ಅವಲೋಕನ
ಡಾ.ಅಮ್ಮಸಂದ್ರ ಸುರೇಶ್
sureshammasandrawriter@gmail.com
ಕ್ರೀಡಾ ಪತ್ರಕರ್ತರ ಪ್ರಾಮುಖ್ಯತೆಯನ್ನು ಪರಿಗಣಿಸಿ, ಕ್ರೀಡಾ ಪತ್ರಕರ್ತರ ಸೇವೆ ಮತ್ತು ಕ್ರೀಡೆಗಳಿಗೆ ಅವರು ನೀಡಿದ ಉತ್ತೇಜನ ಮತ್ತು ಅವರು ನೀಡಿದ ಕೊಡುಗೆಗಳನ್ನು ಕೊಂಡಾಡಲು ಪ್ರತಿ ವರ್ಷ ಜುಲೈ ೨ನ್ನು ವಿಶ್ವ ಕ್ರೀಡಾ ಪತ್ರಕರ್ತರ ದಿನವನ್ನಾಗಿ ಆಚರಿಸಲಾಗುತ್ತದೆ.
ಇದೊಂದು ಜಾಗತಿಕ ವೃತಿಪರ ಆಚರಣೆಯಾಗಿದೆ. ಸುದ್ದಿ ಮಾಧ್ಯಮಗಳ ವರದಿಗಾರಿಕೆಯಲ್ಲಿ ರಾಜಕೀಯ ವರದಿಗಾರಿಕೆ, ಕ್ರೀಡೆ, ಸಿನಿಮಾ, ಅಪರಾಧ, ಹೀಗೆ ವಿವಿಧ ಭಾಗಗಳಿವೆ. ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಪಟ್ಟಂತೆ ವರದಿ ಮಾಡಲು ನಿಪುಣ ವರದಿಗಾರರು ಇರುತ್ತಾರೆ. ಈ ಪೈಕಿ ಕ್ರೀಡೆ ಕೂಡ ಒಂದು. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಅಥವಾ ನ್ಯೂಸ್ ವೆಬ್ ಪೋರ್ಟಲ್ ಸೇರಿದಂತೆ ಮಾಧ್ಯಮ ಯಾವುದೇ ಇರಲಿ ಅದು ಕ್ರೀಡಾ ವರದಿಗಾರರಿಲ್ಲದೆ ಪರಿಪೂರ್ಣ ವಾಗುವುದಿಲ್ಲ. ಕ್ರೀಡೆಗಳು ವಿವಿಧ ದೇಶಗಳ ಜನರ ನಡುವೆ ಬೆಸುಗೆ ಹಾಕುತ್ತವೆ. ಕ್ರೀಡೆಗಳು ಮತ್ತು ಕ್ರೀಡಾಪಟು ಗಳ ಕುರಿತು ಜಗತ್ತಿನಾದ್ಯಂತ ಎಲ್ಲಾ ದೇಶ ಗಳಲ್ಲೂ ತುಂಬಾ ಆಸಕ್ತಿಯುಳ್ಳ ಜನ ಸಮೂಹವೇ ಇದೆ.
