ಅವಲೋಕನ
ಡಾ.ಸಿ.ಜಿ.ರಾಘವೇಂದ್ರ ವೈಲಾಯ
ನಾನು ಯಾರು…? ಮಾನವನನ್ನು ಹೀಗೆ ದೇಶಕಾಲಾತೀತವಾಗಿ ಸದಾ ಕಾಡುವ ಪ್ರಶ್ನೆಯಿದು. ಪ್ರತಿಯೊಬ್ಬನಿಗೂ ತನ್ನ ಮೂಲ ಅಸ್ತಿತ್ವದ ಕುರಿತ ಪ್ರಶ್ನೆ ಅತ್ಯಂತ
ಮೂಲಭೂತ ವಾದದ್ದು. ದೇಶದ ಗಡಿಯನ್ನು ಕಾಯುವ ಸೈನಿಕ ಸದಾ ತನ್ನ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುತ್ತಿರುತ್ತಾನೆ.
ಮೈಕೊರೆಯುವ ಚಳಿಯಲ್ಲಿ ನಿಶ್ಶಬ್ದ ಗಡಿಗಳ ನೀರವ ರಾತ್ರಿಗಳ ಮೌನಗರ್ಭದಲ್ಲಿ ಆತನ ಮನದಾಳದಲ್ಲಿ ಎಂದಾದರೂ ಒಮ್ಮೆ ನಾನು ಜೀವವನ್ನು ಪಣವಾಗಿಟ್ಟು ಈ ದೇಶವನ್ನು ಯಾರಿಗಾಗಿ ಕಾಯಬೇಕು ಎಂಬ ಜಿಜ್ಞಾಸೆ ಆತನಿಗೆ ಕಾಡದಿರದು. ಕಾಶ್ಮೀರದಲ್ಲಿ ಕಟುಕರ ಕಲ್ಲುಗಳಿಗೆ ನಿರ್ವಿಕಾರದಿಂದ ಎದೆಯೊಡ್ಡುವಾಗಲೂ ಇದೇ ಅಸ್ತಿತ್ವದ ಪ್ರಶ್ನೆ ಆತನನ್ನು ಕಾಡಬಹುದು.
ಸ್ವಾತಂತ್ರ್ಯದ ಹೋರಾಟದಲ್ಲಿ ನಸುನಗುತ್ತಾ ನೇಣಿನ ಕುಣಿಕೆಗೆ ತಲೆಯೊಡ್ಡಿದ ಸಹಸ್ರಾರು ನಿಸ್ಪೃಹ ಬಲಿದಾನಿ ಗಳಿಗೂ ಒಂದೊಮ್ಮೆ ಹೀಗನ್ನಿಸಿರುವುದು ಸಾಧ್ಯ. ದೇಶಸೇವೆಗೆ ಕಾಯಾ, ವಾಚಾ, ಮನಸಾ ಹೆಗಲಾಗುವ ಎಲ್ಲರನ್ನೂ ಕಾಡುವ ಕಟ್ಟಕಡೆಯ ಈ ಪ್ರಶ್ನೆಯು ತನ್ನ ನೈಜ ಅಸ್ತಿತ್ವದ ಕುರಿತಾದದ್ದೇ. ನಮ್ಮ ನಾಗರಿ ಕತೆಯ ತಾಯಿಬೇರು ನಿಂತಿರುವುದೇ ಅಖಂಡ ಆರ್ಯಾವರ್ತದ ಈ ಪ್ರಾಚೀನ ಚರಿತ್ರೆಯ ವಿಶಾಲ ಹರಹಿನಲ್ಲಿ. ತನ್ನ ಮೂಲ ಅಸ್ಮಿತೆಯ ಸ್ಪಷ್ಟವಾದ ಅರಿವು ಇಲ್ಲದ ಯಾವುದೇ ರಾಷ್ಟ್ರವು ತಾನು ಅಖಂಡವಾಗಿ ಉಳಿಯಲಾರದು.
ರಾಷ್ಟ್ರವೆಂಬ ಬೃಹತ್ ವೃಕ್ಷಕ್ಕೆ ತನ್ನ ಮೂಲದ ಅರಿವೇ ತಾಯಿಬೇರು. ಗೆದ್ದವರು ಮಾತ್ರವೇ ಜಗತ್ತಿನ ಇತಿಹಾಸವನ್ನು ಬರೆಯುತ್ತಾರೆ ಎಂಬುದೇ ನಮ್ಮ ಸಮಕಾಲೀನ ಚರಿತ್ರೆಯ ದೋಷ. ಹಾಗಾಗಿ ಭಾರತೀಯರು ಸಾವಿರ ವರ್ಷಗಳ ದಾಸ್ಯದ ತರುವಾಯ ನಮ್ಮನ್ನು ಗೆದ್ದು ಆಳಿದ ಆಂಗ್ಲರು ತಮ್ಮ ಮೂಗಿನ ನೇರಕ್ಕೆ ಸರಿಹೊಂದುವಂತೆ ಬರೆದ ದಾಸ್ಯದ ಕಥೆಯನ್ನೇ ಇಂದಿಗೂ ನಾವು ಪರಮ ಸತ್ಯವೆಂದೇ ನಂಬಿದ್ದೇವೆ. ಈ ಶರಣಾಗತ ಪರಾಽನ ಮಾನಸಿಕತೆಯು ನಮ್ಮ
ಬೌದ್ಧಿಕ, ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ ಪಾರಮಾರ್ಥಿಕ ಚಿಂತನೆಗಳನ್ನು ಶಾಶ್ವತವಾಗಿ ಹಳ್ಳಹಿಡಿಸಿದೆ.
