Saturday, 23rd November 2024

ಪಶ್ಚಿಮಬಂಗಾಳದಲ್ಲಿ ನಿಲ್ಲದ ಚುನಾವಣೋತ್ತರ ಹಿಂಸಾಚಾರ

mamatabanerjee

ವಿಶ್ಲೇಷಣೆ

ಪ್ರಕಾಶ್

ಶೇಷರಾಘವಾಚಾರ್‌

sprakashbjp@gmail.com

ಎಂಬತೈದು ವಯಸ್ಸಿನ ಸೋವಾ ರಾಣಿ ಮಂಡಲ್ ತನ್ನ ಮಗ ಗೋಪಾಲ್ ಮಜುಂದಾರ್ ಮೇಲೆ ಹಲ್ಲೆ ಮಾಡಲು ಬಂದಿದ್ದ ಮಮತಾ ಬ್ಯಾನರ್ಜಿ ಗೂಂಡಾ ಬ್ರಿಗೇಡ್ ನವರನ್ನು ತಡೆಯಲು ಹೋದಾಗ ವಯಸ್ಸಿನ ಪರಿವೆ ನೋಡದೆ ಆಕೆಯ ಮೇಲೆಯೂ ಅಮಾನುಷವಾಗಿ ಹಲ್ಲೆ ಮಾಡುತ್ತಾರೆ. ತೀವ್ರ ಗಾಯಗೊಂಡಿದ್ದ ವೃದ್ಧ ತಾಯಿ ಅಸುನೀಗುತ್ತಾರೆ. ಇದು ಮಮತಾ ಆಡಳಿತದ ರಾಕ್ಷಸಿ ವರಸೆಯ ಒಂದು ಸ್ಯಾಂಪಲ್ ಮಾತ್ರ.

ಚುನಾವಣಾ ಹಿಂಸಾಚಾರ ಪಶ್ಚಿಮಬಂಗಾಳಕ್ಕೆ ಹೊಸದೇನಲ್ಲ. ಹಿಂದೆ ಎಡರಂಗದ ಸರಕಾರವಿದ್ದ ಸಂದರ್ಭದಲ್ಲಿಯೂ ಹಿಂಸಾಚಾರಕ್ಕೆ ಅಡ್ಡಿ ಇರಲಿಲ್ಲ, ಆಗ ಕಮ್ಯುನಿಸ್ಟರ ಕೆಂಗಣ್ಣು ಮಮತಾರವರ ಮೇಲೆ ಇತ್ತು. 2011ರಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ತರುವಾಯ ಎಡರಂಗವನ್ನು ನಾಚಿಸು ವಂತಾ ಚುನಾವಣಾ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ವಿಪರ್ಯಾಸ.

