Saturday, 23rd November 2024

ಸೆಪ್ಟೆಂಬರ್ 21ರಿಂದ ದೇಶೀಯ ಕ್ರಿಕೆಟ್ ಆರಂಭ: ಬಿಸಿಸಿಐ

BCCI

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ 2021-22 ರ ಋತುವಿನಲ್ಲಿ ಭಾರತದಲ್ಲಿ ದೇಶೀಯ ಕ್ರಿಕೆಟ್ ಹಿಂದಿರುಗಿಸುವು ದಾಗಿ ಶನಿವಾರ ಘೋಷಿಸಿದೆ.

ಈ ಋತುವು ಸೆಪ್ಟೆಂಬರ್ 21, 2021ರಂದು ಪ್ರಾರಂಭವಾಗುತ್ತದೆ. ಹಿರಿಯ ಮಹಿಳಾ ಏಕದಿನ ಮತ್ತು ಹಿರಿಯ ಮಹಿಳಾ ಏಕದಿನ ಚಾಲೆಂಜರ್ ಟ್ರೋಫಿ  ಅಕ್ಟೋಬರ್ 27, 2021ರಿಂದ ನಡೆಯಲಿದೆ. 2021-22ರ ಋತುವಿನಲ್ಲಿ ನಿಗದಿಯಾಗಿರುವ 2127 ಪಂದ್ಯಗಳ ಪೈಕಿ ಬಿಸಿಸಿಐ ತನ್ನ ಎಲ್ಲ ದೇಶೀಯ ಪಂದ್ಯಾವಳಿ ಗಳನ್ನ ನವೆಂಬರ್ 16ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯೊಂದಿಗೆ ನಡೆಸಲಿದೆ.ಬಿಸಿಸಿಐ ಯಾವುದೇ ವಯೋಮಾನದ ಪಂದ್ಯಾವಳಿಯನ್ನ ನಡೆಸಲು ಸಾಧ್ಯವಾಗಲಿಲ್ಲ ಮತ್ತು ಕೋವಿಡ್-19 ಸಾಂಕ್ರಾಮಿಕದಿಂದಾಗಿ ರಣಜಿ ಟ್ರೋಫಿಯನ್ನು ರದ್ದುಗೊಳಿಸಬೇಕಾಯಿತು.

ಆದಾಗ್ಯೂ, ಈ ವರ್ಷ ಪೂರ್ಣ ಪ್ರಮಾಣದ ದೇಶೀಯ ಋತುವು ಅಕ್ಟೋಬರ್ 20 ರಿಂದ ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಜಾರೆ ಟ್ರೋಫಿಗಾಗಿ ರಾಷ್ಟ್ರೀಯ ಏಕದಿನ ಚಾಂಪಿಯನ್ ಶಿಪ್ ಫೆಬ್ರವರಿ 23, 2022ರಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಶಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಯದ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯ ನವೆಂಬರ್ 12,2021 ರಂದು ನಡೆಯಲಿದೆ. 2021ರ ನವೆಂಬರ್ 16 ರಿಂದ ಫೆಬ್ರವರಿ 19, 2022ರವರೆಗೆ ಮೂರು ತಿಂಗಳ ವಿಂಡೋದಲ್ಲಿ ರಣಜಿ ಟ್ರೋಫಿಯನ್ನು ಆಡಲಾಗುವುದು. ವಿಜಯ್ ಹಜಾರೆ ಟ್ರೋಫಿ ಫೈನಲ್ 2022 ಮಾರ್ಚ್ 26 ರಂದು ನಡೆಯಲಿದೆ.