Friday, 22nd November 2024

ಬಿಜೆಪಿ ಸರಕಾರದ 100 ದಿನದ ಸಾಧನೆ ಶೂನ್ಯ

ಪ್ರೆೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು.

 

ಮಾಧ್ಯಮ ಸಂವಾದದಲ್ಲಿ ಸಿದ್ದರಾಮಯ್ಯ ಟೀಕೆ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆೆಸ್‌ಗೆ ಗೆಲುವು ಖಚಿತ

ಬಿಜೆಪಿ ಸರಕಾರ ಒಂದೆಡೆ ಶತದಿನವನ್ನು ಪೂರೈಸಿ, ಸರಕಾರದ ಜನಪರ ಯೋಜನೆಗಳ ಬಗ್ಗೆೆ ಜನರಿಗೆ ತಿಳಿಸುವ ಪ್ರಯತ್ನದಲ್ಲಿದ್ದರೆ, ಇತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಬಿಜೆಪಿ ಶತದಿನದ ಸಾಧನೆ ಶೂನ್ಯ’ ಎಂದು ಟೀಕಿಸಿದ್ದಾಾರೆ.
ಪ್ರೆೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ರಾಜ್ಯ ಸರಕಾರದ ನಡೆಯ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಯಡಿಯೂರಪ್ಪನವರ ಸರಕಾರ ಆಡಳಿತಾತ್ಮಕ ವೈಫಲ್ಯ ಅನುಭವಿಸಿದೆ. ಅಧಿಕಾರಿಗಳ ವರ್ಗಾವಣೆ ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ನೂರು ದಿನ ಪೂರೈಸುತ್ತಿಿರುವ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪರೀಕ್ಷೆಗಳಲ್ಲಿ ಉತ್ತರಗಳನ್ನೇ ಬರೆದಿಲ್ಲ. ಹೀಗಾಗಿ ಅವರಿಗೆ ಯಾವುದೇ ಅಂಕ ನೀಡುವ ಅಗತ್ಯವಿಲ್ಲ. ಸರಕಾರ ಅಸ್ಥಿಿತ್ವಕ್ಕೆೆ ಬಂದಿರುವುದೇ ವಾಮಮಾರ್ಗದಲ್ಲಿ. 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆೆ ಬಹುಮತ ಬಂದಿರಲಿಲ್ಲ. ಬಿಜೆಪಿಗೆ 104, ಕಾಂಗ್ರೆೆಸ್ 80 ಹಾಗೂ ಜೆಡಿಎಸ್ 38, ಇಬ್ಬರು ಪಕ್ಷೇತರರು ಗೆದ್ದಿದ್ದರು. ಬಿಜೆಪಿ ಅತಿದೊಡ್ಡ ಪಕ್ಷ ಎಂಬ ಕಾರಣಕ್ಕಾಾಗಿ ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ಕೊಟ್ಟಿಿದ್ದರು. ಬಹುಮತ ಸಾಬೀತು ಮಾಡಲು ಯಡಿಯೂರಪ್ಪ ಅವರ ಕೈಯಲ್ಲಿ ಆಗಲಿಲ್ಲ. ಮೂರು ದಿನದಲ್ಲೇ ಸಿಎಂ ಸ್ಥಾಾನಕ್ಕೆೆ ರಾಜೀನಾಮೆ ಕೊಟ್ಟರು ಎಂದು ಟೀಕಿಸಿದರು.

