ಫಿರೋಜಾಬಾದ್ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಅಶ್ಲೀಲ ಫೇಸ್ಬುಕ್ ಪೋಸ್ಟ್ ಪ್ರಕಟಿಸಿದ್ದ ಉತ್ತರಪ್ರದೇಶದ ಫಿರೋಜಾಬಾದ್ನ ಪ್ರೊಫೆಸರ್ ಶಹರ್ಯರ್ ಅಲಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದೆ ಶರಣಾದ ಅಲಿ, ಜಾಮೀನು ಕೋರಿದರು. ಜಾಮೀನು ನಿರಾಕರಿಸಿದ ಕೋರ್ಟ್ ಅವರ ಬಂಧನಕ್ಕೆ ಆದೇಶಿಸಿದೆ. ಫಿರೋಜಾಬಾದ್ನ ಎಸ್ಆರ್ಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಹರ್ಯಾರ್ ಅಲಿ, ಕಳೆದ ಮಾರ್ಚ್ ತಿಂಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಬಗ್ಗೆ ಅವಹೇಳನಕಾರಿ ಸಾಮಗ್ರಿಯನ್ನು ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದರು.
ಬಂಧನದಿಂದ ರಕ್ಷಣೆ ಕೋರಿ, ಪ್ರೊಫೆಸರ್ ಅಲಿ, ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕರಿಸಲ್ಪಟ್ಟ ಮೇಲೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಅವರು ಸೆಷನ್ಸ್ ನ್ಯಾಯಾಲಯದ ಮುಂದೆ ಆತ್ಮ ಸಮರ್ಪಣೆ ಮಾಡಿಕೊಂಡರು ಎನ್ನಲಾಗಿದೆ.