Tuesday, 5th November 2024

ಹಿಡಿ ಖಾಸಗಿ ಶಾಲೆಗಳ ಶಿಕ್ಷಕರಿಗೆ ಉಚಿತ ಆರೋಗ್ಯ ಕಾರ್ಡ್ ನೀಡುವುದೇ ನನ್ನ ಮುಖ್ಯ ಗುರಿ: ಎ.ನಾರಾಯಣ ಸ್ವಾಮಿ

ಪಾವಗಡ : ಪಟ್ಟಣದ ವಿ.ಎಸ್.ಆಂಗ್ಲ ಶಾಲೆಯಲ್ಲಿ ಮ್ಮಿಕೊಳ್ಳಲಾಗಿದ್ದ ಡಾ.ವೈ.ಎ.ಎನ್.ಬಳಗ ಮತ್ತು ಚಿದಾನಂದ ಎಂ.ಗೌಡ ಸ್ನೇಹಿತ ಬಳಗದ ವತಿಯಿಂದ ಕೋವಿಡ್ 19 ರ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಅರ್ಹ ಶಿಕ್ಷಕರಿಗೆ ಮತ್ತು ಉಪನ್ಯಾಸಕ ಬಳಗದ ವತಿಯಿಂದ ಆಹಾರದ ಕಿಟ್ಟನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಬಳಿಕ ಮಾತನಾಡಿದ ಅವರು ಕೋವಿಡ್ ವೇಳೆ, ರಾಜ್ಯದ 125 ಶಿಕ್ಷಕರು ಮರಣ ಹೊಂದಿದ್ದಾರೆ. ಎಂ.ಎ.ಬಿಎಡ್ ಆದಂತಹ ಶಿಕ್ಚಕರಿಗೆ ಇಪ್ಪತೈದು ಸಾವಿರ ಕನಿಷ್ಠ ವೇತನ ನೀಡಬೇಕು ಎಂದರು.  ಕೋವಿಡ್ ಸಮಯದಲ್ಲಿಯೂ ಸಹ ಸರ್ಕಾರಿ ಶಿಕ್ಷಕರಿಗೆ ವೇತನ ನೀಡಿದ ಏಕೈಕ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ.

ನಂತರ ಆಗ್ನೇಯ ಪದವಿದರ ಕ್ಷೇತ್ರದ ಶಾಸಕರಾದ ಎಂ.ಚಿದಾನಂದ ಗೌಡ ಮಾತನಾಡಿ ಖಾಸಗಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ಪಡೆದು ಕರ್ತವ್ಯ ನಿರ್ವಹಣೆ ಮಾಡುವ ಶಿಕ್ಷಕರಿಗೆ ಕಡಿಮೆ ಸಂಬಳವನ್ನು ನೀಡುವುದು ಸರಿಯಲ್ಲ. ಸರ್ಕಾರದ ನಿಯಮಗಳ ಪ್ರಕಾರ ಕನಿಷ್ಠ ವೇತನ ನೀಡಬೇಕು. ನಿರುದ್ಯೋಗ ಪದವಿದಾರರು ಸಹ ನನಗೆ ಮತಹಾಕಿ ಗೆಲ್ಲಿಸಿದ್ದಾರೆ. ಅವರಿಗೂ ಧನ್ಯವಾದ ಹೇಳಬೇಕು. ಪೋಷಕರು ಮಕ್ಕಳಿಗೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ತಮ್ಮ ತಮ್ಮ ಮಕ್ಕಳ ವಿದ್ಯಾಭ್ಯಾಸ ಶ್ರಮಿಸಬೇಕು ಎಂದರು. ಈ ವೇಳೆ, ಖಾಸಗಿ ಶಾಲೆಯ 300 ಜನ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಎಂ.ರೇವಣ್ಣಸಿದ್ದಯ್ಯ, ಬಿಇಒ ಅಶ್ವತ್ಥ ನಾರಾಯಣ, ಬಿ.ಆರ್.ಸಿ.ಪವನ್ ಕುಮಾರ್ ರೆಡ್ಡಿ, ಶಿಕ್ಷಕರಾದ ತಿಮ್ಮಾಬೋವಿ, ಅಶೋಕ ಕುಮಾರ್, ನರಸಿಂಹ ಮೂರ್ತಿ, ರವಿಂದ್ರ ಇತರೆ ನೂರಾರು ಮಂದಿ ಶಿಕ್ಷಕರು ಭಾಗವಹಿಸಿದ್ದರು.