Saturday, 23rd November 2024

ಭಾರತ ಸಿ ಗೆ ಭರ್ಜರಿ ಜಯ

ದೇವದರ್ ಟ್ರೋೋಫಿ : ಅಗರ್ವಾಲ್-ಶುಭಮನ್ ಅಮೋಘ ಶತಕ ಸೆಕ್ಸೇನಾಗೆ 7 ವಿಕೆಟ್ ಭಾರತ ಎ ಗೆ ಎರಡನೇ ಸೋಲು

ರಾಂಚಿ:
ಮಯಾಂಕ್ ಅಗರ್ವಾಲ್ (120 ರನ್) ಮತ್ತು ಶುಭಮನ್ ಗಿಲ್ (142 ರನ್) ಅವರ ಭರ್ಜರಿ ಶತಕಗಳು ಹಾಗೂ ಜಲಜ್ ಸೆಕ್ಸೇನಾ (41 ಕ್ಕೆೆ 7) ಅವರ ಸ್ಪಿಿನ್ ಮೋಡಿಯ ನೆರವಿನಿಂದ ಭಾರತ ಸಿ ತಂಡ ದೇವಧರ್ ಟ್ರೋೋಫಿಯ ಎರಡನೇ ಪಂದ್ಯದಲ್ಲಿ ಭಾರತ ಎ ವಿರುದ್ಧ 232 ರನ್ ಗಳ ಭರ್ಜರಿ ಜಯ ಸಾಧಿಸಿತು.

ಇಲ್ಲಿನ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ಭಾರತ ಸಿ ತಂಡ ನಿಗದಿತ 50 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 366 ರನ್ ಗಳಿಸಿ ಭಾರತ ಎ ತಂಡಕ್ಕೆೆ 367 ರನ್ ಗುರಿ ನೀಡಿತು. ಬಳಿಕ, ಕಠಿಣ ಗುರಿ ಹಿಂಬಾಲಿಸಿದ ಭಾರತ ಎ ತಂಡ 29.5 ಓವರ್‌ಗಳಿಗೆ 134 ರನ್ ಗಳಿಗೆ ಸರ್ವ ಪತನವಾಗುವ ಮೂಲಕ ಸೋಲು ಅನುಭವಿಸಿತು. ಆ ಮೂಲಕ ಸತತ ಎರಡು ಪಂದ್ಯಗಳಲ್ಲಿ ವಿಹಾರಿ ಪಡೆ ಸೋಲು ಅನುಭವಿಸಿತು.

ಭಾರತ ಸಿ ನೀಡಿದ ಕಠಿಣ ಗುರಿ ಹಿಂಬಾಲಿಸಿದ ಭಾರತ ಎ ತಂಡ ಜಲಜ್ ಸೆಕ್ಸೇನಾ ಅವರ ಸ್ಪಿಿನ್ ಮೋಡಿಗೆ ಮಕಾಡೆ ಮಲಗಿತು. ಈಗಾಗಲೇ, ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಹನುಮ ವಿಹಾರಿ ಪಡೆ ಶುಕ್ರವಾರ ಕೂಡ ತನ್ನ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು. 9.5 ಓವರ್ ಬೌಲಿಂಗ್ ಮಾಡಿದ ಜಲಜ್ ಸೆಕ್ಸೇನಾ 41 ರನ್ ನೀಡಿ ಏಳು ವಿಕೆಟ್ ಪಡೆದು ಭಾರತ ಎ ಬಹುಬೇಗ ಕುಸಿಯಲು ಕಾರಣರಾದರು.

ಭಾರತ ಎ ಪರ ದೇವದತ್ತ ಪಡಿಕ್ಕಲ್ 31 ರನ್ ಹಾಗೂ ಭಾರ್ಗವ್ ಮೆರಾಯ್ 30 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಾಟ್‌ಸ್‌‌ಮನ್ ಗಳು ಸೆಕ್ಸೇನಾ ಅವರ ಸ್ಪಿಿನ್ ದಾಳಿ ಎದುರಿಸಲಾಗದೆ ಬಾಲಂಗೋಚಿಗಳಂತೆ ಪೆವಿಲಿಯನ್‌ಗೆ ಪೆರೆಡ್ ನಡೆಸಿದರು. ಸೆಕ್ಸೇನಾ ಜತೆಗೆ ಇಶಾನ್ ಪೊರೆಲ್ ಎರಡು ವಿಕೆಟ್ ಪಡೆದರು.