ಮಮತಾ ಬ್ಯಾನರ್ಜಿಯವರ ಹೊಡೆತಕ್ಕೆ ತತ್ತರಿಸಿ ಹೋದ ಎಡರಂಗ ಮತ್ತು ಕಾಂಗ್ರೆಸ್ ಪಾರ್ಟಿಯೂ ತಮ್ಮ ಕಾರ್ಯಕರ್ತರ ನೆರವಿಗೆ ಧಾವಿಸಲೂ ಸ್ಥೈರ್ಯ ವಿಲ್ಲದೆ ಎರಡೂ ಪಕ್ಷಗಳು ರಾಜ್ಯದಲ್ಲಿ ತಮ್ಮ ಕಚೇರಿಗಳಿಗೆ ಬಾಗಿಲು ಹಾಕಿ ಕುಳಿತಿವೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಗೆದ್ದಿದ್ದು,
3 ಈ ಚುನಾವಣೆಯು 100 ಜನರ ಆಹುತಿ ಪಡೆದು ಪಶ್ಚಿಮ ಬಂಗಾಳದ ಭೀಕರ ವಾತಾವರಣಕ್ಕೆ ಕನ್ನಡಿ ಹಿಡಿದಿತ್ತು. ಅಂದಿನಿಂದ ಮಮತಾರವರ ರಾಕ್ಷಸ
ರಾಜ್ಯಭಾರ ಪರ್ಯಾಯ ಶಕ್ತಿಯಾಗಿ ಎದ್ದು ನಿಂತ ಬಿಜೆಪಿಯನ್ನು ಗುರಿಯಾಗಿಸಿಕೊಂಡ ಫಲವಾಗಿ ಇಲ್ಲಿಯ ತನಕ ನೂರಾರು ಬಿಜೆಪಿ ಕಾರ್ಯಕರ್ತರು
ಬಲಿಯಾಗಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 19 ಸೀಟುಗಳನ್ನು ಗೆದ್ದು ಟಿಎಂಸಿಗೆ ಪರ್ಯಾಯವಾಗಿ ಪ್ರಬಲ ಶಕ್ತಿಯಾಗಿ ಬೆಳೆಯಿತು. ಟಿಎಂಸಿ ಗೂಂಡಾಗಳ
ವ್ಯಾಪಕ ಹಿಂಸಾಚಾರ ಹಲ್ಲೆ, ಹತ್ಯಾ ರಾಜಕಾರಣದ ಮುಂದೆ ಜಗ್ಗದೆ ಬಿಜೆಪಿಯೂ ೨೦೨೧ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಆಡಳಿತ ಚುಕ್ಕಾಣಿ
ಹಿಡಿಯಲು ಬಿಜೆಪಿ ಬಹು ದೊಡ್ಡ ಹೆಜ್ಜೆಯನ್ನು ಇಟ್ಟಿತ್ತು. ವಿಧಾನಸಭೆ ಚುನಾವಣೆಗೆ ಹೆಚ್ಚಿನ ಸಂಖ್ಯೆ ಯಲ್ಲಿ ಕೇಂದ್ರೀಯ ಪಡೆಗಳು ನಿಯೋಜನೆಯಾಗಿದ್ದರು, ಟಿಎಂಸಿ ಗೂಂಡಾಗಳ ಹಿಂಸಾಚಾರದಲ್ಲಿ 12 ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತದೆ. ರಕ್ತಪಿಪಾಸು ಟಿಎಂಸಿ ಕಾರ್ಯಕರ್ತರನ್ನು ಸ್ವತಃ ಮಮತಾ ಕೇಂದ್ರೀಯ ಪಡೆಗಳ ವಿರುದ್ದ ಎತ್ತಿ ಕಟ್ಟಲು ಸಹಾ ಹಿಂಜರಿಯುವುದಿಲ್ಲ.

ಮೇ 2ರ ತರುವಾಯ ಸ್ವತಂತ್ರ ಪೂರ್ವದಲ್ಲಿ ಕಂಡರಿಯದ ಚುನಾವಣೋತ್ತರ ಹಿಂಸಾಚಾರವು, ಪ್ರಭುತ್ವದ ಬೆಂಬಲದಿಂದ ಮಮತಾ ಆಡಳಿತದಲ್ಲಿ ನಿರ್ದಯ ವಾಗಿ ನಡೆಯುತ್ತದೆ. ಚುನಾವಣಾ ಫಲಿತಾಂಶ ಬರುತ್ತಿದ್ದ ಹಾಗೆಯೇ ಮಮತಾ ಗೂಂಡಾ ಬ್ರಿಗೇಡ್ ತನ್ನ ಪೈಶಾಚಿಕ ವರ್ತನೆಯನ್ನು ಬಿಜೆಪಿ ಕಾರ್ಯಕರ್ತರ ಮತ್ತು ಅದರ ಬೆಂಬಲಿಗರ ಮೇಲೆ ಬೀಭತ್ಸವಾಗಿ ಹರಿಯಬಿಡುತ್ತಾರೆ.

