Thursday, 19th September 2024

ದಾದಾ – ದಿ ವಾಲ್ ಸುದೀರ್ಘ ಚರ್ಚೆ

ಭಾರತ ಕ್ರಿಕೆಟ್ ರೂಪರೇಷ ಬಗ್ಗೆ ಮಾತುಕತೆ ಎನ್‌ಸಿಎ ಅಭಿವೃದ್ಧಿಗೆ ನೂತನ ಯೋಜನೆ ವಿಮಾನ ನಿಲ್ದಾಣದ ಸಮೀಪ ಪರ್ಯಾಯ ಕಟ್ಟಡ

2000ರ ದಶಕದಲ್ಲಿ ಭಾರತ ತಂಡದಲ್ಲಿ ಸಹ ಆಟಗಾರರಾಗಿದ್ದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾಾವಿಡ್ ಅವರು ಇದೀಗ ಕ್ರಮವಾಗಿ ಭಾರತೀಯ ಕ್ರಿಿಕೆಟ್ ನಿಯಂತ್ರಣ ಮಂಡಳಿ ಹಾಗೂ ರಾಷ್ಟ್ರೀಯ ಕ್ರಿಿಕೆಟ್ ಅಕಾಡೆಮಿ ಚುಕ್ಕಾಾಣಿ ಹಿಡಿದ್ದಾಾರೆ. ಇತ್ತೀಚೆಗಷ್ಟೆೆ ದಾದಾ ಖ್ಯಾಾತಿಯ ಸೌರವ್ ಗಂಗೂಲಿ ಅವರು ಬಿಸಿಸಿಐ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದರು. ಇದಕ್ಕೂ ಮುನ್ನ ಬೆಂಗಳೂರು ಚಿನ್ನಸ್ವಾಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ರಾಹುಲ್ ದ್ರಾಾವಿಡ್ ಅಧಿಕಾರ ಸ್ವೀಕರಿಸಿದ್ದರು.

ಟೀಮ್ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿ ರಾಷ್ಟ್ರೀಯ ಕ್ರಿಿಕೆಟ್ ಅಕಾಡೆಮಿಗೆ ಬುಧವಾರ ಆಗಮಿಸಿ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾಾವಿಡ್ ಬಳಿ ಸುದೀರ್ಘ ಚರ್ಚೆ ನಡೆಸಿದ್ದಾಾರೆ. ದೇಶದ ಕ್ರಿಿಕೆಟ್ ಪ್ರತಿಭೆಗಳನ್ನು ಉತ್ತಮ ದರ್ಜೆಗೆ ಏರಿಸುವ ಎನ್‌ಸಿಎ ಯನ್ನು ಇನ್ನಷ್ಟು ಬೆಳವಣಿಗೆ ಸಾಧಿಸಲು ಅಗತ್ಯವಾದ ಕ್ರಮಗಳ ಬಗ್ಗೆೆ ರಾಹುಲ್ ದ್ರಾಾವಿಡ್ ಹಾಗೂ ಇತರೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಯಿತು.

ಎನ್‌ಸಿಎ ನೂತನ ಕಟ್ಟಡ ನಿರ್ಮಾಣದ ಬಗ್ಗೆೆಯೂ ಪ್ರಸ್ತಾಾಪ ಮಾಡಿದ್ದಾಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣದಲ್ಲಿ ಸಮೀಪ ಸೆಂಟರ್ ಆಫ್ ಎಕ್ಸಲೆನ್‌ಸ್‌ ನಿರ್ಮಾಣಕ್ಕಾಾಗಿ ಕರ್ನಾಟಕ ಸರಕಾರದಿಂದ ಹೆಚ್ಚುವರಿ 15 ಎಕರೆ ಜಮೀನನ್ನು ಪಡೆಯಲಾಗಿದೆ. ಇದೀಗ ಬಿಸಿಸಿಐ ಕರ್ನಾಟಕ ಸರಕಾರದಿಂದ ಒಟ್ಟು 25 ಎಕರೆ ಜಮೀನು ಪಡೆದಂತಾಯಿತು. ಇದೀಗ ಒಟ್ಟಾಾರೆ 40 ಎಕರೆ ಪ್ರದೇಶ ಸಿಕ್ಕಿಿದೆ.

ಇದೀಗ ಎಂ.ಚಿನ್ನಸ್ವಾಾಮಿ ಕ್ರೀಡಾಂಗಣದಲ್ಲಿರುವ ಎನ್‌ಸಿಎ ಇತ್ತೀಚೆಗೆ ಟೀಕೆಗೆ ಗುರಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಎನ್‌ಸಿಎ ಕೇವಲ ಪುನರ್ವಸತಿ ಕೇಂದ್ರವಾಗಿ ರೂಪಗೊಂಡಿದೆ ಎಂದು ಹಲವರು ಟೀಕಿಸಿದ್ದರು. ಇದೀಗ ಎಚ್ಚೆೆತ್ತುಕೊಂಡಿರುವ ಬಿಸಿಸಿಐ ಎನ್‌ಸಿಎ ಗೆ ಪರ್ಯಾಸ ಸ್ಥಳದಲ್ಲಿ ದೊಡ್ಡ ಕಟ್ಟಡ ಕಟ್ಟಲು ಯೋಜನೆ ರೂಪಿಸುತ್ತಿಿದೆ. ಈ ಹಿನ್ನೆೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣದ ಸಮೀಪವಿರುವ ಬಿಸಿಸಿಐ ಭೂಮಿಯನ್ನು ಒಳಾಂಗಣ ಸೇರಿದಂತೆ ಒಟ್ಟು ಮೂರು ಅಂಗಳಗಳು, ಆಡಳಿತ ಕಟ್ಟಡ ಹಾಗೂ ಹಾಸ್ಟೆೆಲ್ ನಿರ್ಮಾಣ ಮಾಡಲು ಹಂಚಿಕೆ ಮಾಡಲಾಗಿದೆ.

