Friday, 22nd November 2024

ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ: 209 ಮಂದಿ ಸಾವು, ಎಂಟು ಜನ ನಾಪತ್ತೆ

ಮಹಾರಾಷ್ಟ್ರ: ವರುಣನ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಇದುವರೆಗೂ 209 ಮಂದಿ ಮೃತಪಟ್ಟು, ಎಂಟು ಜನ ನಾಪತ್ತೆ ಯಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ವಸಿಸ್ತಿ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, 43 ರಸ್ತೆಗಳು ಹಲವು ಸೇತುವೆಗಳಿಗೆ ಹಾನಿಯಾಗಿದೆ. 4,34,185 ಜನರು ಪ್ರವಾಹ ಪೀಡಿತರಾಗಿದ್ದಾರೆ. ಥಾಣೆ, ಕೊಲ್ಹಾಪುರ, ಸಾಂಗ್ಲಿ, ರತ್ನಗಿರಿ, ಸತಾರ ಜಿಲ್ಲೆ ಗಳಲ್ಲಿ ರಾಜ್ಯ ವಿಪತ್ತು ನಿರ್ವಹಣ ಮತ್ತು ಎನ್​ಡಿಆರ್​ಎಫ್​​ ತಂಡ ರಕ್ಷಣಾ ಕಾರ್ಯಾಚರಣೆ ಮುಂದುವರೆ ಸಿದೆ.

ಸಾಂಘ್ಲಿಯಲ್ಲಿ ಹೆಚ್ಚಾಗಿ ಮಳೆ ಬಾರದಿದ್ದರೂ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಅಣೆಕಟ್ಟಿನಿಂದ ಹೊರ ಬರುತ್ತಿರುವ ಹೆಚ್ಚಿನ ಪ್ರಮಾಣದ ನೀರಿನಿಂದ ಸಮಸ್ಯೆ ಯಾಗಿದೆ. ಒಟ್ಟು 308 ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ನದಿಪಾತ್ರಗಳ ಜನರನ್ನೆಲ್ಲ ಇಲ್ಲಿ ಕರೆದುಕೊಂಡು ಬರಲಾಗುತ್ತಿದೆ.