Saturday, 23rd November 2024

ಚಂಡಮಾರುತ: ಜರ್ಮನಿಯಲ್ಲಿ ಪ್ರವಾಹಕ್ಕೆ 90 ಕ್ಕೂ ಹೆಚ್ಚು ಜನರ ಸಾವು

ಜರ್ಮನಿ : ಜರ್ಮನಿಯ ನೈರುತ್ಯ ರಾಜ್ಯ ರೈನ್ ಲ್ಯಾಂಡ್-ಪಲಾಟಿನೇಟ್ ನ ಅಹ್ರ್ ವೀಲರ್ ಜಿಲ್ಲೆಯಲ್ಲಿ ಪ್ರವಾಹದ ಪರಿಣಾಮ, 90 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, 618 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಈಗಲೂ ವಿದ್ಯುತ್, ದೂರವಾಣಿ ಸಂಪರ್ಕ ಇಲ್ಲ. ಕೆಟ್ಟ ಹವಾಮಾನದಿಂದಾಗಿ, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಈ ಪ್ರದೇಶಕ್ಕೆ ಪ್ರಯಾಣಿಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಚಂಡಮಾರುತದಿಂದ ಜರ್ಮನಿಯಲ್ಲಿ ಭಾರೀ ಮಳೆಯಾಗಿದ್ದು, ವರದಿ ಪ್ರಕಾರ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ತುರ್ತು ಸೇವೆಗಳು, ಮತ್ತು ಬುಂಡೆಸ್ವೆಹ್ರ್ ನ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.