72 ಎಸ್‌ಜಿ ಟೆಸ್‌ಟ್‌ ಫಿಂಕ್ ಚೆಂಡುಗಳು

ಮುಂದಿನ ನವೆಂಬರ್ 22 ರಿಂದ ಈಡನ್ ಗಾರ್ಡನ್‌ಸ್‌ ಕ್ರೀಡಾಂಗಣದಲ್ಲಿ ನಡೆಯುವ ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಚೊಚ್ಚಲ ಹೊನಲು ಬೆಳಕಿನ ಟೆಸ್‌ಟ್‌ ಪಂದ್ಯಕ್ಕೆೆ 72 ಪಿಂಕ್ ಚೆಂಡುಗಳನ್ನು ಮುಂದಿನ ವಾರ ಒದಗಿಸುವಂತೆ ಎಸ್‌ಜಿ ಕಂಪನಿಗೆ ಬಿಸಿಸಿಐ ಕೋರಿದೆ.

ಈಗಾಗಲೇ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅವರು ಹೊನಲು ಬೆಳಕಿನ ಟೆಸ್‌ಟ್‌ ಪಂದ್ಯಕ್ಕೆೆ ಪಿಂಕ್ ಚೆಂಡಿನಲ್ಲಿ ಆಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾಾರೆ. ಲೈಟ್ ಗಳ ನಡುವೆ ಪಿಂಕ್ ಚೆಂಡು ಪಂದ್ಯಕ್ಕೆೆ ಫಿಟ್ ಆಗಲಿದೆ. ಈಗಾಗಲೇ ಎಸ್‌ಜಿ ಪಿಂಕ್ ಚೆಂಡನ್ನು ಪರೀಕ್ಷೆೆಗೆ ಒಳಪಡಿಸಲಾಗಿದೆ. ದುಲೀಪ್ ಟ್ರೋೋಫಿ ಮೂರು ಆವೃತ್ತಿಿಯಲ್ಲಿ ಈ ಹಿಂದೆ ಕುಕುಬುರ್ರಾಾ ಚೆಂಡನ್ನು ಬಳಸಲಾಗಿತ್ತು.

ಬಿಸಿಸಿಸಿಐ ಈಗಾಗಲೇ ಎಸ್‌ಜಿ ಎರಡು ಡಜನ್ ಪಿಂಕ್ ಚೆಂಡುಗಳಿಗೆ ನೀಡುವಂತೆ ಕೋರಿದೆ. ಮುಂದಿನ ವಾರದ ಮಧ್ಯೆೆದಲ್ಲಿ ಚೆಂಡುಗಳು ಬಿಸಿಸಿಐಗೆ ತಲುಪಲಿವೆ. ಕಳೆದ ದಕ್ಷಿಿಣ ಆಫ್ರಿಿಕಾ ವಿರುದ್ಧ ಎಸ್‌ಜಿ ಟೆಸ್‌ಟ್‌ ಚೆಂಡನ್ನು ಬಳಸಲಾಗಿತ್ತು. ಇದು ಅತ್ಯುತ್ತಮವಾಗಿತ್ತು. ಇದೇ ತರಹದ ಚೆಂಡನ್ನು ಪಿಂಕ್ ಬಣ್ಣದಲ್ಲಿ ತರಿಸಲಾಗುತ್ತಿಿದೆ ಎಂದು ಎಸ್‌ಜಿ ಕಂಪನಿಯ ಮಾರಾಟ ಮತ್ತು ಮಾರ್ಕೇಟಿಂಗ್ ನಿದೇಶಕ ಪರಾಸ್ ಆನಂದ್ ತಿಳಿಸಿದ್ದಾಾರೆ.

ಕಳೆದ ತವರು ಟೆಸ್‌ಟ್‌ ಸರಣಿಯಲ್ಲಿ ಎಸ್‌ಜಿ ಟೆಸ್‌ಟ್‌ ಚೆಂಡಿನ ಬಗ್ಗೆೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಿ ವಿರೋಧ ವ್ಯಕ್ತಪಡಿಸಿದ್ದರು. ಇಂಗ್ಲೆೆಂಡ್ ನಲ್ಲಿ ಬಳಸುವ ಡ್ಯೂಕ್ ಚೆಂಡಿಗಿಂತ ಎಸ್‌ಜಿ ಟೆಸ್‌ಟ್‌ ಚೆಂಡು ಬೇಗ ಸ್ವರೂಪ ಕಳೆದುಕೊಳ್ಳುತ್ತಿಿತ್ತು. ಕನಿಷ್ಟ ಚೆಂಡು 60 ಓವರ್ ಗಳಿಗಾದರೂ ಬಳಕೆಯಾಗಬೇಕು ಎಂದು ಕೊಹ್ಲಿಿ ಸಲಹೆ ನೀಡಿದ್ದರು.