ಆಟಗಳು ಮತ್ತು ಆಟಗಾರರ ಕುರಿತು ವಿವಿಧ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಪ್ರಚುರ ಪಡಿಸುವುದೇ ಕ್ರೀಡಾ ಪತ್ರಕರ್ತರ ಕರ್ತವ್ಯವಾಗಿದೆ. ಕ್ರೀಡಾ ಪತ್ರಕರ್ತರು ಗಳಿಗೆ ಮಾಧ್ಯಮಗಳಲ್ಲಿ ವಿಶೇಷ ಸ್ಥಾನರುವ ಜೊತೆಗೆ ಕೆಲವು ವಿಶೇಷ ಸವಲತ್ತುಗಳು ಇರುತ್ತವೆ. ಇಂದು ಕೇವಲ ಮನರಂಜನೆ ಅಥವಾ ಕಾಲ ವ್ಯಯಕ್ಕಾಗಿಯಲ್ಲದೆ ಜಾಗತಿಕ ಶಾಂತಿಯೆಂಬ ಮಹತ್ವಪೂರ್ಣವಾದ ಕೆಲಸವನ್ನು ಕ್ರೀಡೆ ಮತ್ತು ಕ್ರೀಡಾ ವರದಿಗಾರರು ಮಾಡುವ ಜತೆಗೆ ಜಗತ್ತನ್ನು ವಾಸಿಸಲು
ಯೋಗ್ಯವಾದ ಸ್ಥಳವನ್ನಾಗಿ ಮಾರ್ಪಡಿಸುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಪ್ರಪಂಚ ದಾದ್ಯಂತ ಕೋಟ್ಯಂತರ ಕ್ರೀಡಾ ಅಭಿಮಾನಿ ಗಳು ವಿವಿಧ
ಪಂದ್ಯಗಳಿಗೆ ಸಂಬಂಽಸಿದಂತೆ ಮಾಹಿತಿಯನ್ನು ಸ್ವೀಕರಿಸಲು ಕಾತುರರಾಗಿರುತ್ತಾರೆ.
ಮುಖ್ಯವಾಗಿ ಆಟಗಳು, ತಂಡಗಳು, ಮತ್ತು ಅವರು ಪ್ರೀತಿಸುವ ಆಟಗಾರರ ಕುರಿತು ತಮ್ಮ ಅಭಿಪ್ರಾಯವನ್ನು ರೂಪಿಸುತ್ತಾರೆ. ಮೊದಲ ಬಾರಿಗೆ ಕ್ರೀಡಾ ಪತ್ರಕರ್ತರಿಗಾಗಿ ಸಂಘವನ್ನು ಜುಲೈ 2,1924ರಲ್ಲಿ ಪ್ಯಾರಿಸ್ನಲ್ಲಿ ನಡೆದ ಬೇಸಿಗೆ ಒಲಂಪಿಕ್ಸ್ ಪಂದ್ಯದ ವೇಳೆ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಅಸೋಸಿ ಯೇಷನ್ (ಎಐಪಿಎಸ್) ಎಂಬ ಹೆಸರಿನಿಂದ ಆರಂಭಿಸ ಲಾಯಿತು. ಎಐಪಿಎಸ್ ಇಂದು ಜಗತ್ತಿನಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಬೃಹತ್ ಕ್ರೀಡಾ ಸಂಸ್ಥೆ ಗಳಾದ ಒಲಂಪಿಕ್ ಕಮಿಟಿ(ಐಓಸಿ), ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ಎಐಪಿಎಸ್ನ ಪಾಲುದಾರರಾಗಿವೆ. ವಿಶ್ವದಾದ್ಯಂತ ಕ್ರೀಡಾ ವರದಿಗಾರರು ಮತ್ತು ಅಂಕಣಕಾರರಲ್ಲಿ ಬಾಂಧವ್ಯ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಬಲಪಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತದೆ.
ಎಐಪಿಎಸ್ ತನ್ನ 70ನೇ ವಾರ್ಷಿಕೋತ್ಸವದ ನೆನಪಿಗಾಗಿ 1994ರಲ್ಲಿ ಪ್ರಥಮ ಬಾರಿಗೆ ಕ್ರೀಡಾ ಪತ್ರಕರ್ತರ ದಿನವನ್ನು ಆಚರಿಸಿತು. ಅಂದಿನಿಂದ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಕ್ರೀಡಾ ಪತ್ರಕರ್ತರು ವಿವಿಧ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವ ಮೂಲಕ ಕ್ರೀಡಾ ಪ್ರೇಮಿಗಳ ದಾಹವನ್ನು ತಣಿಸುವ ಕೆಲಸವನ್ನು ಮಾಡುತ್ತಾರೆ. ಇಂದು ಕ್ರೀಡೆಗಳು ಜಾಗತಿಕವಾಗಿ
ವ್ಯವಹಾರಿಕವಾಗಿ ಮಾರ್ಪಾಟಾಗಿವೆ.