ಉಪ ಚುನಾವಣೆಯಲ್ಲಿ ಕನಿಷ್ಠ ಎಂಟು ಸ್ಥಾಾನ ಗೆಲ್ಲದಿದ್ದರೆ ಬಿಜೆಪಿಗೆ ಬಹುಮತ ಸಿಗುವುದಿಲ್ಲ. ಸರಕಾರ ಅಲ್ಪಮತಕ್ಕೆೆ ಕುಸಿದು ಅತಂತ್ರ ಸ್ಥಿಿತಿ ನಿರ್ಮಾಣವಾಗಲಿದೆ. ಆಗ ಯಡಿಯೂರಪ್ಪ ರಾಜೀನಾಮೆ ನೀಡಬೇಕು. ಮತ್ತೆೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನುವ ಮಾತನ್ನು ಹೇಳುತ್ತಿಿದ್ದೇನೆ. ಆದರೆ ಇದಕ್ಕೆೆ ಬೇರೆ ರೀತಿಯ ವ್ಯಾಾಖ್ಯಾಾನ ನೀಡುತ್ತಿಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದವರನ್ನು ಮಹಾರಾಷ್ಟ್ರ ಉಪಚುನಾವಣೆಯಲ್ಲಿ ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲೂ ಅನರ್ಹ ಶಾಸಕರು ಮತ್ತೆೆ ಗೆಲ್ಲುವುದಿಲ್ಲ. ಜನ ತಕ್ಕ ಪಾಠ ಕಲಿಸುತ್ತಾಾರೆ. ಕಾಂಗ್ರೆೆಸ್ ಹೆಚ್ಚು ಸ್ಥಾಾನಗಳನ್ನು ಗೆಲ್ಲುತ್ತದೆ. ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಷಯ ಆಧಾರಿತವಾಗಿ ನಡೆದರೆ, ವಿಧಾನಸಭೆ ಚುನಾವಣೆ ಸ್ಥಳೀಯ ವಿಷಯಗಳನ್ನು ಆಧರಿಸಿ ನಡೆಯಲಿವೆ ಎಂದರು.

ಜನರ ಕಣ್ಣೀರು ಒರೆಸುವ ಕೆಲಸವಾಗಿಲ್ಲ:
ನೆರೆ ಸಂತ್ರಸ್ತರ ಕಣ್ಣೊೊರೆಸುವ ಕೆಲಸವನ್ನು ಯಡಿಯೂರಪ್ಪ ಸರಕಾರ ಮಾಡಿಲ್ಲ. ಜನರಿಗೆ ಸುಳ್ಳು ಮಾಹಿತಿಗಳನ್ನು ಹೇಳಿ ದಾರಿ ತಪ್ಪಿಿಸುತ್ತಿಿದ್ದಾರೆ. ಸುಮಾರು 2.42 ಲಕ್ಷ ಮನೆಗಳು ಬಿದ್ದು ಹೋಗಿವೆ. ಆದರೆ ಸರಕಾರಿ ಜಾಹೀರಾತಿನಲ್ಲಿ 97 ಸಾವಿರ ಮನೆಗಳು ಮಾತ್ರ ಬಿದ್ದಿವೆ ಎಂದು ತಿಳಿಸಿದ್ದಾರೆ. ಸಂತ್ರಸ್ತರ ತಾತ್ಕಾಾಲಿಕ ವಸತಿಗಾಗಿ ನಿರ್ಮಿಸಿರುವ ಶೆಡ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯಗಳು ಸೇರಿ ಯಾವುದೇ ಮೂಲ ಸೌಲಭ್ಯಗಳು ಇಲ್ಲ. ನಾನು 40 ವರ್ಷ ರಾಜಕಾರಣ ಮಾಡಿ ವಿವಿಧ ಹುದ್ದೆಗಳನ್ನು ಅನುಭವಿಸಿದ್ದೇನೆ. ಬೇಜವಾಬ್ದಾಾರಿಯಾಗಿ ಮಾತನಾಡುವ ರಾಜಕಾರಣಿಯಲ್ಲ. ಸರಕಾರ ಕೇಂದ್ರಕ್ಕೆೆ ನೀಡಿರುವ ವರದಿಯ ಅಂಕಿ ಅಂಶಗಳೇ ಬೇರೆ, ಜಾಹೀರಾತಿನಲ್ಲಿ ಪ್ರಕಟಿಸಿರುವ ವರದಿಯೇ ಬೇರೆ. ಅವರು ಸುಳ್ಳು ಹೇಳುತ್ತಿಿದ್ದಾರೆ ಎಂದು ತಿರುಗೇಟು ನೀಡಿದರು.

ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಪ್ರಾಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ದೇಶ ಹಾಗೂ ರಾಜ್ಯದ ರೈತರು ಬೀದಿ ಪಾಲಾಗಲಿದ್ದಾರೆ. ಹೈನುಗಾರಿಕೆ ನಾಶವಾಗಲಿದೆ. ಇದರಿಂದ ರೈತರು ಆತಂಕ, ಗೊಂದಲದಲ್ಲಿದ್ದಾರೆ. ಕೇಂದ್ರ ಸರಕಾರದ ಕಾರ್ಯಕ್ರಮವೇ ಆಗಿದ್ದರೂ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮಂತ್ರಿಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟು ಸ್ಪಷ್ಟನೆ ಕೊಡಿಸುವ ಜವಾಬ್ದಾಾರಿಯುತ ಕೆಲಸ ಮಾಡಬೇಕಿತ್ತು. ನಾಡಿನಾದ್ಯಂತ ರೈತರು ಬೀದಿಗಿಳಿದಿದ್ದಾರೆ. ಬಿಜೆಪಿ ಸರಕಾರ ತನಗೂ ಅದಕ್ಕೂ ಸಂಬಂಧವಿಲ್ಲದಂತಿದೆ ಎಂದು ಕಿಡಿಕಾರಿದರು.

ಡಿಕೆಶಿ ನನ್ನ ಮಧ್ಯೆೆ ಭಿನ್ನಾಭಿಪ್ರಾಯವಿಲ್ಲ
ಉಪಚುನಾವಣೆ ಟಿಕೆಟ್ ಹಂಚಿಕೆ ಸೇರಿದಂತೆ ಯಾವುದೇ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಭಿನ್ನಾಾಭಿಪ್ರಾಾಯಗಳಿಲ್ಲ. ಅಭಿಪ್ರಾಾಯಗಳು ಬೇರೆ ಬೇರೆ ಇರಬಹುದು. ಆದರೆ, ಅವು ಭಿನ್ನಾಾಭಿಪ್ರಾಾಯಗಳಲ್ಲ. ಕಾಂಗ್ರೆೆಸ್ ಪಕ್ಷದಲ್ಲಿ ಯಾರ ನಡುವೆಯೂ ಭಿನ್ನಾಾಭಿಪ್ರಾಾಯಗಳಿಲ್ಲ. ಎಲ್ಲರೂ ಒಟ್ಟಾಾಗಿದ್ದೇವೆ. ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಇತಿಹಾಸ ತಿರುಚಲು ಬಿಜೆಪಿ ಯತ್ನ

ಟಿಪ್ಪುು ಸುಲ್ತಾಾನ್ ವಿಷಯದಲ್ಲಿ ಬಿಜೆಪಿ ನಾಯಕರು ದ್ವಂದ್ವ ನೀತಿ ಅನುಸರಿಸುತ್ತಿಿದ್ದಾರೆ. ಈ ಮೊದಲೆಲ್ಲಾ ಟಿಪ್ಪುುಸುಲ್ತಾಾನ್ ದೇಶ ಭಕ್ತ, ಮೈಸೂರು ಹುಲಿ ಎಂದು ಹೊಗಳಿದ್ದಾಾರೆ. ಆರ್‌ಅಶೋಶ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತಿಿತರರು ಟಿಪ್ಪುು ಟೋಪಿ ಹಾಕಿಕೊಂಡು ಫೋಸ್ ಕೊಟ್ಟಿಿದ್ದರು. ಯಡಿಯೂರಪ್ಪನವರು ನಾನೇ ಟಿಪ್ಪುು ಎಂದು ಹೇಳಿಕೆ ಕೊಟ್ಟಿಿದ್ದರು. ಆದರೆ, ಈಗ ಉಪ ಚುನಾವಣೆ ಸಂದರ್ಭದಲ್ಲಿ ರಾಜಕಾರಣಕ್ಕಾಾಗಿ ಟಿಪ್ಪುುವನ್ನು ಮತಾಂಧ ಎಂದು ಟೀಕಿಸುತ್ತಿಿದ್ದಾರೆ. ಇತಿಹಾಸ ತಿರುಚುವುದರಲ್ಲಿ ಬಿಜೆಪಿಯವರು ನಿಪುಣರು ಎಂದು ಸಿದ್ದರಾಮಯ್ಯ ವಾಗ್ದಾಾಳಿ ನಡೆಸಿದರು.