ಮೊತ್ತ ಮೊದಲ ನಾಗರಿಕತೆಯು ಉದಯವಾದದ್ದು ಮಧ್ಯ ಪ್ರಾಚ್ಯದಂದು ಪಾಶ್ಚಾತ್ಯರು ನಮ್ಮನ್ನು ನಂಬಿಸಿದ್ದಾರೆ. ಆದರೆ ಆಧುನಿಕ ವೈಜ್ಞಾನಿಕ ಸಾಕ್ಷ್ಯಗಳು ಈಗ ಹೆಚ್ಚು ಹೆಚ್ಚಾಗಿ ಲಭ್ಯವಾದಂತೆ ಈ ತಥಾಕಥಿತವಾಗಿ ಸ್ಥಾಪಿತ (ಅ)ಸತ್ಯಗಳು ಒಂದೊಂದಾಗಿ ಕುಸಿದು ಬೀಳುತ್ತಿವೆ. ಈ ವೈಚಾರಿಕ ತಥ್ಯವನ್ನು ಈಗ ಸಮಸ್ತ ವಿಶ್ವವೇ ಒಪ್ಪಿ ಅಪ್ಪಿಕೊಂಡರೂ ಗುಲಾಮೀ ಮಾನಸಿಕತೆಯ ಕಮ್ಯೂನಿಸ್ಟ್ ಇತಿಹಾಸಕಾರರಾದ ಇರ್ಫಾನ್ ಹಬೀಬ್, ರೋಮಿಲಾ ಥಾಪರ್, ಟೋನಿ ಜೋಸೆ- ಅವರಂಥ ನಕಲಿ(?) ಚರಿತ್ರೆಕಾರರು ಮಾತ್ರ ಸುತಾರಂ ಒಪ್ಪಲು ತಯಾರಿಲ್ಲ.
ಮಹತ್ವದ್ದೇನೂ ಭಾರತದಲ್ಲಿ ಸ್ವಾಯತ್ತವಾಗಿ ರೂಪುಗೊಂಡಿರಲು ಸಾಧ್ಯವೇ ಇಲ್ಲ. ಅವೆಲ್ಲವೂ ಯೂರೋಪಿನಿಂದ ಆಮದಾಗಿರಲೇಬೇಕೆಂಬುದೇ ಇವರ ನಿರಾಧಾರ ಸಿದ್ಧಾಂತದ ಮೂಲಾಧಾರ ಶೃತಿ. ಭಾರತದ ಇತಿಹಾಸದಲ್ಲಿ 1970ನೇ ಇಸವಿ ಒಂದು ಅವಿಸ್ಮರಣೀಯ ಕಾಲಘಟ್ಟ. ಅಂದು ಅಮೆರಿಕಾದ ಲ್ಯಾಂಡ್ ಸ್ಯಾಟ್ ಉಪಗ್ರಹವು ಪಶ್ಚಿಮೋತ್ತರದ ಭಾರತದಲ್ಲಿ ಹಿಂದೊಮ್ಮೆ ಹರಿಯುತ್ತಿದ್ದ ಬೃಹತ್ ಗಾತ್ರದ ನದಿಯೊಂದರ ಒಣಗಿ ಹೋದ ವಿಶಾಲ ಪಾತ್ರದ ಸವಿವರ
ಚಿತ್ರಗಳನ್ನು ನೀಡಿತ್ತು. ಓಲ್ಡ ಹ್ಯಾಮ್ ಮೊದಲಾದ ಬ್ರಿಟಿಷ್ ಭೂವಿಜ್ಞಾನಿಗಳು ಬಹಳ ಹಿಂದೆ ಘಗ್ಗತ್ ಹಕ್ರಾ ಎಂದು ಉಲ್ಲೇಖಿಸಿದ ಈ ನದಿಯೇ ವೇದಗಳಲ್ಲಿ ಉಖಗೊಂಡ ಸರಸ್ವತಿಯೆಂದು ಹೇಳಿದ್ದನ್ನು ಅಂದು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರಿಂದು ಈ ಅತ್ಯಾಧುನಿಕ ವೈಜ್ಞಾನಿಕ ಸಾಕ್ಷ್ಯಗಳನ್ನು ಮಾತ್ರ ಯಾರೂ ತಳ್ಳಿಹಾಕುವಂತಿಲ್ಲ. ಕೆಲವರಿಗಂತೂ ಇದು ನುಂಗಲೂ ಅಲ್ಲ, ಉಗುಳಲೂ ಸಾಧ್ಯ ವಿಲ್ಲದ ಬಿಸಿತುಪ್ಪದಂತಾಗಿದೆ. ಅಕ್ಬರನು ತನ್ನ ಸೈನ್ಯದ ತುಕಡಿಗಳನ್ನು ಗುಜರಾತಿನ ಮೂಲಕ ವೇಗವಾಗಿ ಮುನ್ನಡೆಸಲು ಮಧ್ಯಯುಗದಲ್ಲಿ ಅದಾಗಲೇ ಬತ್ತಿ ಹೋಗಿದ್ದ ಇದೇ ನದೀ ಪಾತ್ರವನ್ನು ಬಳಸಿದ ಉಖಗಳೂ ಬರಹಗಳಲ್ಲಿ ದಾಖಲಾಗಿವೆ. ತದನಂತರ ಇಸ್ರೋದ ಅನೇಕ ಉಪಗ್ರಹಗಳು ಕೂಡಾ ನೂರಾರು ಸಚಿತ್ರ ದಾಖಲೆಗಳೊಂದಿಗೆ ಇದನ್ನೇ ಮತ್ತೆ ಮತ್ತೆ ಪುಷ್ಟೀಕರಿಸಿವೆ.