ಪ್ರಾಯೋಜಕತ್ವದೊಂದಿಗೆ ಒಲಂಪಿಕ್ ಕ್ರೀಡೆಗಳು, ವಿಶ್ವಕಪ್ -ಟ್ಬಾಲ್, ಮತ್ತು ವರ್ಲ್ಡ್ ಕಪ್ ಕ್ರಿಕೆಟ್ ಸೇರಿದಂತೆ ಕ್ರೀಡಾಕೂಟಗಳು ಭಾರೀ ಮೊತ್ತದ ಹಣದ
ವ್ಯವಹಾರಗಳನ್ನು ಒಳಗೊಂಡಿವೆ. ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರೇಮಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಕ್ರೀಡಾ ವರದಿಗಾರರು ಕ್ರೀಡೆಯ ಪ್ರೋತ್ಸಾಹಕರೂ ಆಗಿದ್ದಾರೆ. ಕ್ರೀಡೆಗಳನ್ನು ಮಾಧ್ಯಮಗಳಲ್ಲಿ ಹೊಸ ಮಟ್ಟಕ್ಕೆ ಕೊಂಡೊಯ್ಯಲು ಕ್ರೀಡಾ ಪತ್ರಕರ್ತರು ವಹಿಸುವ ಪಾತ್ರವನ್ನು ವಿಶ್ವ ಕ್ರೀಡಾ
ಪತ್ರಕರ್ತರ ದಿನದಂದು ಸ್ಮರಿಸಲಾಗುತ್ತದೆ. ಕ್ರೀಡಾ ಪತ್ರಕರ್ತರ ಸಾಧನೆಗಳನ್ನೂ ಕೂಡ ಗುರುತಿಸುವ ಕೆಲಸವನ್ನು ಈ ದಿನದಂದು ವಿಶೇಷವಾಗಿ ಮಾಡಲಾ ಗುತ್ತದೆ ಮತ್ತು ಅವರು ತಮ್ಮ ವೃತ್ತಿಯನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಲು ಪ್ರೋತ್ಸಾಹಿಸಲು ಈ ದಿನ ಸಹಕರಿಸುತ್ತದೆ.
ಇಂದು ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳಲ್ಲೂ ಕ್ರೀಡಾ ಪತ್ರಕರ್ತರ ಸಂಘಗಳಿವೆ. ಇವುಗಳು ಕ್ರೀಡಾ ಪತ್ರಿಕೋದ್ಯಮದ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿವೆ. ಭಾರತದಲ್ಲಿ ಕ್ರೀಡಾ ಪತ್ರಕರ್ತರ ಸಂಘವು ಫೆಬ್ರವರಿ 27, 1976ರಂದು ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಜೆಎಫ್ಐ) ಎಂಬ ಹೆಸರಿನಿಂದ ಆರಂಭವಾಯಿತು. ಕರ್ನಾಟಕದಲ್ಲಿ ಕ್ರೀಡಾ ಪತ್ರಕರ್ತರಿಗಾಗಿ ಸ್ಪೋರ್ಟ್ಸ್ ರೈಟರ್ಸ್ ಅಸೋಸಿಯೇಷನ್ ಆಫ್ ಬೆಂಗಳೂರು (ಎಸ್ ಡಬ್ಲುಎಬಿ) 1974ರಲ್ಲಿ ಆರಂಭವಾಯಿತು.
