ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ರಕ್ಷಿತ್ ಶೆಟ್ಟಿ ಖಾಸಗಿ ಚಾನೆಲ್ ಒಂದರ ಮೇಲೆ ಗರಮ್ ಆಗಿದ್ದಾರೆ. ಅದಕ್ಕೆ ಕಾರಣ ಆ ಖಾಸಗಿ ಚಾನೆಲ್‌ನವರು ರಕ್ಷಿತ್ ಅವರ ಖಾಸಗಿ ವಿಷಯಗಳ ಬಗ್ಗೆ ಮಾತನಾಡಿರೋದು. ಹೀಗೆ ಮಾಧ್ಯಮಗಳು ಆಗಾಗ ಕೆಲವು ನಟರ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ ಮಾಡಿರುವ ಅನೇಕ ಉದಾಹರಣೆಗಳು ಸಿನಿಮಾ ರಂಗದಲ್ಲಿ ಮಾಮೂಲು. ರಕ್ಷಿತ್ ಶೆಟ್ಟಿಗೂ ಇದು ಹೊಸದೇನೂ ಅಲ್ಲ. ಆದರೆ ಈ ಬಾರಿ ರಕ್ಷಿತ್ ಶೆಟ್ಟಿ ಇದನ್ನು ಗಂಭೀರವಾಗಿ ತೆಗೆದುಕೊಂಡಂತಿದೆ.
ಹಾಗಂತ ಅವರೇನೂ ಶೂಟ್ ಮಾಡ್ಬೇಕಾ ಅಂತ ಆ ಮಾಧ್ಯಮದ ವಿರುದ್ಧ ಹೋರಾಡೋಕೆ ರೆಡಿ ಆಗಿಲ್ಲ. ಆದರೆ ತಮ್ಮನ್ನು ಫುಟ್‌ಪಾತ್ ಮೇಲಿರುವ ನಟ ಅಂತ ಕರೆದಿರೋದಕ್ಕೆ ೧೧ನೇ ತಾರೀಖು ನಾನು ಉತ್ತರ ಕೊಡ್ತೀನಿ ಅಂತ ಹೇಳಿಕೊಂಡಿದ್ದಾರೆ. ಇದಕ್ಕೆ ಸರಿಯಾಗಿ ಕನ್ನಡದ ಸದ್ಯದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ೧೧ನೇ ತಾರೀಖು ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದೆ. ಈಗ ಸಿನಿಪ್ರಿಯರು ಮತ್ತು ರಕ್ಷಿತ್ ಶೆಟ್ಟಿ ಅಭಿಮಾನಿಗಳು ಈ ಎರಡೂ ಸುದ್ದಿಗಳನ್ನು ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಅಂದರೆ ಹೊಂಬಾಳೆ ಫಿಲ್ಮ್ಸ್‌ನಲ್ಲಿ ರಕ್ಷಿತ್ ಶೆಟ್ಟಿ ನಟಿಸ್ತಾ ಇದ್ದಾರಾ, ಈ ಮೂಲಕ ರಕ್ಷಿತ್ ಶೆಟ್ಟಿ
ನಾನು ಫುಟ್‌ಪಾತ್ ನಲ್ಲಿರೋ ನಟ ಅಲ್ಲ, ದೊಡ್ಡ ಬ್ಯಾನರ್‌ನ ಪ್ಲಾಟ್ ಫಾರ್ಮ್‌ನಲ್ಲಿ ನಟಿಸ್ತಾ ಇದ್ದೀನಿ ಅನ್ನೋ ಶಾಕ್ ಕೊಡ್ತಾರಾ ಅನ್ನೋ ಅನುಮಾನ ಹಲವರದು.