35 ವಯಸ್ಸಿನ ಅಭಿಜಿತ್ ಸಕಾರ್ ಮನೆಯ ಮೇಲೆ ದಾಳಿಯಾದಾಗ ಅದರ ವಿಡಿಯೊ ಫೇಸ್‌ಬುಕ್‌ನಲ್ಲಿ ಆತ ಹಾಕುತ್ತಾನೆ. ಇದರಿಂದ ರೊಚ್ಚಿಗೆದ್ದ ಟಿಎಂಸಿ
ಬೆಂಬಲಿಗರು ಅವನನ್ನು ವೈರ್‌ನಿಂದ ಕುತ್ತಿಗೆ ಹಿಸುಕಿ ಕೊಲ್ಲುತ್ತಾರೆ. ಚುನಾವಣಾ ಫಲಿತಾಂಶ ಘೋಷಣೆಯಾದ 24 ಗಂಟೆಗಳಲ್ಲಿ ಆರು ಜನ ಬಿಜೆಪಿ ಕಾರ್ಯಕ
ರ್ತರ ಹತ್ಯೆ ಮಾಡುತ್ತಾರೆ. ಒಂದು ತಿಂಗಳ ಅವಧಿಯಲ್ಲಿ 36 ಬಿಜೆಪಿ ಕಾರ್ಯಕರ್ತರು ಬಲಿಯಾಗುತ್ತಾರೆ, ಇವರಲ್ಲಿ ಬಹುತೇಕರು ದಲಿತ ಮತ್ತು ಆದಿವಾಸಿ ಜನಾಂಗಕ್ಕೆ ಸೇರಿದವರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೆಲಸ ಮಾಡಿದವರನ್ನು ಮತ್ತು ಅವರ ಬೆಂಬಲಿಗರನ್ನು ಹುಡುಕಿ ಹುಡುಕಿ ಮನೆಗಳ ಮೇಲೆ ದಾಳಿ ಮಾಡು ವುದು, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ಅಮಾನುಷವಾಗಿ ಮಾರಣಾಂತಿಕ ಹಲ್ಲೆ ಮಾಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ.

ಆಡಳಿತ ಯಂತ್ರ ಸಂಪೂರ್ಣವಾಗಿ ಸರಕಾರದ ಕೈಗೊಂಬೆಯಾಗಿ ಗಂಭೀರ ಅಪರಾಧಗಳನ್ನು ನಿರ್ಲಕ್ಷಿಸಿರುವ ಕಾರಣ ಗೂಂಡಾಗಳಿಗೆ ಮತ್ತಷ್ಟು ಉತ್ತೇಜನ ನೀಡುವಂತಾಗಿದೆ. ಟಿಎಂಸಿ ಗೂಂಡಾಗಳ ಭಯದಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಮನೆ ಮಠ ತೊರೆದು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಇಂದಿಗೂ ಸಾವಿರಾರು ಜನ ನೆರೆಯ ಅಸ್ಸಾಂ ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ. 24 ಪರಗಣ ಜಿಲ್ಲೆಯ ಜೇಗ್ರಾಮ್‌ನ ನಿವಾಸಿ ಪಿಂಕಿ ಬಾಜ್ ಬಿಜೆಪಿಗೆ ಚುನಾವಣೆಯಲ್ಲಿ
ಕೆಲಸ ಮಾಡಿದಳೆಂದು ಅವಳ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿ ಮನೆಗೆ ಬೆಂಕಿ ಹಾಕುತ್ತಾರೆ.

ಹಲವಾರು ಮಹಿಳಾ ಕಾರ್ಯಕರ್ತರನ್ನು ಲೈಂಗಿಕವಾಗಿ ಶೋಷಣೆ ಮಾಡಿ ಅವರನ್ನು ಬಿಜೆಪಿ ತೊರೆಯುವಂತೆ ಮಾಡಲಾಗಿದೆ. ಬಹುತೇಕ ಹಿಂಸಾಚಾರವನ್ನು
ಬಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವ ಮುಸ್ಲಿಂ ಗೂಂಡಾಗಳು ಪೊಲೀಸರ ಸಹಕಾರದಿಂದ ನಡೆಸುತ್ತಿರುವುದರಿಂದ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ನೂರಾರು ಮಹಿಳೆಯರು ತಮಗೆ ಟಿಎಂಸಿ ಗೂಂಡಾಗಳು ನಡೆಸಿದ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯ ಬಗ್ಗೆ ದೂರು ದಾಖಲಿಸಲು ಧೈರ್ಯವಿಲ್ಲದಷ್ಟು ಭಯಗೊಂಡಿದ್ದಾರೆ.