ಸಮಕಾಲೀನ ಸಮಯದಲ್ಲಿ ಕ್ರೀಡೆಗಳು ಪ್ರತಿ ಮಾಧ್ಯಮ ಸಂಸ್ಥೆಗಳಿಗೆ ಅತ್ಯಗತ್ಯವಾಗಿವೆ. ಮುಖ್ಯವಾಹಿನಿ ಪತ್ರಿಕೆಗಳಿರಲಿ, ಪ್ರಾದೇಶಿಕ ಪತ್ರಿಕೆಗಳಾಗಿರಲಿ, ನಿಯತಕಾಲಿಕೆಗಳಿರಲಿ, ವಿದ್ಯುನ್ಮಾನ ಮಾಧ್ಯಮಗಳಾಗಲೀ ಕ್ರೀಡಾ ಸುದ್ದಿಗಳನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಕ್ರೀಡಾ ಸುದ್ದಿಗಳಿಗೆ ಭಾರೀ ಬೇಡಿಕೆ ಇದ್ದು. ಕ್ರೀಡೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಹಾತೊರೆಯುವ ದೊಡ್ಡ ಓದುಗ ಮತ್ತು ನೋಡುಗ ಸಮೂಹವೇ ಇದೆ. ಪತ್ರಿಕೆಗಳ ಪ್ರಸರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಟಿಆರ್ಪಿಯ ಮೇಲೆ ಕ್ರೀಡಾ ವರದಿಗಳು ಮಹತ್ವವಾದ ಪಾತ್ರವನ್ನು ವಹಿಸುತ್ತವೆ.
ಕ್ರೀಡೆಗಳು ಪ್ರತಿಯೊಬ್ಬರ ಜೀವನದ ಮಹತ್ವಪೂರ್ಣ ಭಾಗಗಳಲ್ಲಿ ಒಂದಾಗಿದೆ. ಅನೇಕ ಶತಮಾನಗಳಿಂದ ಕ್ರೀಡೆಯೂ ನಗರಗಳನ್ನು ಮಾತ್ರವಲ್ಲದೆ ರಾಜ್ಯಗಳು,
ರಾಷ್ಟ್ರಗಳನ್ನು ಮತ್ತು ಖಂಡಗಳನ್ನು ಒಂದುಗೂಡಿಸುವಲ್ಲಿ ಶ್ರಮಿಸಿವೆ. ಒಲಂಪಿಕ್ ಕ್ರೀಡೆಗಳು ಯುದ್ಧಗಳ ಕಾರ್ಮೋಡದ ಮೇಲೆ ಶಾಂತಿಯ ಸವಿಗಾಳಿಯನ್ನು
ತಂದವು ಎಂಬುದನ್ನು ಮರೆಯಬಾರದು. ಕ್ರೀಡಾ ಪತ್ರಿಕೋದ್ಯಮದ ಇತಿಹಾಸವನ್ನು ಗಮನಿಸಿದಾಗ, ಕ್ರೀಡೆಗಾಗಿಯೇ ಮೀಸಲಾದ ಮೊದಲ ಕ್ರೀಡಾ ನಿಯತ ಕಾಲಿಕೆ ಶೇವರ್ದನಿ (-ಲ್ಕಾನ್) 1918ರಲ್ಲಿ ಜಾರ್ಜಿಯಾದಲ್ಲಿ ಆರಂಭವಾಯಿತು.
ತದನಂತರ 1934ರಲ್ಲಿ ಸ್ಪೋರ್ಟ್ಸ್ ಪೇಪರ್ -ಸ್ಟ್ ಅಥ್ಲಿಟ್ ಹೊರಬಂತು. ಇದನ್ನು 1949ರಲ್ಲಿ ಲೆಲೋ ಎಂದು ಮರು ನಾಮಕರಣ ಮಾಡಲಾಯಿತು. ಮತ್ತು
ಈ ನಿಯತಕಾಲಿಕೆ ಇಂದಿಗೂ ಪ್ರಕಟವಾಗುತ್ತಿರುವುದು ಕ್ರೀಡಾ ಪತ್ರಿಕೋದ್ಯಮದ ಮಹತ್ವವನ್ನು ತಿಳಿಸುತ್ತದೆ. 1908ರಲ್ಲಿ ಲಂಡನ್ನಲ್ಲಿ ನಡೆದ ಒಲಂಪಿಕ್
ಕ್ರೀಡಾಕೂಟದ ವರದಿಗಾಗಿ ಮೊದಲ ಬಾರಿಗೆ ಅನೇಕ ಪತ್ರಿಕೆಗಳು ತಮ್ಮ ಕ್ರೀಡಾ ವರದಿಗಾರ ರನ್ನು ನಿಯೋಜಿಸಿದವು.
