Thursday, 19th September 2024

ಖಾಸಗಿ ವಿಮಾನ ಅಪಘಾತ: ಧರ್ಮಪ್ರಚಾಕರು ಸೇರಿ ಆರು ಮಂದಿ ಸಾವು

ಹೈಟಿ: ಹೈಟಿಯಲ್ಲಿ ನಡೆದ ಖಾಸಗಿ ವಿಮಾನ ಅಪಘಾತದಲ್ಲಿ ಅಮೆರಿಕದ ಇಬ್ಬರು ಧರ್ಮಪ್ರಚಾಕರು ಸೇರಿದಂತೆ ಎಲ್ಲ ಆರು ಮಂದಿ ಮೃತಪಟ್ಟಿದ್ದಾರೆ.

ಹೈಟಿಯ ನೈಋತ್ಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್ ನಲ್ಲಿ ವಿಮಾನ ದುರ್ಘಟನೆ ನಡೆದಿದೆ. ವಿಮಾನ ನಿಲ್ದಾಣದಿಂದ ದಕ್ಷಿಣ ಕರಾವಳಿ ನಗರವಾದ ಜಾಕ್ಮೆಲ್‌ಗೆ ಹೋಗುವಾಗ ವಿಮಾನ ಪತನಗೊಂಡಿದೆ ಎಂದು ರಾಷ್ಟ್ರೀಯ ನಾಗರಿಕ ವಿಮಾನಯಾನ ಕಚೇರಿ (ಎನ್‌ಸಿಎಒ) ವರದಿ ತಿಳಿಸಿದೆ.

ತಕ್ಷಣಕ್ಕೆ ವಿಮಾನ ದುರ್ಘಟನೆಯ ಹಿಂದಿನ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಅಮೆರಿಕದ ಧರ್ಮಪ್ರಚಾರಕರಾದ ಹಾಸ್ಟೆಲ್ಟರ್ (35) ಮತ್ತು ಜಾನ್ ಮಿಲ್ಲರ್ (43) ಮೃತಪಟ್ಟಿದ್ದಾರೆ ಎಂಬುದನ್ನು ದೃಢೀಕರಿಸಲಾಗಿದೆ. ಇದಕ್ಕೂ ಮೊದಲಿನ ವಿಮಾನದಲ್ಲಿ ಹಾಸ್ಟೆಲ್ಟರ್ ಅವರ ಪತ್ನಿ ಹಾಗೂ ಮೂವರು ಮಕ್ಕಳು ಪ್ರಯಾಣಿಸಿದ್ದರು. ಆದರೆ ಲಘು ವಿಮಾನದಲ್ಲಿ ಸ್ಥಳವಿಲ್ಲದ ಕಾರಣ ಅನಂತರದ ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದರು.

ಪೋರ್ಟ್-ಒ-ಪ್ರಿನ್ಸ್ ಪ್ರದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರು ಆ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ ಎಂಬುದು ವರದಿಯಾಗಿವೆ.