ದೂರು ದಾಖಲಿಸಿದರೂ ಅದನ್ನು ಠಾಣೆಯಲ್ಲಿ ಪೊಲೀಸರು ಪಡೆಯುವುದಿಲ್ಲ. ಇದಲ್ಲದೆ ದೂರು ದಾಖಲಿಸಲು ಬಂದವರನ್ನು ಪೊಲೀಸರೆ ಬೆದರಿಸಿ ಹಿಂದಕ್ಕೆ ಕಳುಹಿಸಿದ ಅನೇಕ ಪ್ರಕರಣಗಳು ನಡೆದಿವೆ. ನ್ಯಾಯ ದೊರಕಿಸಿ ಕೊಡಿ ಎಂದು ಹತ್ತಾರು ಮಹಿಳೆಯರು ಈಗ ಸುಪ್ರೀಂಕೋರ್ಟ್‌ನ ಬಾಗಿಲು ತಟ್ಟಿದ್ದಾರೆ. ಪುಬಾರ್ ಮೇದಿನಪುರಕ್ಕೆ ಸೇರಿದ 60 ವರ್ಷದ ಮಹಿಳೆಯು ಮೇ 5ರಂದು ತನ್ನ 6 ವರ್ಷದ ಮೊಮ್ಮಗನ ಮುಂದೆ ಟಿಎಂಸಿ ಗೂಂಡಾಗಳು ಹೇಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದರು ಎಂದು ಕೋರ್ಟಿನ ಅರ್ಜಿಯಲ್ಲಿ ವಿವರಿಸುತ್ತಾಳೆ.

17 ವಯಸ್ಸಿನ ದಲಿತ ಸಮುದಾಯ ವಯಸ್ಕ ಬಾಲಕಿಯು ತನ್ನ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಅಪರಾಧಿಗಳಿಗೆ ಶಿಕ್ಷಿಸಿ ಎಂದು ಸರ್ವೊಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಪೂರ್ಣಿಮಾ ಮೊಂಡಲ್ ಹಾಡುಹಗಲೇ ತನ್ನ ಗಂಡನನ್ನು ತನ್ನ ಎದುರಿಗೆ ಕೊಚ್ಚಿ ಕೊಲ್ಲುತ್ತಾರೆ ಮತ್ತು ತನ್ನನ್ನು ವಿವಸ್ತ್ರ ಗೊಳಿಸಿ ಅತ್ಯಾಚಾರ ಮಾಡಲು ಯತ್ನಿಸುತ್ತಾರೆ. ಸ್ಥಳೀಯ ಪೊಲೀಸರು ಅಪರಾಧಿಗಳನ್ನು ಬಂಧಿಸುವ ಬದಲು ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹಾಕು ತ್ತಾರೆ ಎಂದು ಅರ್ಜಿಯ ಮೂಲಕ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ.

ಒಂದು ಅಂದಾಜಿನ ಪ್ರಕಾರ ಮಮತಾ ಆಡಳಿತದಲ್ಲಿ ಚುನಾವಣೆ ಫಲಿತಾಂಶದ ತರುವಾಯ 15 ಸಾವಿರ ಹಿಂಸಾಚಾರ ಪ್ರಕರಣಗಳು ಮತ್ತು 7000 
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದಿದೆ ಎಂದು ವಸ್ತುಸ್ಥಿತಿ ಅಧ್ಯಯನ ಮಾಡಿದ ನಾಗರಿಕ ಸಮಿತಿಯ ಸದಸ್ಯರು ವರದಿ ನೀಡಿದ್ದಾರೆ. ಕೋಲ್ಕತ್ತಾ ಉಚ್ಚನ್ಯಾಯಾಲಯ ರಾಷ್ಟ್ರೀಯ ಮಾನವ ಹಕ್ಕು ಆಯೋಗವನ್ನು ಬಂಗಾಲದ ಹಿಂಸಾಚಾರದ ಕುರಿತು ತನಿಖೆ ಮಾಡಿ ವರದಿ ಸಲ್ಲಿಸಲು ಆದೇಶಿಸಿದೆ.
ಮಮತಾ ಬ್ಯಾನರ್ಜಿ ಸ್ವತಃ ಮಹಿಳೆಯಾಗಿ ತನ್ನ ರಾಜ್ಯದಲ್ಲಿ ತನ್ನದೇ ಪಕ್ಷದವರು ರಾಜಾರೋಷವಾಗಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ
ನಡೆಸುತ್ತಿದ್ದರು, ಅದನ್ನು ತಡೆಯುವ ಅಥವಾ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ನ್ಯಾಯ ದೊರಕಿಸಿ ಕೊಡುವ ಮಾನವೀಯತೆಯೇ ಕಾಣದಾಗಿದೆ. ಮಹಿ
ಳೆಯಾಗಿ ಮತ್ತೊಬ್ಬ ಮಹಿಳೆಯನ್ನು ಕಾಪಾಡುವುದಕ್ಕಿಂತ ತನ್ನ ರಾಜಕೀಯ ವಿರೋಧಿಗಳನ್ನು ದಮನ ಮಾಡುವುದು ಮಮತಾಗೆ ಮುಖ್ಯವಾಗಿದೆ.

