Saturday, 9th November 2024

ಲಾಹೋರ್‌ ಬಾಂಬ್ ಸ್ಫೋಟ ಪ್ರಕರಣ: ವಿದೇಶಿಯೊಬ್ಬರ ಬಂಧನ

ಲಾಹೋರ್: ನಿಷೇಧಿತ ಜಮಾತ್ ಉದ್‌ ದಾವಾ ಸಂಘಟನೆಯ ಮುಖ್ಯಸ್ಥ (2008ರ ಮುಂಬೈನ ಉಗ್ರರ ದಾಳಿ) ಹಫೀಜ್‌ ಸಯೀದ್‌ ನಿವಾಸದ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಪಾಕ್‌ನ ಭದ್ರತಾ ಸಂಸ್ಥೆಯ ಅಧಿಕಾರಿಗಳು ವಿದೇಶಿಯೊಬ್ಬ ರನ್ನು ಶುಕ್ರವಾರ ಬಂಧಿಸಿದ್ದಾರೆ.

ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಪೀಟರ್ ಪಾಲ್‌ ಡೇವಿಡ್‌ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ಗಾಗಿ ಗೌಪ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಫೋಟಕ್ಕೆ ಬಳಸಲಾಗಿದ್ದ ಕಾರಿನ ಮಾಲೀಕ ಡೇವಿಡ್ ಎನ್ನಲಾಗಿದೆ.

ಈತ ನಿಯಮಿತವಾಗಿ ಲಾಹೋರ್, ಕರಾಚಿ ಮತ್ತು ದುಬೈ ನಡುವೆ ಪ್ರಯಾಣಿಸಿರುವುದು ಖಚಿತ ವಾಗಿದ್ದರೂ ಪೂರಕ ಸಮರ್ಥನೆಯನ್ನು ವಿಚಾರಣೆಯಲ್ಲಿ ನೀಡಿಲ್ಲ ಎಂದು ವರದಿ ತಿಳಿಸಿದೆ.‌ ಲಾಹೋರ್‌ನ ಜೋಹರ್ ಟೌನ್ ಸಯೀದ್‌ ನಿವಾಸದ ಬಳಿ ನಡೆದಿದ್ದ ಸ್ಫೋಟದಲ್ಲಿ ಮೂವರು ಸತ್ತಿದ್ದು, 17 ಮಂದಿ ಗಾಯಗೊಂಡಿದ್ದರು.