ಇದರಲ್ಲಿ ತಿಳಿದು ಬರುವ ಹೊಸದಾದ ವಿಚಾರವೇನೆಂದರೆ ಇದುವರೆಗೂ ಸಿಂಧೂ ನಾಗರಿಕತೆಗೆ ಸೇರಿದ್ದೆಂದು ತಿಳಿದಿದ್ದ ಶೇ.60ದಷ್ಟು ಸ್ಥಳಗಳು (ಅದರಲ್ಲೂ ವಿಶೇಷವಾಗಿ ಶೇ.80ದಷ್ಟು ನಗರಗಳು) ನಿಜವಾಗಿಯೂ ಇದ್ದಿದ್ದು ಸರಸ್ವತೀ ನದೀಪಾತ್ರದಲ್ಲಿ. ಹೀಗೆ ಹರಪ್ಪಾ ನಾಗರಿಕತೆಯ ಮೂಲ ನದಿಯಾಗಿದ್ದು ಸಿಂಧೂ ಅಲ್ಲ, ಇದೇ ವೈದಿಕ ಸರಸ್ವತಿ. ಹಾಗಾಗಿ ವೇದಗಳಲ್ಲಿ ಸಿಂಧೂಮಾತೆಯೆಂದೇ ಸರಸ್ವತಿಯನ್ನು ಬಣ್ಣಿಸಲಾಗಿದೆ. ಅಲ್ಲದೇ ಇಂದು ದೇಶದ ಪ್ರಮುಖ ನದಿ ಗಳಾಗಿರುವ ಗಂಗೆ, ಯಮುನೆಯರ ಉಲ್ಲೇಖವು ಪ್ರಾಚೀನವಾದ ವೇದಗಳಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ಅಂದಿನ ವೈದಿಕ ಸಂಸ್ಕೃತಿಯು ಮಾತ್ರ ಸಹಸ್ರಾರು ವರ್ಷಗಳ ನಂತರವೂ ಕಿಂಚಿತ್ ಬದಲಾವಣೆಗಳ ಹೊರತಾಗಿ, ಇಂದಿಗೂ ತನ್ನ ನಿರಂತರತೆ, ಏಕರೂಪತೆ ವೈಶಿಷ್ಟ್ಯವನ್ನು ಮುಂದುವರೆಸಿ ಕೊಂಡು ಬಂದಿದೆ.
ಇದನ್ನು ನಾವು ಪಶ್ಚಿಮ, ಉತ್ತರ ಭಾರತದ ಜನರ ಪಾರಂಪರಿಕ ಉಡುಗೆ ತೊಡುಗೆ, ಆಚಾರ ವಿಚಾರಗಳಲ್ಲಿ ಇಂದಿಗೂ ಯಥಾವತ್ತಾಗಿ ಕಾಣಬಹುದು. ಅ ಉತ್ಖನನಗಳಲ್ಲಿ ದೊರೆತ ಟೆರಕೋಟಾ ಗೊಂಬೆಗಳನ್ನು ಕಂಡಾಗ ಇವೆಲ್ಲವೂ ನಮಗೆ ಸುಸ್ಪಷ್ಟವಾಗುತ್ತದೆ. ಇತ್ತೀಚಿಗೆ ನಟವರ್ ಝಾ ಅವರು ಸಿಂಧೂ ಲಿಪಿ ಯನ್ನು ಬಹುತೇಕ ಬೇಧಿಸಿದ ಮೇಲಂತೂ ಹರಪ್ಪಾ ವೈದಿಕ ಸಂಸ್ಕೃತಿಗಳೆರಡೂ ಕೂಡಾ ಒಂದೇ ಎಂಬುದು ಈಗ ನಿರ್ವಿವಾದವಾಗಿ ನಿಸ್ಸಂಶಯವಾಗಿ ಸಾಬೀತಾಗಿದೆ.