ಹೈಕೋರ್ಟ್ ಆದೇಶದ ಮೇರೆಗೆ ಜಾಧವ್ ಪುರದಲ್ಲಿ ಪರಿಸ್ಥಿತಿಯ ತನಿಖೆಗೆ ಹೋಗಿದ್ದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯರ ಮೇಲೆಯೂ ಟಿಎಂಸಿ ಗೂಂಡಾಗಳು ಹಲ್ಲೆ ಮಾಡುತ್ತಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗವನ್ನು ಐವರು ನ್ಯಾಯಾಧೀಶರ ಪೀಠವು ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರವನ್ನು ತನಿಖೆ ಮಾಡಲು ನೀಡಿದ್ದ ಆದೇಶವನ್ನು ರಾಜ್ಯ ಸರಕಾರ ಸರ್ವೊಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಮುಖಭಂಗಿತವಾಗಿದೆ. ದಲಿತರ ಮತ್ತು ಆದಿವಾಸಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್, ಎಡಪಕ್ಷಗಳು ಮತ್ತು ಇತರ ವಿರೋಧ ಪಕ್ಷಗಳು ಮಮತಾ ಗೂಂಡಾ ರಾಜ್ಯದಲ್ಲಿ ದಲಿತರ ಮತ್ತು ಆದಿವಾಸಿಗಳ ಕೊಲೆ ಮತ್ತು ಅತ್ಯಾಚಾರಗಳ ಕುರಿತು ಉಸಿರೆತ್ತಲು ಸಿದ್ಧರಿಲ್ಲ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮಮತಾ ಪರವಾಗಿ ಪ್ರಚಾರ ಕೈಗೊಂಡ ಜಯಭಾದುರಿ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುವ ಸಂವೇದನಾಶೀಲತೆಯು ಇಲ್ಲವಾಗಿದೆ.

ವ್ಯವಸ್ಥಿತವಾದ ರೀತಿಯಲ್ಲಿ ಬೀರ್ ಬಮ, ನಂದಿಗ್ರಾಮ, ದಕ್ಷಿಣ ಮತ್ತು ಉತ್ತರ 24 ಪರಗಣ ಮತ್ತು ಕೂಚ್ ಬಿಹಾರ್ ಜಿಲ್ಲೆಗಳಿಂದ ಹಿಂದುಗಳು ಸುರಕ್ಷಿತ ಸ್ಥಳ ವನ್ನು ಅರಸಿಕೊಂಡು ನೆರೆ ರಾಜ್ಯ ಅಸ್ಸಾಂನ ಧುಬ್ರಿ ಜಿಗೆ ಹೋಗಿ ಆಶ್ರಯ ಪಡೆಯಬೇಕಾಗಿದೆ. ಟಿಎಂಸಿ ಗೂಂಡಾಗಳ ದಬ್ಬಾಳಿಕೆಗೆ ಬೆದರಿ ಮನೆ ತೊರೆದು ಬಂದಿದ್ದ ಸಾವಿರಾರು ಜನರಿಗೆ 170 ತಾತ್ಕಾಲಿಕ ಶಿಬಿರಗಳಲ್ಲಿ ಬಿಜೆಪಿ ಆಶ್ರಯ ಕಲ್ಪಿಸಿದೆ.