ಭಾರತದಲ್ಲಿ ಕ್ರೀಡಾ ಪತ್ರಿಕೋದ್ಯಮದ ಇತಿಹಾಸವನ್ನು ನೋಡುವುದಾದರೆ ಸ್ವಾತಂತ್ರ್ಯಾ ನಂತರದ ಆರಂಭಿಕ ವರ್ಷಗಳಲ್ಲಿ ಗ್ರಹಿಸಬಹುದಾದ ರೀತಿಯಲ್ಲಿ
ಕ್ರೀಡಾ ಪತ್ರಿಕೋದ್ಯಮ ಅಭಿವೃದ್ಧಿ ಗೊಂಡಿತು. ಅದಕ್ಕೂ ಮೊದಲ ಯಾವುದೇ ಕ್ರೀಡೆಗೆ ಮೀಸಲಾದ ನಿಯತಕಾಲಿಕವಾಗಲೀ ಅಥವಾ ಮುಖ್ಯವಾಹಿನಿ
ಪತ್ರಿಕೆಗಳಲ್ಲಿ ಕ್ರೀಡೆಗೆ ಮೀಸಲಾದ ಪುಟಗಳಾಗಲಿ ಗುರುತರವಾದ ರೀತಿಯಲ್ಲಿ ಕಂಡಬರಲಿಲ್ಲ. 1930ರಲ್ಲಿ ಬಾಂಬೆಯ ಇಂಗ್ಲೀಷ್ ಪತ್ರಿಕೆಯೊಂದು ಮೊದಲ
ಬಾರಿಗೆ ಪ್ರತ್ಯೇಕವಾದ ಕ್ರೀಡಾ ಪುಟವನ್ನು ಪ್ರಕಟಿಸಲು ಆರಂಭಿಸಿತು. ಇದು ಭಾರತೀಯ ಕ್ರೀಡಾ ಪತ್ರಿಕೋದ್ಯಮದ ಬೆಳವಣಿಗೆಗೆ ವೇಗವರ್ಧಕವಾಯಿತು.
ದೆಹಲಿಯಲ್ಲಿ 1951ರಂದು ನಡೆದ ಏಷ್ಯನ್ ಗೇಮ್ಸ್ನ ನಂತರ ಭಾರತದ ಬಹುತೇಕ ಎಲ್ಲಾ ಮುಖ್ಯವಾಹಿನಿ ಪತ್ರಿಕೆಗಳು ಕ್ರೀಡೆಗಳ ಸುದ್ದಿಗಾಗಿ ಪ್ರತ್ಯೇಕ ಪುಟವನ್ನು ಮೀಸಲಿಡಲು ಆರಂಭಿಸಿದವು. 1982ರ ಏಷ್ಯನ್ ಗೇಮ್ಸ್ ಮತ್ತು 1983ರ ವರ್ಲ್ಡ್ ಕಪ್ ಕ್ರಿಕೇಟ್ನಲ್ಲಿ ಭಾರತ ಜಯಗಳಿಸಿದ ನಂತರ ಕ್ರೀಡಾ
ಸುದ್ದಿಗಳು ಭಾರತೀಯ ಪತ್ರಿಕೆಗಳ ಮುಖಪುಟವನ್ನು ಕೂಡ ಆವರಿಸಿದವು. ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಮತ್ತು ಇಎಸ್ಪಿಎನ್ಗಿಂತ ಮುಂಚೆಯೇ ಕ್ರೀಡಾ
ಪತ್ರಿಕೋದ್ಯಮದ ಬೇರುಗಳು ಬೆಳವಣಿಗೆ ಹೊಂದಿದ್ದವು. ಪ್ರಸ್ತುತ ಕ್ರೀಡೆಗಾಗಿಯೇ ಮೀಸಲಾದ ನಿಯತಕಾಲಿಕೆ ಗಳು ಮತ್ತು ಟಿವಿ ವಾಹಿನಿಗಳು
ಚಾಲ್ತಿ ಯಲ್ಲಿದ್ದರೂ ಭಾರತೀಯ ಭಾಷೆಗಳಲ್ಲಿ ಕ್ರೀಡಾ ನಿಯತಕಾಲಿಕೆಗಳು ಸಾಕಷ್ಟು ಇಲ್ಲ ಎಂಬ ಕೊರತೆ ಇಂದಿಗೂ ಇದೆ.