ಋಗ್ವೇದದಲ್ಲಿ ಅಂಬೀತಮೆ, ದೇವೀತಮೇ ನದೀತಮೇ ಎಂದೆ ಉತ್ಕಟ ರಸಭಾವದ ಉತ್ಕರ್ಷದಿಂದ ಆರ್ಷರು ವರ್ಣಿಸಿದ ಸರಸ್ವತಿ ನದಿಯು, ವಿಜ್ಞಾನಿಗಳ ಅಂದಾಜಿನಂತೆ ಸುಮಾರು ಐದಾರು ಸಾವಿರ ವರ್ಷಗಳ ಹಿಂದೆ ಇಂದಿನ ಬ್ರಹ್ಮಪುತ್ರವನ್ನೂ ಮೀರಿಸುವ ಬೃಹತ್ ನದಿಯಾಗಿತ್ತು. ಹಿಮಾಲಯದಲ್ಲಿ ಜನಿಸಿ ಸಿಂಧೂ ಸಾಗರವನ್ನು ಕಛ್ ತೀರದಲ್ಲಿ ಸಂಗಮಿಸುತ್ತಿದ್ದ ಈ ನದಿಯ ಉದ್ದವು ಬರೋಬ್ಬರಿ 4600 ಕಿ.ಮೀ.ಗಳು. ಇಂಥ ಪರಮ ಪವಿತ್ರವಾದ ಮಹಾ ನದಿಯು 3900 ವರ್ಷಗಳ ಹಿಂದೆ ಪ್ರಕೃತಿಯ ವಿಕೋಪಕ್ಕೆ (ಸರಣಿ ಭೂಕಂಪನ ದೀರ್ಘ ಕಾಲದ ಜಲಕ್ಷಾಮ) ಕ್ರಮೇಣ ತುತ್ತಾಗಿ ಬತ್ತಿಹೋಗಿದ್ದು ಕಂಡುಬರುತ್ತದೆ.
ಒಂದೊಮ್ಮೆ ಸರಸ್ವತಿಯನ್ನು ಸೇರುತ್ತಿದ್ದ ಹಿಮಾಲಯದ ಪ್ರಮುಖ ಹಿಮನದಿಗಳಾದ ಶತದ್ರು ದೃಶದ್ವತಿ ನದಿಗಳು ತಮ್ಮ ಹಳೆಯ ಹಾದಿಯನ್ನು ಬದಲಿಸಿ ಅನುಕ್ರಮವಾಗಿ ಸಿಂಧೂ ಮತ್ತು ಯಮುನಾ ನದಿಗಳನ್ನು ಕೂಡಿಕೊಂಡ ಕಾರಣ ಸರಸ್ವತಿಗೆ ದೊಡ್ಡ ಪ್ರಮಾಣದಲ್ಲಿ ನಿರಂತರವಾಗಿ ಹಿಮಾದ್ರಿಯಿಂದ ಹರಿದು ಬರುತ್ತಿದ್ದ ಹಿಮಜಲವು ಕೈತಪ್ಪಿಹೋಯಿತು. ಅದರಿಂದಾಗಿ ಈ ಸರ್ವಋತು ಮಹಾನದಿಯು ಕೇವಲ ಮಳೆಗಾಲದಲ್ಲಿ ಮಾತ್ರವೇ ಹರಿಯುವ ಅರೆಕಾಲಿಕ ನದಿಯಾಗಿ ಬದಲಾಯಿತು. ಹಲವು ಭೂವಿಜ್ಞಾನಿಗಳು ಹೇಳುವಂತೆ ಇದೇ ಸಮಯಕ್ಕೆ ಭಾರತದಲ್ಲಿ ಮುಂಗಾರು ಮಳೆಯ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗಿ, ಸರಸ್ವತಿಯು ಕಾಲಕ್ರಮೇಣ ಕ್ಷೀಣಿಸುತ್ತಾ ತನ್ನ ದಕ್ಷಿಣಾರ್ಧದ ಪಾತ್ರದಲ್ಲಿ ಕೊನೆಗೆ ಜೈಸಲ್ಮೇರಿನ ಸಮೀಪ ಭೂಗತವಾಯಿತು.
ಹೀಗೆ ಪಂಜಾಬ್ ಹರ್ಯಾಣದ ಕೆಲ ಭಾಗಗಳೊಂದಿಗೆ, ಈ ಹಿಂದೆ ಫಲವತ್ತಾಗಿದ್ದ ರಾಜಸ್ಥಾನದ ಜೌಗು ನೆಲವೂ ಕ್ರಮೇಣ ಮರುಭೂಮಿಯಾಗಿ ಮಾರ್ಪಟ್ಟಿತು. ಹೀಗೆ ಅರ್ಯರ ಸಪ್ತಸಿಂಧುಗಳಿಂದಾವೃತವಾದ ಪರಮ ಪವಿತ್ರ ವೇದಭೂಮಿಯಾದ ಈ ಬ್ರಹ್ಮಾವರ್ತವು ಕ್ರಮೇಣ ಬರಡು ಬಂಜರಾಗಿ ಮರಳುಗಾಡಾಯಿತು. ಸರಸ್ವತಿಯು ತನ್ನ ಉತ್ತರದ ಭಾಗದಲ್ಲಿ, ಅಲ್ಲಲ್ಲಿ ಅನೇಕ ಸರೋವರ, ಹಳ್ಳಕೊಳ್ಳಗಳ ನಿಸ್ತಂತು ಮಾಲೆಯಾಗಿ ಬದಲಾಯಿತು.
