Sunday, 15th December 2024

ವಿಶ್ವದ ಮೊದಲ Antivirus ಮ್ಯಾಕ್‌ ಅಫಿ ಜನಕ ಇನ್ನಿಲ್ಲ

ಬಾರ್ಸಿಲೋನಾ: ವಿಶ್ವದಲ್ಲಿಯೇ ಮೊದಲ ಬಾರಿಗೆ ಆಂಟಿವೈರಸ್‌ ಕಂಡುಹಿಡಿದು ವಿಶ್ವಖ್ಯಾತಿ ಗಳಿಸಿರುವ ಮ್ಯಾಕ್‌ ಅಫೀ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮ್ಯಾಕ್‌ ಅಫಿ (McAfee) ಎಂಬ ಆಯಂಟಿ ವೈರಸ್‌ ಕಂಪ್ಯೂಟರ್‌ ಬಳಕೆದಾರರಿಗೆ ತೀರಾ ಪರಿಚಿತ. ಈ ಆಯಂಟಿವೈರಸ್‌ ಕಂಡು ಹಿಡಿಯುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. 1987ರಲ್ಲಿ ಇದನ್ನು ಕಂಡುಹಿಡಿದಿದ್ದು ವಿಶ್ವದ ಮೊದಲ ಆಯಂಟಿ ವೈರಸ್‌ ಎಂದು ಎನಿಸಿಕೊಂಡಿದ್ದರು. ಈ ಮೂಲಕ ಐಟಿ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿದ್ದ ಮ್ಯಾಕ್‌ ಅವರು ದುರಂತ ಸಾವು ಕಂಡಿದ್ದಾರೆ.

ಇವರ ಮೇಲೆ ತೆರಿಗೆ ವಂಚನೆ ಆರೋಪ ಹೊರಿಸಲಾಗಿತ್ತು. ಇವರನ್ನು ಬಂಧಿಸಿ 2020ರ ಅಕ್ಟೋಬರ್​ 3ರಂದು ಜೈಲಿಗೆ ಅಟ್ಟಲಾ ಗಿತ್ತು. ಖಿನ್ನತೆಯಿಂದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ವಕೀಲ ಜೇವಿಯರ್​ ಹೇಳಿದ್ದಾರೆ. ವಿಶ್ವದ ಮೊದಲ ವಾಣಿಜ್ಯ ಆಯಂಟಿವೈರಸ್‌ ಎಂದು ಎನಿಸಿಕೊಂಡಿದ್ದ ಮ್ಯಾಕ್‌ ಅಫೀ ಕಂಪೆನಿಯನ್ನು 2011ರಲ್ಲಿ ಇಂಟೆಲ್​ಗೆ ಮಾರಲಾಗಿತ್ತು.