ಕಳೆದ ಎರಡು ದಶಕಗಳಿಂದೀಚೆಗೆ ಸಂವಹನ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಾದವು. ಈ ಪ್ರಗತಿಯ ಫಲವಾಗಿ ಪತ್ರಿಕೆಗಳು ಬಹುವರ್ಣ ಗಳಲ್ಲಿ
ಮೂಡಿಬರಲು ಆರಂಭವಾದವು. ದೂರದರ್ಶನ, ರೇಡಿಯೋ ಮತ್ತು ಟಿವಿ ವಾಹಿನಿಗಳು ಕ್ರೀಡಾ ಕಾರ್ಯಕ್ರಮಗಳನ್ನು ಮತ್ತಷ್ಟು ಅತ್ಯಾಧುನಿಕ ವಾಗಿ ಪ್ರಸಾರ ಮಾಡಲು ಆರಂಭಿಸಿದವು. ಈ ಬೆಳವಣಿಗೆಗಳು ಕ್ರೀಡಾ ಸುದ್ದಿಗಳಿಗೆ ಮತ್ತಷ್ಟು ವ್ಯಾಪಕತೆ ಯನ್ನು ಮತ್ತು ಆಕರ್ಷಣೆಯನ್ನು ತಂದುಕೊಟ್ಟವು. ಮತ್ತು ನೈಜ
ಪ್ರಸಾರಕ್ಕೆ ಅನುವು ಮಾಡಿಕೊಟ್ಟವು. ಪ್ರಪಂಚದ ಯಾವುದೋ ಮೂಲೆ ಯಲ್ಲಿ ನಡೆಯುವ ಪಂದ್ಯವನ್ನು ನಮ್ಮ ಮನೆಯಂಗಳಕ್ಕೆ ನೇರವಾಗಿ ತರುವ
ಸೌಲಭ್ಯವನ್ನು ಅಂತರ್ಜಾಲ ಮತ್ತು ಉಪಗ್ರಹ ಸಂವಹನ ದಲ್ಲಾದ ಪ್ರಗತಿಯೂ ಒದಗಿಸಿದೆ.
ಇವೆಲ್ಲವುಗಳ ಪರಿಣಾಮವಾಗಿ ಕ್ರೀಡಾ ಪತ್ರಿಕೋದ್ಯಮದ ವ್ಯಾಪ್ತಿ ಮತ್ತು ಕ್ರೀಡಾ ಪತ್ರಕರ್ತರ ಮಹತ್ವ ಕ್ರಮೇಣ ಹೆಚ್ಚುತ್ತಿದೆ. ಸಮೂಹ ಮಾಧ್ಯಮಗಳಾದ ಪತ್ರಿಕೆಗಳು, ರೇಡಿಯೋ ಮತ್ತು ಟಿವಿಗಳ ಜತೆಗೆ ಇಂದು ಅಂತರ್ ಜಾಲವು ಕ್ರೀಡಾ ಪತ್ರಿಕೋದ್ಯಮದ ಪ್ರಮುಖ ಭಾಗವಾಗಿದೆ. ಸುಲಭವಾಗಿ ಮತ್ತು ಕಡಿಮೆ ಬೆಲೆಗೆ ಸಿಗುತ್ತಿರುವ ಡಾಟಾ ಲಭ್ಯತೆಯ ಪರಿಣಾಮವಾಗಿ ಇಂದು ಬೃಹದಾಕಾರವಾಗಿ ವ್ಯಾಪಿಸಿರುವ ಸಾಮಾಜಿಕ ಮಾಧ್ಯಮಗಳೂ ಕೂಡ ಕ್ರೀಡೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಕ್ರೀಡಾ ಪ್ರಿಯರಿಗೆ ತಲುಪಿಸುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಿವೆ.
