಗಾಗಲೇ ಬಿಸಿಬಿಸಿ ಚರ್ಚೆಗಳು ಆರಂಭಗೊಂಡಿವೆ.

ಶಾಸಕ ಎಮ್.ವೈ. ಪಾಟೀಲ್ ಅವರ ಸದ್ಯ ವಯಸ್ಸಾಗಿರುವುದು ಮೇಲ್ನೋಟಕ್ಕೆ ಕಂಡುಬಂದರೂ 2023ರ ಚುನಾವಣೆ ನಡೆ ಯುವ ವೇಳೆಯಲ್ಲಿ ಶಾಸಕ ಎಮ್.ವೈ. ಪಾಟೀಲ್‌ರಿಗೆ 83 ವರ್ಷ ಆಗಲಿದ್ದು, ಇನ್ನು ಕೂಡ ಕ್ಷೇತ್ರದ ಸುತ್ತಾಟ ಬಿಟ್ಟಿಲ್ಲ. ಕಾಂಗ್ರೆಸ್‌ ನಲ್ಲಿ ಬಿಜೆಪಿಯಂತೆ ವಯಸ್ಸಿನ ನಿರ್ಬಂಧವಿಲ್ಲ. 2004ರಲ್ಲಿ ತಮ್ಮ ಷಷ್ಟಪೂರ್ತಿ ಸಮಾರಂಭದಲ್ಲಿ ಸುಮಾರು ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಚುನಾವಣೆ ಎದುರಿಸಿದ್ದೇನೆ.

ಕಾಂಗ್ರೆಸ್ ಪಕ್ಷ ನನಗೆ ಒಗ್ಗುವುದಿಲ್ಲ ಹಾಗೂ ಕೈ ಕೊಟ್ಟಿದೆ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸುವುದರ ಮೂಲಕ ಕಾಂಗ್ರಸ್
ಪಕ್ಷವನ್ನು ತೊರೆದು ಜೆಡಿ(ಎಸ್) ಪಕ್ಷಕ್ಕೆ ಹಾರಿ 2004ರಲ್ಲಿ ಗೆಲುನ ನಗೆ ಬೀರಿ ಜೆಡಿ(ಎಸ್) ಸರಕಾರದಲ್ಲಿ ಮೂರೂವರೆ ವರ್ಷಗಳ ಕಾಲ ಶಾಸಕರಾಗಿದ್ದರು.

ತದನಂತರ 2008ರಲ್ಲಿ ಎಂ.ವೈ. ಪಾಟೀಲ್ ಅವರು ಬಿಜೆಪಿಗೆ ಸೇರ್ಪಡೆಯಾಗಿ ಸೋಲುಂಡು 2013ರಲ್ಲಿ ಬಿ.ಎಸ್. ಯಡಿಯೂರಪ್ಪನವರ ಜೊತೆ ಕರ್ನಾಟಕ ಜನತಾ ಪಕ್ಷಕ್ಕೆ ಹೋಗಿ ಹಿನ್ನಡೆಯಾಗಿ ಸೋಲುಂಡಿದ್ದು ಕಹಿ ಸತ್ಯವಾಗಿದೆ. ಆದರೆ 2018ರ ಚುನಾವಣೆಯಲ್ಲಿ ಮತ್ತೆ ತನ್ನ ಮಾತೃ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿ ನಗೆ ಬೀರಿದ್ದು ಒಂದು ಕಡೆಯಾದರೆ, ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈ ಸಲ ಶಾಸಕ ಎಮ್.ವೈ.ಪಾಟೀಲ್‌ರು ವಯಸ್ಸಾದ ಕಾರಣ ಅವರ ಬದಲಿಗೆ ಅವರ ಪುತ್ರ ಅರುಣಕುಮಾರ ಪಾಟೀಲ್ ಚುನಾವಣೆಗೆ ನಿಲ್ಲುತ್ತಾರೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಈಗಾಗಲೇ ಭಾವಿ ಶಾಸಕ ಅರುಣಕುಮಾರ್ ಪಾಟೀಲ್ ಎಂದು ಸಾಮಾಜಿಕ ಜಾಲ ತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹರಿ ಬಿಡುತ್ತಿದ್ದು ಹಾಗೂ ಮಠದ ಸಾರಂಗದ ಸ್ವಾಮೀಜಿ ಘೂಳನೂರ ಕಾರ್ಯಕ್ರಮವೊಂದರಲ್ಲಿ ಹೆಸರಿಗೆ ಮಾತ್ರ ಶಾಸಕ
ಎಮ್.ವೈ.ಪಾಟೀಲ್‌ರಾಗಿದ್ದು, ತಂದೆಯ ಬೆನ್ನಿಗೆ ಹೆಗಲು ಕೊಟ್ಟು ತಾಲ್ಲೂಕಿಗೆ ಸೇವೆ ಮಾಡುತ್ತಿರುವ ಮುಂದಿನ ಶಾಸಕ ಅರುಣಕುಮಾರ ಪಾಟೀಲ್ ಎಂದು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಮಾಶ್ಯಾಳ ಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬುವ
ಯೋಜನೆ ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯ ಅರುಣಕುಮಾರ್ ಪಾಟೀಲ್ ಅವರು ಮುಂದಿನ ಶಾಸಕರಂತೆ ಬಿಂಬಿತವಾಗಿ ರುವ ಹಾಗೆ ಮತ್ತು ಸಮಾರಂಭದಲ್ಲಿ ಮಾತನಾಡಿದ ಅರುಣಕುಮಾರ ಪಾಟೀಲ್ ನನ್ನ ರಾಜಕೀಯ ಜನ್ಮ ನೀಡಿದ್ದು ಮಾಶ್ಯಾಳ ಕ್ಷೇತ್ರವಾಗಿದೆ.