ಮಯಾಂಕ್-ಗಿಲ್ ಆರ್ಭಟ:
ಇದಕ್ಕೂ ಮುನ್ನ ಮೊದಲು ಬ್ಯಾಾಟಿಂಗ್ ಮಾಡಿದ ಭಾರತ ಸಿ ಪರ ಆರಂಭಿಕರಾಗಿ ಕಣಕ್ಕೆೆ ಇಳಿದ ಮಯಾಂಕ್ ಅಗರ್ವಾಲ್ ಹಾಗೂ ಶುಭಮನ್ ಗಿಲ್ ಜೋಡಿಯು ಅದ್ಭುತ ಪ್ರದರ್ಶನ ತೋರಿತು. ಭಾರತ ಎ ಬೌಲರ್‌ಗಳನ್ನು ಮನಬಂದಂತೆ ಇವರಿಬ್ಬರು ಥಳಿಸಿದರು. ಯಾವುದೇ ತಪ್ಪುು ಹೊಡೆತಗಳಿಗೆ ಕೈ ಹಾಕದ ಈ ಜೋಡಿ ಮುರಿಯದ ಮೊದಲನೇ ವಿಕೆಟ್ ಗೆ 226 ರನ್ ಗಳಿಸಿ ತಂಡಕ್ಕೆೆ ಉತ್ತಮ ಅಡಿಪಾಯ ಹಾಕಿತು.

ದಕ್ಷಿಿಣ ಆಫ್ರಿಿಕಾ ವಿರುದ್ಧ ಟೆಸ್‌ಟ್‌ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಕರ್ನಾಟಕದ ಮಯಾಂಕ್ ಅಗರ್ವಾಲ್ ಭಾರತ ಸಿ ಪರ ಅಮೋಘ ಬ್ಯಾಾಟಿಂಗ್ ಮಾಡಿದರು. 111 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ 15 ಬೌಂಡರಿಯೊಂದಿಗೆ 120 ರನ್ ಗಳಿಸಿ ಭರ್ಜರಿ ಶತಕ ಬಾರಿಸಿದರು. ನಂತರ, ಹನುಮ ವಿಹಾರಿಗೆ ವಿಕೆಟ್ ಒಪ್ಪಿಿಸಿದರು. ಮತ್ತೊೊಂದು ತುದಿಯಲ್ಲಿ ಅದ್ಭುತ ಬ್ಯಾಾಟಿಂಗ್ ಮಾಡಿದ ನಾಯಕ ಶುಭಮನ್ ಗಿಲ್ 142 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ 143 ರನ್ ದಾಖಲಿಸಿದರು. ನಂತರ, ಅಶ್ವಿಿನ್‌ಗೆ ಔಟ್ ಆದರು.

ಸ್ಫೋೋಟಿಸಿದ ಸೂರ್ಯಕುಮಾರ್:
ಮಯಾಂಕ್ ಹಾಗೂ ಶುಭಮನ್ ಗಿಲ್ ವಿಕೆಟ್ ಒಪ್ಪಿಿಸಿದ ಬಳಿಕ ಸೂರ್ಯಕುಮಾರ್ ಯಾದವ್ ಭಾರತ ಎ ಬೌಲರ್‌ಗಳ ಎದುರು ಅಬ್ಬರಿಸಿದರು. ಇದರೊಂದಿಗೆ ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. ಕೇವಲ 29 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಯೊಂದಿಗೆ ಅಜೇಯ 72 ರನ್ ಗಳಿಸಿ ತಂಡದ ಮೊತ್ತ 350 ರ ಗಡಿ ದಾಟಿಸುವಲ್ಲಿ ಯಶಸ್ವಿಿಯಾದರು.

ಸಂಕ್ಷಿಪ್ತ ಸ್ಕೋೋರ್
ಭಾರತ ಸಿ : 50 ಓವರ್‌ಗಳಿಗೆ 366/3 (ಶುಭಮನ್ ಗಿಲ್ 143, ಮಯಾಂಕ್ ಅಗರ್ವಾಲ್ 120, ಸೂರ್ಯ ಕುರ್ಮಾ ಯಾದವ್ ಔಟಾಗದೆ 72; ಹನುಮ ವಿಹಾರಿ 48 ಕ್ಕೆೆ 1, ಆರ್. ಅಶ್ವಿಿನ್ 57 ಕ್ಕೆೆ 1)
ಭಾರತ ಎ : 29.5 ಓವರ್ ಗಳಿಗೆ 134/10 (ದೇವದತ್ತ ಪಡಿಕ್ಕಲ್ 31, ಭಾರ್ಗವ್ ಮೆರಾಯ್ 30, ಇಶಾನ್ ಕಿಶಾನ್ 25; ಜಲಜ್ ಸೆಕ್ಸೇನಾ 41 ಕ್ಕೆೆ 7, ಇಶಾನ್ ಪೊರೆಲ್ 12 ಕ್ಕೆೆ 2)