Friday, 22nd November 2024

ಆಗಸ್ಟ್ 10ರಂದು ಎಸ್‌ಎಸ್‌ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು : ಕರೋನಾ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ಈ ಬಾರಿ ಎರಡು ದಿನ ಮಾತ್ರ ನಡೆಯುತ್ತಿದ್ದು, ಆಗಸ್ಟ್ 10ಕ್ಕೆ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಜುಲೈ 19 ರಂದು ನಡೆದ ಮೊದಲ ಪತ್ರಿಕೆ ಪರೀಕ್ಷೆ ಪೂರ್ಣ ಯಶಸ್ವಿಯಾಗಿದ್ದು, ಶೇ. 99.6 ರಷ್ಟು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಜು.22ರಂದು ನಡೆಯಲಿರುವ ಭಾಷಾ ವಿಷಯಗಳ ಪರೀಕ್ಷೆಗೆ ಎಲ್ಲ ಸಿದ್ಧತೆಗಳಾಗಿವೆ ಎಂದು ತಿಳಿಸಿದರು.

ಈ ಬಾರಿಯ ಪರೀಕ್ಷೆಯಲ್ಲಿ ಕೇವಲ ಬಹು ಆಯ್ಕೆ ಮಾದರಿ ಉತ್ತರಗಳಲ್ಲಿ ಸರಿ ಉತ್ತರಗಳನ್ನು ಓಎಂಆರ್ ಶೀಟ್ ನಲ್ಲಿ ಗುರುತಿಸಬೇಕಷ್ಟೇ. ಹಾಗಾಗಿ ಮೌಲ್ಯ ಮಾಪನಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆ. 10ಕ್ಕೆ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.