ಮುಂದಿನ ದಿನಗಳಲ್ಲಿ ತಂದೆಯ ಸಹಕಾರ ಮತ್ತು ಆರ್ಶೀವಾದ ಹಾಗೂ ತಾಲ್ಲೂಕಿನ ಜನತೆಯ ಆರ್ಶೀವಾದ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆಂದು ಪರೋಕ್ಷವಾಗಿ ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು
ಅರುಣಕುಮಾರ್ ಪಾಟೀಲ್ ಅವರು ಸಂದೇಶ ರವಾನಿಸಿದ್ದಾರೆ.

ಬಿಜೆಪಿಯ ಪ್ರಬಲ ನಾಯಕನಾಗಿ ಹೊರಹೊಮ್ಮಿದ್ದ ದಿಲೀಪ್ ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಕೆ.ಎಸ್. ಈಶ್ವರಪ್ಪ ಅವರ ಕೃಪೆ ಸೇರಿದಂತೆ ವರಿಷ್ಠರ ಕೃಪೆಯಿಂದ ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ವರಿಷ್ಠರಲ್ಲಿ ಹಾಗೂ ರಾಜ್ಯ ವರಿಷ್ಠರಲ್ಲಿ ಮಾತ್ರ ಕೊನೆಯ ಹಂತವಾಗಿ
ಎಂ.ವೈ. ಪಾಟೀಲ್ ಅವರೇ ಸ್ಪರ್ಧಿಸಬೇಕೆಂಬ ನಿರ್ಧಾರವು ಈಗಾಗಲೇ ತೆಗೆದುಕೊಳ್ಳಲಾಗಿದೆ.

ಆದಾಗ್ಯೂ, ಅವರ ಪುತ್ರ ಅರುಣಕುಮಾರ್ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಕುರಿತು ಜಿಲ್ಲಾ ಹಾಗೂ ರಾಜ್ಯ ವರಿಷ್ಠರು ಮಾತ್ರ ತುಟಿ ಬಿಚ್ಚುತ್ತಿಲ್ಲ.

ದಿಲೀಪ್‌ ಪಾಟೀಲ್‌ಗೆ ಟಿಕೆಟ್‌ ಕೊಟ್ಟರೂ ಅಚ್ಚರಿಯಿಲ್ಲ !

ಕಾಂಗ್ರೆಸ್ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯನ್ನು ಜಾತಿ ಲೆಕ್ಕಾಚಾರದ ಮೇಲೆ ಎಲ್ಲ ಕೋಮುಗೂ ಪ್ರಾತಿನಿಧ್ಯ ಕೊಡುವ ದಿಸೆಯಲ್ಲಿ ಈಗಾಗಲೇ ಕಾರ್ಯತಂತ್ರ ಆರಂಭಿಸಿದೆ. ಒಂದು ಹಂತದಲ್ಲಿ ಕುರುಬ ಸಮುದಾಯದಲ್ಲಿ ಪ್ರಬಲ ನಾಯಕ ರಾಗಿರುವ ದಿಲೀಪ್ ಪಾಟೀಲ್ ಅವರು ಸರ್ವ ಸಮುದಾಯದ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ. ಅದರಲ್ಲಿಯೂ ರಾಜ್ಯ ಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ, ರಾಜ್ಯ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ. ಕೆಪಿಸಿಸಿಐ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೂ ಒಡನಾಟ ಹೊಂದಿದ್ದಾರೆ. ಹೀಗಾಗಿ ಏನಾದರೂ ಕುರುಬ ಸಮುದಾಯಕ್ಕೆ ಟಿಕೆಟ್ ಕೊಡುವುದೇ ಆದಲ್ಲಿ ದಿಲೀಪ್ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಅಚ್ಚರಿಯೇನಲ್ಲ ಎಂದು ಪಕ್ಷದ ವಲಯಗಳಲ್ಲಿ ಕೇಳಿಬರುತ್ತಿದೆ.