ಇಂದು ಈ ಕುತೂಹಲ ತಣಿಯುವ ಎಲ್ಲಾ ಲಕ್ಷಣಗಳೂ ಇವೆ. ಹಾಗಾಗಿ ರಕ್ಷಿತ್ ಶೆಟ್ಟಿ ತಮ್ಮ ಮೇಲಿನ ಆಪಾದನೆಗಳಿಗೆ ಮಾತಿನ ಮೂಲಕ ಅಲ್ಲದೆ ಕೃತಿಯ ಮೂಲಕ ಉತ್ತರ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ನೆಟ್ ಪಿಕ್ಸ್
ಖೇಮುಗೆ ವಿಮಾನದಲ್ಲಿ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಖೇಮು ತನ್ನ ಮೊದಲ ವಿಮಾನ ಪ್ರಯಾಣಕ್ಕೆ ಸಿದ್ಧನಾದ. ಮನೆಯಲ್ಲಿ ಹೆಂಡತಿ ಅವನಿಗೆ ಸಾಕಷ್ಟು ಧೈರ್ಯ ತುಂಬಿ ಕಳಿಸಿದಳು. ಚಿಕ್ಕಮಕ್ಕಳೆ ಹೋಗ್ತಾರೆ, ನೀವ್ಯಾಕ್ರೀ ಹೆದರ್ತೀರಾ ಅಂತ ಗಂಡನಿಗೆ ಬುದ್ಧಿ ಹೇಳಿದಳು. ಸರಿ ಖೇಮು ಪ್ರಯಾಣದ ದಿನ ಧೈರ್ಯ ಮಾಡಿ ವಿಮಾನ ನಿಲ್ದಾಣಕ್ಕೆ ಹೋಗಿ, ಬೋರ್ಡಿಂಗ್ ಪಾಸ್ ತಗೊಂಡು ಹೋಗಿ ತನ್ನ ಸೀಟಿನಲ್ಲಿ ಕೂತು ಬೆಲ್ಟ ಹಾಕಿಕೊಂಡು ದೇವರನ್ನು ಸ್ಮರಿಸುತ್ತಾ ಕುಳಿತ. ಪ್ರಯಾಣ ಶುರುವಾಯಿತು. ಪೈಲೆಟ್ ಪ್ಲೇನ್ ಚಾಲೂ ಮಾಡಿದ. ನಾವು ಈಗ ಟೇಕಾಫ್ ಆಗುತ್ತಿದ್ದೇವೆ. ಅಂತ ಅನೌನ್ಸ್‌ಮೆಂಟ್
ಆಯ್ತು. ಪ್ರಯಾಣ ಮುಗಿತಾ ಬಂತು. ಖೇಮು ಅಯ್ಯೋ ಇಷ್ಟಕ್ಕೆ ಎಷ್ಟೊಂದು ಹೆದರಿಕೊಂಡಿದ್ದೇ ಎಂದುಕೊಂಡು ತನ್ನಷ್ಟಕ್ಕೇ ತಾನೇ ನಗುತ್ತಿದ್ದ. ಅಷ್ಟರಲ್ಲಿ ಪೈಲೆಟ್ ಕಡೆಯಿಂದ ಅನೌನ್ಸ್‌ಮೆಂಟ್ ಬಂತು. ಈಗ ನಾವು ಲ್ಯಾಂಡ್ ಆಗ್ತಾ ಇದ್ದೀವಿ. ರಿಲ್ಯಾಕ್ಸ್ … ಎನ್ನುತ್ತಿದ್ದಂತೆ, ಅದರ ಜತೆಯ, ಪೈಲೆಟ್, ಓ ಮೈ ಗಾಡ್, ಓ ಮೈ ಗಾಡ್ ಅಂತ ಕೂಗಿದ್ದು ಕೇಳಿಸಿತು.
ಪ್ಲೇನ್‌ನಲ್ಲಿ ಇದ್ದವರೆ ಗಾಬರಿಯಾದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಪ್ಲೇನ್ ಸೇಫ್ ಆಗಿ ಲ್ಯಾಂಡ್ ಆಯ್ತು. ಕಾಕ್ ಪಿಟ್‌ನಿಂದ ಹೊರಬಂದ ಪೈಲೆಟ್, ನಿಮ್ಮನ್ನೆ ಹೆದರಿಸಿದ್ದಕ್ಕೆ ಸಾರಿ, ಅದೇನಾಯ್ತು ಅಂದ್ರೆ ಏರ್ ಹೋಸ್ಟೆಸ್ ನನ್ನ ಪ್ಯಾಂಟ್ ಮೇಲೆ ಕಾಫಿ ಚೆಲ್ಲಿಬಿಟ್ಟಳು. ಅದಕ್ಕೆ ಕೂಗಿಕೊಂಡೆ, ನನ್ನ ಪ್ಯಾಂಟ್‌ನ ಮುಂಭಾಗ ನೋಡಬೇಕಿತ್ತು ನೀವು ಅಂದ. ಅದಕ್ಕೆ ಖೇಮು ಹೇಳಿದ ಅದೇನ್ ಮಹಾ, ನಿಮ್ಮ ಅನೌನ್ಸ್‌ಮೆಂಟ್ ಬಂದಕೂಡ್ಲೇ, ನೀವು ನನ್ನ ಪ್ಯಾಂಟ್‌ನ ಹಿಂಭಾಗ ನೋಡಬೇಕಿತ್ತು.