ಇಂಥ ಪ್ರಾಕೃತಿಕ ವಿಷಮ ಪರಿಸ್ಥಿತಿಯಲ್ಲಿ ತಮ್ಮ ಜೀವನಕ್ಕೆ ನದಿಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದ ಜನರು ಏನು ಮಾಡುತ್ತಾರೆ? ನೀರಿನ ಇತರೇ ಮೂಲಗಳನ್ನು ಅರಸುತ್ತಾ ಅವರು ಹೊರವಲಸೆ ಹೋಗುತ್ತಾರೆ ನ್ನುವುದು ಸಹಜವಲ್ಲವೇ? ಹೀಗೆ ಸರಸ್ವತಿ ನದಿ ಪಾತ್ರದ ಹೆಚ್ಚಿನ ಜನರು ತದನಂತರ ಸಿಂಧೂ, ಗಂಗಾ, ಯಮುನಾ ನದಿಗಳತ್ತ ವಲಸೆಹೋಗಿ ಮೂಲ ಸನಾತನ ಸಂಸ್ಕೃತಿಯನ್ನು ಅಲ್ಲಿಗೂ ಹರಡಿದರು. ಇಷ್ಟನ್ನು ತಿಳಿದ ಯಾವ ಅಲ್ಪಮತಿಯೂ ಕೂಡಾ ಇಂಥ
ಬರಡು ಭೂಮಿಗೆ ಮಧ್ಯ ಏಷ್ಯಾ, ಯುರೇಶಿಯಾ ಇರಾನಿನಿಂದ ಶಸ ಸಂಪನ್ನರಾದ ಅಲೆಮಾರಿ ಅಸಂಸ್ಕೃತ ಆರ್ಯರು (ಗಂಡಸರು ಮಾತ್ರ) ವಲಸಿಗರಾಗಿ ಬಂದು, ನಂತರ ಇ ನೆಲೆನಿಂತು ಅತ್ಯಲ್ಪ ಕಾಲದಲ್ಲಿಯೇ ಸಮೃದ್ಧವಾದ ವೇದಸಂಸ್ಕೃತಿಯನ್ನು ಹುಟ್ಟುಹಾಕಿದರೆಂದರೆ ಯಾರೂ ನಂಬಲಾರರು. ಆದರೆ ಇಂಥ ಒಂದು ಅಪ್ಪಟ ಸುಳ್ಳನ್ನೇ ಆಂಗ್ಲರ ಬಾಡಿಗೆ ಚರಿತ್ರಕಾರರಾದ ಮ್ಯಾಕ್ಸ್ ಮುಲ್ಲರ್ ಮಾರ್ಟಿಮರ್ ವ್ಹೀಲರ್ ಮೊದಲಾದವರು ನಮಗೆ ಶತಮಾನಗಳಿಂದ ಉಣಬಡಿಸಿದ್ದು.
ಹಿಂದಿನ ವಸಾಹತುಶಾಹಿ ವ್ಯವಸ್ಥೆ ಯಂತೆ ಇದನ್ನೇ ತಾವೂ ಶಿರಸಾ ವಹಿಸಿ ಜೀಹುಜೂರ್ ಎಂದು ನಂಬಿ, ಜೀಯ ಎಂದು ನೆಚ್ಚಿ ಬದುಕುವುರ ತಮ್ಮ ಬದುಕಿನ ಸಾರ್ಥಕ್ಯವನ್ನು ಕಂಡುಕೊಳ್ಳುವಂತೆ ನಮ್ಮ ಇತಿಹಾಸಕಾರರನ್ನು ತಯಾರು ಮಾಡಿದ ಶ್ರೇಯಸ್ಸು ಲಾರ್ಡ್ ಮೆಕಾಲೆರಿಗೆ ಸಲ್ಲಬೇಕು.
