Tuesday, 5th November 2024

ಸಿಂಗಾಪುರದಲ್ಲಿ ಡೆಲ್ಟಾಫ್ಲಸ್ ಶಂಕೆ: ವಾರದಲ್ಲಿ ನಾಲ್ವರು ಸಾವು

ಹುಳಿಯಾರು: ಕರೋನಾದ ರೂಪಾಂತರ ವೈರಸ್ ಡೆಲ್ಟಾಫ್ಲಸ್ ಇರುವ ಶಂಕೆಯುಳ್ಳ ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.

ಜಿಲ್ಲೆಯಲ್ಲೇ ಕರೋನಾ ಸೋಂಕಿತರ ಸಂಖ್ಯೆ ಸಿಂಗಾಪುರದಲ್ಲಿ ಹೆಚ್ಚಿದೆಯಲ್ಲದೆ ವಾರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೆ ಕೊರೊನಾ ಪರೀಕ್ಷೆ ಮಾಡಿ ದಂಗೆಲ್ಲಾ ಸೋಂಕಿತರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಕಾರ್ಯಾನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ತಹಶೀಲ್ದಾರ್ ಬಿ.ತೇಜಸ್ವಿನಿ, ಟಿಎಚ್‌ಒ ನವೀನ್ ಭೇಟಿ ನೀಡಿದ್ದರು.

ಸಿಂಗಾಪುರದಲ್ಲಿ ಕರೋನಾ ಸೋಂಕು ಹತೋಟಿಗೆ ತಾಲೂಕು ಆಡಳಿತ ತೆಗೆದುಕೊಂಡಿರುವ ಕ್ರಮ, ಆರೋಗ್ಯ ಇಲಾಖೆ ನಡೆಸುತ್ತಿರುವ ಕರೋನಾ ತಪಾಸಣೆ ಬಗ್ಗೆ ಮಾಹಿತಿ ಪಡೆದರಲ್ಲದೆ ಸಿಂಗಾಪುರದಲ್ಲಿ ಸೋಂಕು ಹತೋಟಿಗೆ ಬರುವವರೆವಿಗೂ ಸೀಲ್‌ಡೌನ್ ಮಾಡುವಂತೆ ಸೂಚಿಸಿದರು. ಅಲ್ಲದೆ ಗ್ರಾಮದಲ್ಲಿ ಕೆಟ್ಟಿರುವ ಶುದ್ಧ ನೀರಿನ ಘಟಕ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ತೇಜಸ್ವಿನಿ ಅವರು ಚಿತ್ರದುರ್ಗ ಜಿಲ್ಲೆಯ ಓಬಳಾಪುರ ಗ್ರಾಮಕ್ಕೂ ಸಿಂಗಾಪುರ ಗ್ರಾಮಕ್ಕೂ ನೆಂಟರಿಷ್ಟರ ಸಂಬAಧವಿದೆ. ಇತ್ತೀಚೆಗೆ ಓಬಳಾಪುರ ಗ್ರಾಮದಿಂದ ಕೆಲವರು ಇಲ್ಲಿಗೆ ಆಗಮಿಸಿದ್ದರು. ಓಬಳಾಪುರ ಗ್ರಾಮದಲ್ಲಿ ಹೆಚ್ಚು ಜ್ವರ ಪೀಡಿತರು ಇದ್ದುದರಿಂದ ಕರೋನಾ ಸೋಂಕಿತರು ಹೆಚ್ಚಾಗಲು ಕಾರಣವಾಗಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.