Sunday, 15th December 2024

ಲಕ್ಸೆಂಬರ್ಗ್ ಪ್ರಧಾನಿಗೆ ಕೋವಿಡ್-19 ದೃಢ

ಬ್ರುಸೆಲ್ಸ್: ಲಕ್ಸೆಂಬರ್ಗ್ ಪ್ರಧಾನಿ ಕ್ಸೇವಿಯರ್ ಬೆಟ್ಟೆಲ್ ಅವರಿಗೆ ಕೋವಿಡ್-19 ದೃಢಪಟ್ಟಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಟ್ಟೆಲ್ ಅವರು ಯುರೋಪಿಯನ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಕೋವಿಡ್ ಪರೀಕ್ಷೆಗೊಳಪಟ್ಟಿದ್ದರು. ಆಗ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಆರಂಭಿಕ ಹಂತದಲ್ಲಿ ಅವರಿಗೆ ಸಣ್ಣ ಪ್ರಮಾಣದ ರೋಗಲಕ್ಷಣಗಳಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಎರಡು ದಿನಗಳ ಕಾಲ ನಡೆದ ಯುರೋಪಿಯನ್ ಶೃಂಗಸಭೆಯಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು’ ಎಂದು ಸಭೆಯ ಸಂಘಟಕರು ತಿಳಿಸಿದ್ದಾರೆ.