ಕೊಲ್ಕತ : ನಕಲಿ ಐಎಎಸ್ ಅಧಿಕಾರಿ ಎಂದು ಸೋಗು ಹಾಕಿ ಕರೋನಾ ಲಸಿಕಾ ಶಿಬಿರ ಆಯೋಜಿಸಿ ಟಿಎಂಸಿ ಸಂಸದೆ ನಟಿ ಮಿಮಿ ಚಕ್ರಬೊರ್ತಿ ಸೇರಿ ನೂರಾರು ಜನರಿಗೆ ವಂಚಿಸಿದ್ದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತದ ಕಸ್ಬಾ ನಿವಾಸಿ ದೇಬಂಜನ್ ದಾಸ್ ಎಂಬುವ ಬಂಧಿತ ಆರೋಪಿ. ಕೋಲ್ಕತ ಮುನಿಸಿಪಲ್ ಕಾರ್ಪೊರೇಷನ್ ಜಂಟಿ ಆಯುಕ್ತ ಎಂದು ಹೇಳಿಕೊಂಡು ಲಸಿಕಾ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದ್ದ. ಅದರಂತೆ ಜನರಿಗೆ ಪ್ರೇರಣೆ ನೀಡಲು ಸಂಸದೆ ಮಿಮಿ ಚಕ್ರಬೋರ್ತಿ ಅವರನ್ನು ಆಹ್ವಾನಿಸಿದ್ದು, ಆಕೆ ಕೂಡ ಕೋವಿಶೀಲ್ಡ್ ಲಸಿಕೆ ಪಡೆದು ಜನರನ್ನು ಪ್ರೋತ್ಸಾಹಿಸಿದ್ದರು.
ಆದರೆ ಸರ್ಕಾರದ ಕೋವಿನ್ ಪೋರ್ಟಲ್ನಿಂದ ಸರ್ಟಿಫಿಕೇಟ್ ಬಾರದಾಗ, ಈ ಕುರಿತು ವಿಚಾರಣೆ ನಡೆಸಿದಾಗ ನಕಲಿ ಅಧಿಕಾರಿ ಎಂದು ಬಹಿರಂಗವಾಗಿದೆ.