Thursday, 19th September 2024

ಒಂದು ದಿನದ ಉಪವಾಸ ಆರಂಭಿಸಿದ ಕೇರಳ ರಾಜ್ಯಪಾಲ

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಒಂದು ದಿನದ ಉಪವಾಸ ಆರಂಭಿಸಿದ್ದಾರೆ.

ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಮಂದಿ ಮಹಿಳೆಯರು ತುತ್ತಾಗಿರುವ ಪ್ರಕರಣ ಖಂಡಿಸಿ, ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದು ದಿನದ ಉಪವಾಸ ಕೈಗೊಂಡಿದ್ದಾರೆ.

ಜತೆಗೆ ರಾಜಧಾನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಕಳೆದ ತಿಂಗಳೇ ರಾಜ್ಯಪಾಲರು ವರದಕ್ಷಿಣೆ ವಿರೋಧಿ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕನಾಗಿ ಭಾಗವಹಿಸುವುದಾಗಿ ವಾಗ್ಧಾನ ಮಾಡಿದ್ದರು.

ಸಾಮಾಜಿಕ ಸಮಸ್ಯೆಯನ್ನು ಎತ್ತಿ ಹಿಡಿಯಲು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವ ಜನರ ಜತೆ ಸೇರುವುದಾಗಿಯೂ ತಿಳಿಸಿದ್ದರು. ಕಳೆದ ತಿಂಗಳು ವರದಕ್ಷಿಣೆಗೆ ಬಲಿಯಾದ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾದ ಬಳಿಕ ಆರಿಫ್ ಮೊಹಮ್ಮದ್ ಖಾನ್ ಈ ಹೇಳಿಕೆ ನೀಡಿದ್ದರು. ವರದಕ್ಷಿಣೆ ಪಿಡುಗು ರಾಜ್ಯದ ಹಲವಾರು ಮಹಿಳೆಯರ ಆತ್ಮಹತ್ಯೆಗೆ ಕಾರಣವಾಗಿದೆ.