ಸುರಪುರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ವರ್ಷದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾದ ಉಚಿತ ಟ್ಯಾಬ್.ಪಿ.ಸಿಗಳನ್ನು ಶಾಸಕ ನರಸಿಂಹ ನಾಯಕ (ರಾಜೂಗೌಡ) ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, ಕಾಲೇಜಿನ ಎಂಇ, ಸಿಇ, ಇಸಿಇ ಮತ್ತು ಸಿಎಸ್‌ಇ ವಿಭಾಗದ ಪ್ರಥಮ-ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ. ಗಳನ್ನು ನೀಡಲಾಗಿದ್ದು, ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಕೆಕೆಆರ್‌ಡಿಬಿ ಅಭಿವೃದ್ಧಿ ಅನುದಾನದಡಿ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ 67 ಕಂಪ್ಯೂಟರ್ ಸೇರಿದಂತೆ ಇತರೆ ಉಪಕರಣಗಳಿಂದ ಕೂಡಿದ ಪ್ರಯೋಗಾಲಯಕ್ಕೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಶ್ರೀಕಾಂತ ಜಿ.ಕೆ., ಜಿಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ, ವೇಣುಗೋಪಾಲ್ ಜೇವರ್ಗಿ, ಎಸ್.ಎಂ.ಪಾಟೀಲ್, ಎಸ್.ಜಿ.ಪಾಟೀಲ್, ರಾಮನಗೌಡ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಸುರಪುರ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ, ದ್ವಿತೀಯ ವರ್ಷದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಶಾಸಕ ರಾಜೂಗೌಡ ಟ್ಯಾಬ್.ಪಿ.ಸಿ ವಿತರಿಸಿದರು.