Saturday, 23rd November 2024

ಬಾಕ್ಸರ್ ಮೇರಿ ಕೋಮ್ ಹೋರಾಟ ಅಂತ್ಯ: ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು

ಟೋಕಿಯೊ: ಭಾರತದ ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್, ಟೋಕಿಯೊ ಒಲಿಂಪಿಕ್ಸ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿ ದ್ದಾರೆ.

ಮಹಿಳೆಯರ 51 ಕೆ.ಜಿ.ವಿಭಾಗದಲ್ಲಿ 16ರ ಸುತ್ತಿನ ಹೋರಾಟದಲ್ಲಿ ಮೇರಿ ಕೋಮ್, ಕೊಲಂಬಿಯಾದ ಇಂಗ್ರಿಟ್‌ ವಲೆನ್ಸಿಯಾ ವಿರುದ್ಧ 2-3ರಿಂದ ಸೋಲು ಅನುಭವಿಸಿದರು. ತಮ್ಮ ಕೊನೆಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ 38 ವರ್ಷದ ಮೇರಿ ಕೋಮ್ ಅವರಿಗೆ ಎದುರಾಳಿಯ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯ ವಾಗಲಿಲ್ಲ.

2021ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಮೊದಲ ರೌಂಡ್‌ನಲ್ಲಿ 1-4ರ ಹಿನ್ನಡೆ ಅನುಭವಿಸಿದರು. ಪಂದ್ಯ ಮುಗಿದ ಬಳಿಕ ಮೇರಿ ಕೋಮ್ ಅತ್ಯಂತ ಭಾವುಕರಾದರು.

32 ವರ್ಷದ ವಲೆನ್ಸಿಯಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೇ ಮೊದಲ ಬಾರಿಗೆ ಮೇರಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.