ಲೂಸ್ ಟಾಕ್
ಕುಮಾರಸ್ವಾಮಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಕೆಆರ್‌ಎಸ್ ಡ್ಯಾಮ್‌ನ ಬಿರುಕು ನಿಮ್ಮ ಮತ್ತು ಸುಮಲತಾ ಅವರ ಮಧ್ಯೆ ಬಿರುಕು ಮೂಡಿಸಿದೆಯ?
ಬಿರುಕು ಅಲ್ಲ ಕಣ್ರೀ ಅದು, ಸುಮಲತಾ ಅವ್ರು ಸುಮ್ ಸುಮ್‌ನೆ ಮಾಡ್ತಾ ಇರೋ ಕಿರಿಕ್ಕು.
ಹೋಗ್ಲಿ, ಅವರು ಹೇಳಿದ ಹಾಗೆ ಕೆಆರ್‌ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಅನ್ನೋದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಡ್ಯಾಮ್ ಇಟ್!
ನೀವ್ಯಾಕೋ ಅವರ ಮೇಲೆ ವೈಯಕ್ತಿಕ ದ್ವೇಷ ಕಟ್ಟಿಕೊಂಡಿರೋ ಹಾಗಿದೆ ಅಂತ ಎಲ್ರೂ ಹೇಳ್ತಾ ಇದ್ದಾರೆ ನಿಜಾನಾ?
ಮತ್ತೆ, ಕೈ ಕಟ್ಕೊಂಡು ನಿಂತ್ಕಂಡಿದ್ದನ್ನೂ ಆಡಿಕೊಳ್ತಾರಲ್ಲ. ಆಯಮ್ಮನಿಗೆ ಸುಮ್ನೆ ಕೂತ್ಕಳಕಾಗಲ್ವಾ?
ಕೂತ್ಕಳಕೆ ನೀವೆಲ್ಲಿ ಬಿಡ್ತೀರಾ ಸರ್, ಡ್ಯಾಮ್‌ನಲ್ಲಿರೋ ಕ್ರ್ಯಾಕ್‌ಗೆ ಅಡ್ಡಡ್ಡ ಮಲಗಿಸಬೇಕು. ಅಂದಿದ್ರಿ
ಮತ್ತೆ, ಆಯಮ್ಮ ಡ್ಯಾಮ್ ಬಿರುಕು ಬಿಟ್ಟಿದೆ ಅಂತ ಕ್ರ್ಯಾಕ್ ಥರ ಹೇಳಿಕೆ ಕೊಟ್ರೆ ನಾನೇನ್ ಮಾಡೋಕಾಗುತ್ತೆ.
ಸರಿ, ಒಂದ್ ಮಾತ್ ಹೇಳಿ, ನಿಮ್ಮ ಪ್ರಕಾರ ಅವರು ಎಂಪಿ ಆಗಿ ಕೆಲಸ ಮಾಡದೆ ಸುಮ್ನೆ ಕೂತ್ಕಂಡಿದ್ದಾರೆ ಅಂತನಾ?
ಸುಮ್ನೆ ಕೂತ್ಕಂಡಿದ್ರೆ ಸಮಸ್ಯೆ ಇರ್ತಾ ಇರ್ಲಿಲ್ಲ. ಅವ್ರು ಲಾಸ್ಟ್ ಟೈಮ್ ನಿಖಿಲ್ ವಿರುದ್ಧ ಎಲೆಕ್ಷನ್ನಿಗೆ ನಿಂತ್ಕೊಂಡ್ರ ಆವಾಗಿಂದನೂ ಸಮಸ್ಯೆ.
