Saturday, 23rd November 2024

ಟ್ರ್ಯಾಕ್ಟರ್​ ಚಲಾಯಿಸಿ ರೈತರಿಗೆ ಬೆಂಬಲ ಸೂಚಿಸಿದ ರಾಗಾ

ನವದೆಹಲಿ: ನೂತನ ಕೃಷಿ ಮಸೂದೆಯನ್ನ ವಿರೋಧಿಸಿ ಸಂಸದ ರಾಹುಲ್​ ಗಾಂಧಿ ಸ್ವತಃ ಸಂಸತ್ತಿಗೆ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ನೂತನ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಸುಗ್ರೀವಾಜ್ಞೆ 2020, ಅಗತ್ಯ ಸರಕುಗಳ ಸುಗ್ರೀವಾಜ್ಞೆ 2020 ಹಾಗೂ ರೈತರ ಬೆಲೆಗಳ ಖಾತರಿ ಒಪ್ಪಂದದ ಭರವಸೆ ಹಾಗೂ ಕೃಷಿ ಸೇವೆಗಳ ಸುಗ್ರೀವಾಜ್ಞೆ 2020 ಇವು ಮೂರು ನೂತನ ಕೃಷಿ ಮಸೂದೆಗಳಗಾಗಿವೆ.

ಆದರೆ ಮಸೂದೆಗಳಿಂದ ಕೇಂದ್ರ ಸರ್ಕಾರವು ರಾಜ್ಯಗಳಿಂದ ಅಕ್ಕಿ ಹಾಗೂ ಗೋಧಿ ಖರೀದಿ ಮಾಡುವುದನ್ನು ನಿಲ್ಲಿಸಿ ಬಿಡಬಹುದು. ಇದರಿಂದ ಬೆಳೆಯನ್ನು ಮಾರಾಟ ಮಾಡುವ ಸಂಪೂರ್ಣ ಹೊರೆ ರೈತರ ಮೇಲೆ ಬಂದುಬಿಡಬಹುದು. ಹಾಗೂ ಸರ್ಕಾರವು ಸಂಗ್ರಹ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ನಿಲ್ಲಿಸಿ ಬಿಡಬಹುದು ಎಂದು ಆತಂಕ ರೈತರದ್ದಾಗಿದೆ.