ತಥಾಕಥಿತ ಆಂಗ್ಲೋ ಆರ್ಯರೆಂದು ಬಿಂಬಿಸಲಾದ ಕಾಲ್ಪನಿಕ ಜನಾಂಗವೊಂದು ಸುಮಾರು 3500 ವರ್ಷಗಳ ಹಿಂದೆ ಕಂಚಿನ ಯುಗದ ಅಂತ್ಯಕಾಲದಲ್ಲಿ ಆರ್ಯರ ಮೂಲನೆಲೆಯೆಂದೇ ಈ ಹಿಂದೆ ನಂಬಲಾಗಿದ್ದ ಮಧ್ಯ ಏಷ್ಯಾದ ಹುಲ್ಲುಗಾವಲ ಭೂಭಾಗದಿಂದ ಭಾರತದತ್ತ ಕಬ್ಬಿಣದ ಹರಿತ ಆಯುಧ, ಕುದುರೆ ರಥಗಳ ಸಮೇತವಾಗಿ ಬಂದು ಇಲ್ಲಿನ ಹರಪ್ಪಾದ ಮೂಲ ನಿವಾಸಿಗಳಾದ ದ್ರಾವಿಡರನ್ನು ಸೋಲಿಸಿ ಅವರ ಸಾಮೂಹಿಕ ನರಮೇಧವನ್ನು ಮಾಡಿ, ಅಳಿದುಳಿದವರನ್ನು ವಿಂಧ್ಯ ಪರ್ವತದ ದಕ್ಷಿಣಕ್ಕೆ ಓಡಿಸಿದರೆಂಬ ಅಂದಿನ ಹಾಲಿವುಡ್ ಚಲನ ಚಿತ್ರಗಳ ಶೈಲಿಯ ನಿರಾಧಾರವಾದ ಆರ್ಯ ದ್ರಾವಿಡ ಸಿದ್ಧಾಂತ ವೆಂಬ ಕಟ್ಟುಕಥೆಯನ್ನು ಹೀಗೆ ವ್ಯವಸ್ಥಿತವಾಗಿ ಹುಟ್ಟು ಹಾಕಲಾಯಿತು. ಈ ಮೂಲಕ ತಮ್ಮ ವಸಾಹತುಶಾಹಿ ನೀತಿಗೆ ಪೂರಕವಾದ ಸೈದ್ಧಾಂತಿಕ ನೆಲೆಗಟ್ಟಿನ ನಿರ್ಮಾಣಕ್ಕಾಗಿ ಭಾರತೀ ಯರನ್ನು ತಮ್ಮ ಒಡೆದು ಆಳುವ ನೀತಿಯೆಂಬ ಶಾಶ್ವತ ಖೆಡ್ಡಾದಲ್ಲಿ ಮೊತ್ತಮೊದಲು ಬೀಳಿಸಿದರೆಂಬ ಗುಟ್ಟು ಈಗ ನಿರಕ್ಷರಕುಕ್ಷಿಗಳಿಗೂ ತಿಳಿದಿದೆ.
ಅಂದು ಭಾರತದಲ್ಲಿ ಅಪಾರ ಪ್ರಮಾಣದ ಜನಸಂಹಾರವು ನಡೆದ ಯಾವ ಕುರುಹುಗಳೂ ಉತ್ಖನನ ಗಳಲ್ಲಿ ಇದುವರೆಗೂ ದೊರೆತಿಲ್ಲ. ತೀವ್ರ ನೀರಿನ ಕೊರತೆ ಯಿದ್ದ ಆ ಜಾಗಕ್ಕೆ ಹೊರಗಿನಿಂದ ಬೃಹತ್ ಸಂಖ್ಯೆಯಲ್ಲಿ ಜನರು ಒಳವಲಸೆ ಬರುವುದನ್ನು ಸಾಮಾನ್ಯ ಜ್ಞಾನವಿರುವ ಯಾರೂ ನಂಬುವುದು ಕಷ್ಟ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯರ ಒಗ್ಗಟ್ಟಿನ ಪ್ರತಿರೋಧದಿಂದ ಬೆದರಿ ಹೋಗಿದ್ದ ಬಿಳಿದೊರೆಗಳಿಗೆ ಅವರೆಲ್ಲರೂ ಮತ್ತೊಮ್ಮೆ ಒಂದಾಗಿ
ಬಾಳುವುದು ಬೇಡವಾಗಿತ್ತು. ಹಾಗಾಗಿ ಆಂಗ್ಲರ ಪರಿಕಲ್ಪನೆಯಲ್ಲಿ ಭಾರತೀಯರೆಂದರೆ ಮೂಲತಃ ರಾಷ್ಟ್ರೀಯ ಪ್ರಜ್ಞೆಯೇ ಇಲ್ಲದ; ತಮ್ಮೊಳಗೆ ಅನೇಕ ಜಾತಿ, ಮತ, ಪಂಥಗಳಾಗಿ ಒಡೆದುಹೋಗಿ ಪರಸ್ಪರರ ಸದಾ ಕಚ್ಚಾಡುವ; ಮೂಢನಂಬಿಕೆಗಳೇ ಜೀವಾಳ ವಾಗಿರುವ ಅನಕ್ಷರಸ್ಥ ಅನಾಗರಿಕರ ಜನಸಮೂಹ.