ಕಾರ್ಯನಿರತ ಕ್ರೀಡಾ ಪತ್ರಕರ್ತರು ಇಂದು ವಿಶಿಷ್ಠವಾದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದೆಂದರೆ ಇತ್ತೀಚಿನ ವರ್ಷಗಳಲ್ಲಿ ಅನೇಕ ಪ್ರಸಿದ್ಧ ಕ್ರೀಡಾಪಟು ಗಳು ಮತ್ತು ರಾಷ್ಟ್ರೀಯ ಕ್ರೀಡಾಪಟು ಗಳು ಈ ಕ್ಷೇತ್ರಕ್ಕೆ ನುಸುಳುತ್ತಿದ್ದಾರೆ. ಪತ್ರಿಕೆಗಳೂ ಕೂಡ ಸುಪ್ರಸಿದ್ಧ ಆಟಗಾರನ ಬೈಲೈನ್ನ ಲಾಭ ಪಡೆಯಲು
ಪರಸ್ಪರ ಪೈಪೋಟಿ ನಡೆಸುತ್ತಿವೆ. ನಿವೃತ್ತಿ ಪಡೆದ ಕ್ರೀಡಾಪಟುಗಳು ಪತ್ರಿಕೋದ್ಯಮಕ್ಕೆ ಈಗಾಗಲೇ ತಿರುಗಿದ್ದಾರೆ. ಉದಾಹರಣೆಗೆ ಅರ್ಧ ಡಜನ್ಗೂ ಹೆಚ್ಚು
ಮಾಜಿ ಕ್ರಿಕೇಟಿಗರು ಪತ್ರಿಕೆಗಳೂ ಸೇರಿದಂತೆ ಎಲ್ಲಾ ಮಾಧ್ಯಮಗಳನ್ನೂ ಆವರಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಪತ್ರಿಕೆಗಳಲ್ಲಿ ಇವರ ಬೈಲೈನ್ನಲ್ಲಿ
ಬರುವ ವರದಿಗಳು ಮತ್ತು ಅಂಕಣಗಳು ಓದುಗರನ್ನು ಆಕರ್ಷಿಸುತ್ತವೆ.
ವಿವಿಧ ಭಾರತೀಯ ಪತ್ರಿಕೆಗಳು ಇಂದು ಕ್ರೀಡಾ ಅಂಕಣ ಗಳನ್ನು ಪ್ರಕಟಿಸುತ್ತಿವೆ. ಈ ಅಂಕಣಗಳು ಹೆಚ್ಚು ಜನಪ್ರಿಯ ಕೂಡ ಆಗಿರುವ ಜತೆಗೆ ತನ್ನದೇ ಆದ ಓದುಗ ಸಮೂಹವನ್ನು ಹೊಂದಿವೆ. ಕೋವಿಡ್-19ರ ಮೊದಲ ಅಲೆಯ ಕಾರಣ ದಿಂದಾಗಿ ಕಳೆದ ವರ್ಷ ವಿಶ್ವ ಕ್ರೀಡಾ ಪತ್ರಕರ್ತರ ದಿನವನ್ನು ವಿಶ್ವದಾದ್ಯಂತ ಕ್ರೀಡಾ ಪತ್ರಕರ್ತರೊಂದಿಗೆ ಮೊದಲ ಬಾರಿಗೆ ಇ-ಕಾನ್ಪರೆನ್ಸ್ ಮೂಲಕ ಆಚರಿಸಿತು. ಕೋವಿಡ್-19 ಪತ್ರಕರ್ತರ ಸ್ವಾತಂತ್ರ್ಯ ಮತ್ತು ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬ ವಿಷಯದ ಮೇಲೆ ಸಾಕಷ್ಟು ಚರ್ಚೆಗಳು ಈ ವರ್ಚುಯಲ್ ಮೀಟಿಂಗ್ನಲ್ಲಿ ನಡೆದವು. ಸಮಯ ವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ಕ್ರೀಡಾ ವರದಿಗಾರರ ವೃತ್ತಿಪರತೆ ನಿಜಕ್ಕೂ ಶ್ಲಾಘನಾರ್ಹ.