ರಾಯ್ಪುರ: ನಕ್ಸಲ್ ಪೀಡಿತ ಬಸ್ತಾರ್ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗಿನ ದಲ್ಲಿ ನಕ್ಸಲ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ನಕ್ಸಲ್ ನನ್ನು ಪ್ಲಟೂನ್ ನಂ. 26ರ ವಿಭಾಗದ ಕಮಾಂಡರ್ ಮಾಡ್ವಿ ಜೋಗಾ ಎಂದು ಗುರುತಿಸ ಲಾಗಿದ್ದು ಇತನ ತಲೆಗೆ 3 ಲಕ್ಷ ರೂ. ಬಹುಮಾನ ಘೋಷಿಸ ಲಾಗಿತ್ತು.
ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲಂಗಾನಾರ್ ಗ್ರಾಮದ ಸಮೀಪದ ಅರಣ್ಯದಲ್ಲಿ ಬುಧವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ. ಜಿಲ್ಲಾ ಮೀಸಲು ಕಾವಲು ಪಡೆ(ಡಿಆರ್ಜಿ) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲ್ ನನ್ನು ಹೊಡೆದುರುಳಿಸಲಾಗಿದೆ.
ಜೂನ್ 18ರಂದು ಬಸ್ತಾರ್ನ ಚಂದಮೆಟಾ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲ್ ನಡುವಿನ ಗುಂಡಿನ ಕಾಳಗದಲ್ಲಿ ಮಹಿಳಾ ನಕ್ಸಲ್ ಮೃತಪಟ್ಟಿದ್ದಳು. ಕಾಳಗದಲ್ಲಿ ಇತರ ಕೆಲವು ನಕ್ಸಲರಿಗೆ ಗಾಯಗಳಾಗಿವೆ. ಎನ್ ಕೌಂಟರ್ ನಲ್ಲಿ ಪುರುಷ ನಕ್ಸಲ್ ಶವ ಪತ್ತೆಯಾಗಿದ್ದು ಒಂದು ರೈಫಲ್ ಅನ್ನು ಸ್ಥಳದಿಂದ ವಶಪಡಿ ಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.