ಆಂಗ್ಲರ ಪಾಲಿಗೆ ವೇದಗಳೆಂದರೆ ಕೇವಲ ಆರ್ಯ ಮೇಲ್ವರ್ಗದ (?) ಜನರು ದ್ರಾವಿಡ ಕೆಳವರ್ಗದವರನ್ನು ಸೀಯರನ್ನು ವ್ಯವಸ್ಥಿತವಾಗಿ ತುಳಿದು ಆಳಲು
ತಾವೇ ಮಾಡಿಕೊಂಡ ಶೋಷಕ ಪುರೋಹಿತಶಾಹಿ ಬೋಧನೆಗಳನ್ನೊಳಗೊಂಡ ಶುಷ್ಕ ಪದಗುಚ್ಛಗಳು. ಭಾರತಕ್ಕೆ ಕೃಷಿ, ವಿಜ್ಞಾನ ಹೀಗೆ ಶ್ರೇಷ್ಠವಾದುದೆಲ್ಲವೂ ಮಧ್ಯಪ್ರಾಚ್ಯದ (ಮಹಾಪ್ರಾಜ್ಞರ ನಾಡು) ಮೆಸಪಟೋಮಿಯಾದಿಂದಲೇಸ ಆಮದಾಯಿತೆಂದು ಸಾರಿ ಹೇಳಲಾಯಿತು. ಹೀಗೆ ಬೈಬಲ್ ಹೇಳುವ ಜಿಸೆಸ್ಸಿನ ಕಾಲಕ್ಕೆ ಸರಿ ಹೊಂದುವಂತೆ ಅದಕ್ಕೂ ಹಳೆಯದಾದುದು ಏನೂ ಇರಲಾ(ಬಾ) ರದೆಂಬ ಸ್ವಯಂಘೋಷಿತ ನೀತಿಯ ಕಾರಣದಿಂದ ಇಲ್ಲಿನ ಹರಪ್ಪಾದ
ಸಂಸ್ಕೃತಿಯನ್ನು ಕೇವಲ BCE 3500 ವರ್ಷಗಳಷ್ಟು ಹಿಂದಿನ ಕಾಲಕ್ಕೆ ಸೀಮಿತಗೊಳಿಸಿ (ಯಾವುದೇ ಮೌಲಿಕ ಆಧಾರವಿಲ್ಲದೇ) ಅಂದಾಜಿಸಲಾಯಿತು ಮತ್ತು ಅದನ್ನು ಪ್ರಶ್ನಾತೀತ ಪರಮಸತ್ಯವೆಂಬಂತೆ ಸ್ಥಾಪಿಸ ಲಾಯಿತು.
ಹೀಗೆ ಮೊದಲಾದ ನಾವು ನಂಬಿದ್ದು/ ಹೇಳಿದ್ದು ಮಾತ್ರವೇ ಸರಿಯೆನ್ನುವ ಪಾಶ್ಚಾತ್ಯರ ಈ ಅಹಮಿಕೆಯೇ, ಏಕೀಶ್ವರವಾದದ ಅಬ್ರಹಾಮಿಕ್ ಪಂಥಗಳ ಜಿಹಾದ್ ಕ್ರುಸೇಡ್ ಎಂಬ ಅನೇಕ ರೂಪ ಗಳಲ್ಲಿ ತದನಂತರ ವಿಶ್ವವನ್ನೇ ನಿರಂತರ ಧರ್ಮಯುದ್ಧ ಬಲಾತ್ಕಾರದ ಮತಾಂತರಗಳ ಹಿಂಬಾಗಿಲ ಕಬಳಿಸಿ ವಿಶ್ವಶಾಂತಿಗೆ ಭಂಗಿ ತಂದಿದ್ದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಇವರು ಹೇಳುವಂತೆ ಭಾರತ ದೇಶದ ಜನನವಾಗಿದ್ದು 1947 ಆಗಸ್ಟ್ 15 ರ ಮಧ್ಯರಾತ್ರಿ. ಅದೂ
ಬ್ರಿಟಿಷರ ಕಾಣ್ಕೆಯಿಂದ. ಎಂಥಾ ಹಸಿ ಸುಳ್ಳು…! ವೇದಗಳಿಂದ ಮೊದಲ್ಗೊಂಡು, ಕಲ್ಹಣನ ರಾಜತರಂಗಿಣಿಯವರೆಗೂ ಭಾರತದ ಅಖಂಡ ಚಿತ್ರಣವೇ ಸದಾ ನಮ್ಮೆದುರಿಗಿದ್ದಿದ್ದು ಇವರ ಕುರುಡು ಕಣ್ಣುಗಳಿಗೆ ಕಾಣುತ್ತಿಲ್ಲವೇ? ಹೀಗಾಗಿ ಈ ಆರ್ಯ – ದ್ರಾವಿಡ ವಾದವು ಸಮರ್ಥನೆಯ ಕೊರತೆಯಿಂದ ಸ್ವಯಂ ಬಿದ್ದು ಹೋಗುವ ಹಂತಕ್ಕೆ ಬಂದಾಗ ಮ್ಯಾಕ್ಸ್ ಮುಲ್ಲರ್ ತಕ್ಷಣಕ್ಕೇ ಚುರುಕಾದ.