ಸಂತ್ರಸ್ತ ಕಾರ್ಯಕರ್ತ ರನ್ನು ಕಾಣಲು ಮತ್ತು ಪರಿಸ್ಥಿತಿಯನ್ನು ಅರಿಯಲು ಪಶ್ಚಿಮ ಮಿಡ್ನಾಪುರದ ಪಂಚಖುದಿಗೆ ಹೋದ ಕೇಂದ್ರ ಸಚಿವ ಮುರಳೀಧರನ್ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡುವ ಪ್ರಯತ್ನ ಮಾಡುತ್ತಾರೆ. ಗಲಭೆಗ್ರಸ್ತ ನಂದಿಗ್ರಾಮಕ್ಕೆ ಭೇಟಿ ಕೊಟ್ಟು ನೊಂದವರನ್ನು ಸಂತೈಸಲು ತೆರಳಿದ್ದ ರಾಜ್ಯಪಾಲರ ಕಾರಿಗೆ ಅಡ್ಡಹಾಕಿ ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಗೂಂಡಾ ವರ್ತನೆಗೆ ತಡೆಯಲು ಪೊಲೀಸರು ಕೂಡಾ ಅಸಹಾಯಕರು ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಸ್ಥಿತಿಯೂ ಕಾಶ್ಮೀರದ ಪರಿಸ್ಥಿತಿಗೆ ತಲುಪುವ ದಿನ ದೂರವಿಲ್ಲ. ಬಾಂಗ್ಲಾದೇಶದ ಮುಸ್ಲಿಂಮರು ಗಡಿ ಜಿಲ್ಲೆಗಳಲ್ಲಿ ಸಂಖ್ಯೆ ವೃದ್ಧಿಸಿ ಕೊಂಡು ಆಡಳಿತ ಪಕ್ಷದ ಬೆಂಬಲದಿಂದ ಹಿಂದೂಗಳ ಮೇಲೆ ದೌರ್ಜನ್ಯ ಅತ್ಯಾಚಾರ ಯಾವುದೇ ಭಯವಿಲ್ಲದೆ ನಡೆಸುತ್ತಿದ್ದಾರೆ. ಸಾವಿರಾರು ಜನ ತಮ್ಮ ಪ್ರಾಣ ಮಾನ ಕಾಪಾಡಿಕೊಳ್ಳಲು ತಮ್ಮ ಮನೆಗಳನ್ನು ತೊರೆದು ವಲಸೆ ಹೋಗುವ ದಾರುಣ ಪರಿಸ್ಥಿತಿಯು ಇಲ್ಲಿ ಈಗಾಗಲೇ ನಿರ್ಮಾಣವಾಗಿದೆ.

ಮಮತಾ ಪೈಶಾಚಿಕ ಆಡಳಿತದ ವಿರುದ್ದ ಬಿಜೆಪಿ ಮತ್ತು ಸಂಘದ ಇತರ ಸಂಘಟನೆಗಳು ಇಂದು ಏಕಾಂಗಿಯಾಗಿ ಹೋರಾಡುತ್ತಿದೆ. ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವ ಕಪಟಿಗಳು ಪಶ್ಚಿಮ ಬಂಗಾಳದಲ್ಲಿ ನಡೆದಿರುವ ನೂರಾರು ಅತ್ಯಾಚಾರಗಳ ಬಗ್ಗೆ ಧ್ವನಿಯೆತ್ತದೆ ಆತ್ಮವಂಚನೆ ಮಾಡಿಕೊಂಡಿವೆ. ವ್ಯಾಪಕ ಹಿಂಸಾಚಾರದಲ್ಲಿ ನೂರಾರು ಪ್ರಾಣಗಳು ಬಲಿಯಾಗಿದ್ದರು, ಅದನ್ನು ಖಂಡಿಸುವ ಬದಲು ಮಮತಾರವರನ್ನು ಮೋದಿಯವರನ್ನು ಪರಾಭವಗೊಳಿಸಿದ ಧೀರ ಮಹಿಳೆಯೆಂದು ಆಕೆಯ ಕ್ರೌರ್ಯಕ್ಕೆ ಪರದೆ ಎಳೆಯುವ ನೀಚ ಕೆಲಸದಲ್ಲಿ ವಿರೋಧ ಪಕ್ಷಗಳು ತೊಡಗಿ ತಮ್ಮ ನೈತಿಕ ಶಕ್ತಿಯನ್ನು ಕಳೆದುಕೊಂಡು ಬೆತ್ತಲಾಗಿವೆ.