ಸ್ಫೋಟಕ ಅರ್ಧ ಶತಕ ಸಿಡಿಸಿ ಬಾಂಗ್ಲಾದೇಶಕ್ಕೆ ಜಯ ತಂದುಕೊಟ್ಟ ಮುಷ್ಪಿಕ್ಯೂರ್ ರಹೀಮ್ ಬ್ಯಾಟಿಂಗ್ ಪರಿ.
ಮೊದಲನೇ ಟಿ-20 ಪಂದ್ಯ: ಟೀಮ್ ಇಂಡಿಯಕ್ಕೆೆ ಏಳು ವಿಕೆಟ್ ಸೋಲು ಮುಷ್ಪಿಿಕ್ಯೂರ್ ರಹೀಮ್ 60 ರನ್
ದೆಹಲಿ: ಯುವ ಆಟಗಾರರನ್ನೊೊಳಗೊಂಡ ಭಾರತ ತಂಡ ಮೊದಲನೇ ಟಿ-20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾಾದೇಶ ವಿರುದ್ಧ ಸೋಲು ಅನುಭವಿಸಿತು.
ಮುಷ್ಪಿಿಕ್ಯೂರ್ ರಹೀಮ್ (ಔಟಾಗದೆ 60 ರನ್) ಅವರ ಸ್ಫೋೋಟಕ ಬ್ಯಾಾಟಿಂಗ್ ಬಲದಿಂದ ನೆರವಿನಿಂದ ಬಾಂಗ್ಲಾಾದೇಶ ತಂಡ ಆರಂಭಿಕ ಚುಟುಕು ಪಂದ್ಯದಲ್ಲಿ ಏಳು ವಿಕೆಟ್ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಬಾಂಗ್ಲಾಾ ಹುಲಿಗಳು 1-0 ಮುನ್ನಡೆ ಪಡೆದವು.
ಟೀಮ್ ಇಂಡಿಯಾ ನೀಡಿದ್ದ 149 ರನ್ ಸ್ಪರ್ಧಾತ್ಮಕ ಗುರಿ ಬೆನ್ನತ್ತಿಿದ ಬಾಂಗ್ಲಾಾದೇಶ ಆರಂಭದಲ್ಲಿ ಲಿಟಾನದದ ದಾಸ್ ಅವರ ವಿಕೆಟ್ ಕಳೆದುಕೊಂಡು ಆಘಾತಕ್ಕೆೆ ಸಿಲುಕಿತು. ಆದರೂ, ನಂತರ ಬಂದ ಬ್ಯಾಾಟ್‌ಸ್ ಮನ್ ಗಳು ಜವಾಬ್ದಾಾರಿಯುತ ಬ್ಯಾಾಟಿಂಗ್ ಪ್ರದರ್ಶನ ತೋರಿದರು. ಮೊಹಮ್ಮದ್ ನೈಮ್ 26 ರನ್ ಗಳಿಸಿ ಯಜುವೇಂದ್ರ ಚಾಹಲ್‌ಗೆ ವಿಕೆಟ್ ಒಪ್ಪಿಿಸಿದರು.
ರಹೀಮ್-ಸರ್ಕಾರ್ ಜುಗಲ್‌ಬಂದಿ:
54 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಾಗ ಜತೆಯಾದ ಸೌಮ್ಯ ಸರ್ಕಾರ್ ಹಾಗೂ ಮುಷ್ಪಿಿಕ್ಯೂರ್ ರಹೀಮ್ ಜೋಡಿ ಅದ್ಭುತ ಬ್ಯಾಾಟಿಂಗ್ ಮಾಡಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 60 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. 35 ಎಸೆತಗಳಲ್ಲಿ ಸೌಮ್ಯ ಸರ್ಕಾರ್ 39 ರನ್ ಗಳಿಸಿ ಔಟ್ ಆದರು.
ಕೊನೆಯವರೆಗೂ ಬ್ಯಾಾಟಿಂಗ್ ಮಾಡಿದ ಮುಷ್ಪಿಿಕ್ಯೂರ್ ರಹೀಮ್(ಅಜೇಯ 60 ರನ್) ತಂಡದ ಜವಾಬ್ದಾಾರಿಯನ್ನು ಹೊತ್ತುಕೊಂಡರು. ಅದರಂತೆ ಜವಾಬ್ದಾಾರಿಯುತ ಬ್ಯಾಾಟಿಂಗ್‌ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರ ಆಕರ್ಷಕ ಅರ್ಧ ಶತಕದಲ್ಲಿ ಒಂದು ಸಿಕ್ಸರ್ ಹಾಗೂ ಎಂಟು ಬೌಂಡರಿಗಳಿದ್ದವು. ಒಟ್ಟಾಾರೆ, ಬಾಂಗ್ಲಾಾ 19.3 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 154 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಇಲ್ಲಿನ ಅರುಣ್ ಜೆಟ್ಲಿಿ ಕ್ರಿಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆೆ 148 ರನ್ ದಾಖಲಿಸಿತು.
ನಿರೀಕ್ಷೆೆಯ ಮೂಟೆ ಹೊತ್ತು ಆರಂಭಿಕನಾಗಿ ಕಣಕ್ಕೆೆ ಇಳಿದಿದ್ದ ನಾಯಕ ರೋಹಿತ್ ಶರ್ಮಾ ಕೇವಲ 9 ರನ್ ಗಳಿಸಿ ಔಟ್ ಆದರು. ನಂತರ ಕ್ರೀಸ್‌ಗೆ ಬಂದ ಕೆ.ಎಲ್ ರಾಹುಲ್ 17 ರನ್, ಶ್ರೇಯಸ್ ಅಯ್ಯರ್ 22 ರನ್ ಗಳಿಗೆ ಸೀಮಿತರಾದರು.