ಆರ್ಯರ ಅಪಾರ ಜನಸಮೂಹವು ಭಾರತಕ್ಕೆ ಧುತ್ತನೇ ವಲಸೆ ಬಂದದ್ದಲ್ಲ, ಅದು ಅನೇಕ ವರ್ಷಗಳ ಕಾಲ ತಂಡೋಪತಂಡಗಳಾಗಿ ನಡೆದ ನಿರಂತರ ಸಾಮುದಾಯಿಕ ವಲಸೆಯೆಂದು ಆತ ಈಗ ನವುರಾಗಿ ತಿಪ್ಪೆ ಸಾರಿಸತೊಡಗಿದ. ಹೀಗೆ ತಿಪ್ಪರಲಾಗ ಹಾಕಿದರೂ ಕೂಡಾ ಇದಕ್ಕೆ ಪೂರಕವಾಗಿ ಕವಡೆಯಷ್ಟೂ
ಪುರಾವೆಯನ್ನು ಮಾತ್ರ ಆತನಿಗೆ ದಾಖಲಿಸಲು ಸಾಧ್ಯವಾಗದೇ ಹೋಯಿತು. ಆಂಗ್ಲರು ಹೇಳಿದ್ದನ್ನು ಅಂದು ಅಲ್ಲಗಳೆಯುವ ರಾಜಕೀಯ ಸಾಮರ್ಥ್ಯ ಇನ್ನಾರಿಗೂ ಇರಲಿಲ್ಲವಾಗಿ ಜಿಸ್ ಕೀ ಲಾಠೀ ಉಸ್ ಕೀ ಭೈಂಸ್ ಎಂಬಂತೆ ಅದು ಸ್ಥಾಪಿತ ಸತ್ಯವಾಯಿತಾದರೂ, ಇದನ್ನು ತದನಂತರದಲ್ಲಿ ಪಾಶ್ಚಾತ್ಯರೇ ನಂಬಲಿಲ್ಲ.
ಸ್ವಾತಂತ್ರ್ಯಾ ನಂತರ ನಮ್ಮ ವಿಶ್ವವಿದ್ಯಾಲಯ ಗಳಲ್ಲಿ ಕಾಯಂ ಝಾಂಡಾ ಹೊಡೆದು ಕೂತ ಎಡಪಂಥೀಯ ಗಂಜಿ ಗಿರಾಕಿಗಳು ಮಾತ್ರ ಇಂದಿಗೂ ಆಂಗ್ಲರು ಜಗಿದು ಉಗುಳಿದ್ದನ್ನೇ ಪರಮ ಮೃಷ್ಟಾನ್ನವೆಂದು ತ್ರಿಕರಣದಿಂದ ನಂಬಿಬಿಟ್ಟಿzರೆ. ಯಾವ ಅಪಪ್ರಚಾರವನ್ನು ಆಂಗ್ಲರು ಮಾಡಬಯಸಿದ್ದರೋ, ಅದನ್ನು ಈ ಸ್ಥಾಪಿತ ಹಿತಾಸಕ್ತಿಗಳು ಅವರನ್ನೇ ಒಂದು ಕೈ ಮೀರಿಸುವಂತೆ ಯಶಸ್ವಿಯಾಗಿ ಮಾಡಿದರು. ಇದರ ದೂರಗಾಮಿ ಪರಿಣಾಮ ವೇನಾಯಿತೆಂದರೆ ನಾವು ಕೀಳರಿಮೆಯ ಪ್ರಪಾತದಲ್ಲಿ ಜಾರಿಬಿzವು. ಭಾರತದ ಇತಿಹಾಸವೆಂದರೆ ಕೇವಲ ಸೋಲಿನ ಇತಿಹಾಸ.
ಶ್ರೇಷ್ಠ ವಾದುದ್ಯಾವುದೂ ನಮ್ಮದಾಗಿರಲಾರದೆಂಬ ಪೂರ್ವಾಗ್ರಹಕ್ಕೆ ನಾವು ಪೀಡಿತರಾದೆವು. ಪಾಶ್ಚಾತ್ಯರ ಶಂಖದಲ್ಲಿ ಬಂದಿzಲ್ಲವೂ ತೀರ್ಥವೆಂಬಂತೆ ಅವು ಗಳನ್ನು ಪುರಾವೆಯಿಲ್ಲದಿದ್ದರೂ ನಂಬುವ ಮೌಢ್ಯಕ್ಕೆ ಬಲಿಯಾದೆವು. ಪರದೇಶಿ ಮೊಘಲರು ನಮ್ಮವರಾದರು, ನಮ್ಮವರೇ ಆದ ಮರಾಠರು ಪರಭಾಷಿಕರಾದರು.
ಇದು ಎಂಥಾ ದುರಂತ! ಆಂಗ್ಲರು ಐರೋಪ್ಯ ಸಮಾಜದ ಕಳಂಕಗಳನ್ನು ಭಾರತೀಯರ ಮೇಲೆ ಆರೋಪಿಸಿ ಇಲ್ಲಿ ಜನಾಂಗೀಯ ವಾದಕ್ಕೆ ಕುಮ್ಮಕ್ಕು ನೀಡಿದರು.
ವಸಾಹತುಶಾಹಿಗಳ ಕಾಲ ಶೋಷಣೆಗಳಿಗೆ ಕೊಲೋನಿಯಲ್ ಜಸ್ಟಿಸ್ (ವೈಟ್ ಮ್ಯಾನ್ಸ್ ಬರ್ಡನ್) ಎಂಬ ಬಿಳಿ ಮುಸುಕು ಹಾಕಿ ಅದನ್ನು ಮುಚ್ಚಿಹಾಕಲಾಯಿತು. ಹೀಗೆ ಸರಸ್ವತೀ ನದಿಯ ಐತಿಹಾಸಿಕ ಅಸ್ತಿತ್ವವನ್ನೇ Myth (ಊಹಾಪೋಹ) ಎಂದು ಸುಳ್ಳು ಹೇಳಿ ನಮ್ಮನ್ನು ನಂಬಿಸಲಾಯಿತು.