ಲೈನ್ ಮ್ಯಾನ್
ಅಂಬರೀಷಣ್ಣ ಜೊತೆ ಚೆನ್ನಾಗಿದ್ದ ಕುಮಾರಸ್ವಾಮಿ ಸುಮಲತಾ ಅವರ ವಿರುದ್ಧ ತಿರುಗಿ ಬಿದ್ದಿರೋದು ಯಾಕೆ?
ಅಣ್ಣ ನಮ್ಮವನಾದರೇನು ಅತ್ತಿಗೆ ನಮ್ಮವಳೇ?
ಮೊದ್ಲೆ ಹೆಬ್ಬೆಟ್ಟುಗಳು ಅಂದ್ರೆ ಅನಕ್ಷರಸ್ಥರು
ಈಗ ಹೆಬ್ಬೆಟ್ಟುಗಳು ಅಂದ್ರೆ ಮೊಬೈಲ್‌ನಲ್ಲಿ ಪಬ್ ಜಿ ಥರದ ಗೇಮ್ ಆಡೋರು
ಮತ್ತೆ ಮತ್ತೆ ಡಿವೋರ್ಸ್ ಮಾಡಬೇಕು ಅಂದ್ರೆ ಇರಬೇಕಾದ ಕ್ವಾಲಿಫಿಕೇಶನ್
ನೀವು ಆಮಿರ್ ಖಾನ್ ಆಗಿರಬೇಕು
ಆಮಿರ್ ಖಾನ್ ಎರಡೆರಡು ಬಾರಿ ಡಿವೋರ್ಸ್ ಮಾಡಿಕೊಂಡಿದ್ದಕ್ಕೆ ಬಾಲಿವುಡ್ ಪ್ರತಿಕ್ರಿಯೆ
ಲಗಾನ್ ವರ್ಕ್ ಔಟ್ ಆದ ಮಾತ್ರಕ್ಕೆ ಲಗ್ನ ನೂ ವರ್ಕ್ ಔಟ್ ಆಗುತ್ತೆ ಅನ್ನೋಕಾಗಲ್ಲ.
ಇದಕ್ಕೆ ಆಮಿರ್ ಖಾನ್ ಉತ್ತರ
ಇದರ ಅರ್ಥ ನಾನು ಜೋರು ಕಾ ಗುಲಾಮ್ ಅಲ್ಲ
ಆಮಿರ್ ಖಾನ್ ಡಿವೋರ್ಸ್ ಕೊಟ್ಟಿದ್ದಕ್ಕೆ ಕಿರಣ್ ಏನಂತ ಹೇಳಿದ್ಲು?
ತ – ಲಾಕ್ ಶುಕ್ರಿಯಾ
ಆಮಿರ್ ಖಾನ್ ಕಿರಣ್ ರಾವ್ ಮದ್ವೆ ಯಾಕೆ ಮುರಿದು ಬಿತ್ತು?
ಜೋಡಿನೇ ಸರಿ ಇರಲಿಲ್ಲ ಕಣ್ರೀ, ತೂ ಹೈ ಮೇರಿ ಕಿರಣ್ ಅಂತ ಹೇಳಬೇಕಾಗಿದ್ದು ಶಾರೂಖ್ ಖಾನ್ ಅಲ್ವಾ?
ಬಾಲಿವುಡ್ ಖಾನ್‌ಗಳು ಇನ್ನೊಬ್ಬರಿಗೆ ಹೇಳೋ ಕಿವಿ ಮಾತನ್ನ ಏನಂತಾರೆ?
ಕಾನ್ ಕೀ ಬಾತ್
ಪ್ರೇಯಸಿಗೆ ಪ್ರತಿದಿನ ಗುಲಾಬಿ ಹೂ ಕೊಟ್ರೆ ಏನಾಗುತ್ತೆ?
ರೋಸ್ ಡೇ
ಡೈಲಾಗ್‌ನ ಎಳೆದೂ ಎಳೆದೂ ಹೇಳೋ ವಿಲನ್
ರಬ್ಬರ್ ಸಿಂಗ್