ಮತ ಗಳಿಗೆಯಲ್ಲಿ ಕಾಂಗ್ರೆೆಸ್ ಮುಂದೆ
ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣದಲ್ಲಿ ಬಿಜೆಪಿಗಿಂತ ಕಾಂಗ್ರೆೆಸ್ ಶೇ.1.8ರಷ್ಟು ಮುಂದಿದೆ. ನಾವು 38.14ರಷ್ಟು ಮತ ಪಡೆದರೆ, ಬಿಜೆಪಿ 36.34ರಷ್ಟು ಮತ ಪಡೆದಿದೆ. ಅವರಿಗೆ ಜನಾದೇಶವಿಲ್ಲ. ಹಾಗಾಗಿ ಜೆಡಿಎಸ್ ಜತೆ ಸೇರಿ ಮೈತ್ರಿಿ ಸರಕಾರ ರಚಿಸಿದ್ದೆವು. ಸರಕಾರ ರಚಿಸಿದ ದಿನದಿಂದಲೂ ಬಿಜೆಪಿ ಕಿರಿಕಿರಿ ಮಾಡುತ್ತಲೇ ಇತ್ತು. ಆಪರೇಷನ್ ಕಮಲದ ಮೂಲಕ ಕಾಂಗ್ರೆೆಸ್-ಜೆಡಿಎಸ್ ಶಾಸಕರ ಖರೀದಿಗೆ ಪ್ರಯತ್ನಿಿಸಿತ್ತು. ದೇವದುರ್ಗದಲ್ಲಿ ಯಡಿಯೂರಪ್ಪ ಅವರು ಜೆಡಿಎಸ್ ಶಾಸಕರನ್ನು ಸೆಳೆಯಲು ನಡೆಸಿದ ಸಂಭಾಷಣೆಯ ಆಡಿಯೊ ಬಹಿರಂಗವಾದಾಗ ಅದನ್ನು ಯಡಿಯೂರಪ್ಪ ಒಪ್ಪಿಿಕೊಂಡಿದ್ದರು. ಆ ಮೇಲೆ ನಾವು ಆಪರೇಷನ್ ಕಮಲ ಮಾಡಲೇ ಇಲ್ಲ ಎಂದರು. ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಹಣ ಕೊಡುತ್ತಿಿದ್ದಾರೆ. ಖರೀದಿ ವ್ಯವಹಾರ ಮಾಡಿಲ್ಲ ಎಂದಾದರೆ ಹೆಚ್ಚು ಹಣ ಕೊಡುವ ಅಗತ್ಯ ಏನಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಿಸಿದರು.

ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರು 13 ಸ್ಥಾಾನ ಗೆಲ್ಲುವುದಾಗಿ ಹೇಳಿಕೊಳ್ಳುತ್ತಿಿದ್ದಾರೆ. ಅದಕ್ಕೆೆ ನಮ್ಮ ಆಕ್ಷೇಪವಿಲ್ಲ. ಆದರೆ, ನಾವು 15ಕ್ಕೆೆ 15 ಸ್ಥಾಾನಗಳನ್ನು ಗೆಲ್ಲುತ್ತೇವೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