ಆರಂಭಿಕನಾಗಿ ಕಣಕ್ಕೆೆ ಇಳಿದಿದ್ದ ಶಿಖರ್ ಧವನ್ ಒಂದು ತುದಿಯಲ್ಲಿ ಜವಾಬ್ದಾಾರಿಯುತ ಬ್ಯಾಾಟಿಂಗ್ ಮಾಡಿದರು. ಒಂದು ತುದಿಯಲ್ಲಿ ನಿಂತು 15 ಓವರ್ ತನಕ ಧವನ್ ಬ್ಯಾಾಟಿಂಗ್ ಮಾಡಿದರು. 42 ಎಸೆತಗಳಲ್ಲಿ ಒಂದು ಸಿಕ್‌ಸ್ ಹಾಗೂ ಮೂರು ಬೌಂಡರಿಯೊಂದಿಗೆ 41 ರನ್ ಗಳಿಸಿದರು. ನಂತರ ರನೌಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಕೆಲ ಕಾಲ ಅದ್ಭುತ ಬ್ಯಾಾಟಿಂಗ್ ಮಾಡಿದ ರಿಷಭ್ ಪಂತ್, 26 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 27 ರನ್ ಗಳಿಸಿ ಶಫಿಯುಲ್‌ಗೆ ಔಟ್ ಆದರು. ಕೊನೆಯ ಹಂತದಲ್ಲಿ ಕೃನಾಲ್ ಪಾಂಡೆ 15 ರನ್ ಹಾಗೂ ವಾಷಿಂಗ್ಟನ್ ಸುಂದರ್ 14 ರನ್ ಗಳಿಸಿದರು. ಬಾಂಗ್ಲಾಾ ಪರ ಅಮಿನುಲ್ ಇಸ್ಲಾಾಂ ಮತ್ತು ಶಫಿಯುಲ್ ಇಸ್ಲಾಾಮ್ ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್ ಗಳಿಗೆ 148/6 (ಶಿಖರ್ ಧವನ್ 41, ರಿಷಭ್ ಪಂತ್ 27, ಶ್ರೇಯಸ್ ಅಯ್ಯರ್ 22, ಕೃನಾಲ್ ಪಾಂಡ್ಯ 15, ಕೆ.ಎಲ್ ರಾಹುಲ್ 15; ಅಮಿನುಲ್ ಇಸ್ಲಾಾಮ್ 22 ಕ್ಕೆೆ 2, ಶಫಿಯುಲ್ ಇಸ್ಲಾಾಂ 36 ಕ್ಕೆೆ 2)
ಬಾಂಗ್ಲಾಾದೇಶ: 19.3 ಓವರ್ ಗಳಿಗೆ 154/3 (ಮುಷ್ಪಿಿಕ್ಯೂರ್ ರಹೀಮ್ ಔಟಾಗದೆ 60, ಸೌಮ್ಯ ಸರ್ಕಾರ್ 39, ಮೊಹಮ್ಮದ್ ನೈಮ್ 26; ದೀಪಕ್ ಚಾಹರ್ 24 ಕ್ಕೆೆ 1, ಯಜುವೇಂದ್ರ ಚಾಹಲ್ 24 ಕ್ಕೆೆ 1, ಖಲೀಲ್ ಅಹಮದ್ 37 ಕ್ಕೆೆ 1)
ಕೊಹ್ಲಿ-ಧೋನಿ ದಾಖಲೆ ಮುರಿದ ರೋಹಿತ್
ಬಾಂಗ್ಲಾಾದೇಶ ವಿರುದ್ಧದ ಮೊದಲನೇ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಎರಡು ದಾಖಲೆ ಬರೆದರು. ಅಂತಾರಾಷ್ಟ್ರೀಯ ಟಿ-20 ಕ್ರಿಿಕೆಟ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ವಿಶ್ವದ ಮೊದಲನೇ ಬ್ಯಾಾಟ್‌ಸ್ ಮನ್ ಎಂಬ ಸಾಧನೆಗೆ ರೋಹಿತ್(2,452 ರನ್) ಭಾಜನರಾದರು. ಆ ಮೂಲಕ ನಿಯಮಿತ ನಾಯಕ ವಿರಾಟ್ ಕೊಹ್ಲಿಿ(2,450 ರನ್) ಅವರನ್ನು ಹಿಂದಿಕ್ಕಿಿದರು. ಜತೆಗೆ, ಅತಿ ಹೆಚ್ಚು ಟಿ-20 ಪಂದ್ಯಗಳಾಡಿದ ಮೊದಲ ಭಾರತೀಯ ಆಟಗಾರ ಎಂಬ ಸಾಧೆನೆ ಮಾಡುವ ಮೂಲಕ ಎಂ.ಎಸ್ ಧೋನಿ (98 ಪಂದ್ಯಗಳು) ಅವರನ್ನು ಹಿಂದಿಕ್ಕಿಿದರು. ರೋಹಿತ್ ಶರ್ಮಾ ಅವರು ಭಾನುವಾರ ಬಾಂಗ್ಲಾಾದೇಶ ವಿರುದ್ಧದ ಪಂದ್ಯ ವೃತ್ತಿಿ ಜೀವನದ 99ನೇ ಪಂದ್ಯವಾಯಿತು.