ತಾಲೂಕಿನ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ನಂದೀಶ್ ಹಂಚೆ ಅವರು ಭಾಷಣದ ವೇಳೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಟೀಕಿಸಿರುವುದು.
ಬಿಜೆಪಿ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಹಂಚೆ ಇವರ ಆಯ್ಕೆೆಗೆ ಭಾರಿ ವಿರೋಧ
ಕೇಂದ್ರದ ಬಿಜೆಪಿ ನಡೆ ಮತ್ತು ನರೇಂದ್ರ ಮೋದಿ ಅವರ ಉಡುಗೆ ಬಗ್ಗೆೆ ಟೀಕಿಸಿ ವಿರೋಧಿ ಪಾಳೆಯದಲ್ಲಿ ಚಪ್ಪಾಾಳೆ ಗಿಟ್ಟಿಿಸಿಕೊಂಡಿದ್ದ ವ್ಯಕ್ತಿಿ ಇದೀಗ ಬಿಜೆಪಿ ಸರಕಾರದಲ್ಲಿ ಪುಸ್ತಕ ಪ್ರಾಾಧಿಕಾರದ ಅಧ್ಯಕ್ಷ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಾಪ್ತಿಿಯ ಪ್ರಾಾಧಿಕಾರಗಳಿಗೆ ನೇಮಕಗೊಂಡಿರುವ ಅಧ್ಯಕ್ಷರನ್ನು ಸರಕಾರವು ಒತ್ತಡಕ್ಕೆೆ ಮಣಿದು ನೇಮಕ ಮಾಡಿಕೊಂಡಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಅದರಲ್ಲೂ ಪುಸ್ತಕ ಹಿರಿಯರನ್ನೆೆಲ್ಲ ಹಿಂದಿಕ್ಕಿಿ ಡಾ. ನಂದೀಶ್ ಹಂಚೆ ಅಧ್ಯಕ್ಷರಾದಾಗಲಂತೂ ಅವರ ಹಿಂದೆ ಪ್ರಬಲ ಕೃಪಾಕಟಾಕ್ಷವೊಂದಿದೆ ಎಂಬ ಭಾವನೆ ಬಲವಾಗಿತ್ತು. ಈ ಕೃಪಾಕಟಾಕ್ಷದ ಫಲ ಅವರ ಹಿಂದಿನ ಬಿಜೆಪಿ ವಿರೋಧಿ ಧೋರಣೆಯನ್ನು ಮರೆಮಾಚುವಷ್ಟರ ಮಟ್ಟಿಿಗೆ ಕೆಲಸ ಮಾಡಿರುವುದು ಮಾತ್ರ ನಿಗೂಢ.
ನಂದೀಶ್ ಹಂಚೆ ಈ ಹಿಂದೆ ಜೆಡಿಎಸ್ ಪಾಳೆಯದಲ್ಲಿ ಗುರುತಿಸಿಕೊಂಡು ಕಾಂಗ್ರೆೆಸ್ ಮತ್ತು ಬಿಜೆಪಿ ನಾಯಕರನ್ನು ನಿಂದಿಸುತ್ತಾಾ ಓಡಾಡುತ್ತಿಿದ್ದರು. ಮೋದಿ ಮತ್ತು ಬಿಜೆಪಿ ಸಿದ್ಧಾಾಂತಗಳು ಕೂಡ ಇವರಿಗೆ ಅಪಥ್ಯವಾಗಿದ್ದವು ಎಂಬ ಸತ್ಯ ಬಹಿರಂಗವಾಗಿದೆ. ಹೀಗಿದ್ದರೂ ಇವರನ್ನು ಪುಸ್ತಕ ಪ್ರಾಾಧಿಕಾರದ ಅಧ್ಯಕ್ಷರಾಗಿ ಆಯ್ಕೆೆ ಮಾಡಿದ್ದು ಏಕೆ ಎಂಬ ಅನುಮಾನ ಸಾಂಸ್ಕೃತಿಕ ವಲಯವನ್ನು ಕಾಡುತ್ತಿಿದೆ.
ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ನಂದೀಶ್ ಹಂಚೆ ಅವರನ್ನು 2015ರ ಜುಲೈನಲ್ಲಿ ಕಡಕೋಳದಲ್ಲಿ ಜೆಡಿಎಸ್ ನಾಯಕರ ಸಾರಥ್ಯದಲ್ಲಿ ನಡೆದ ಮೈಸೂರು ತಾಲೂಕಿನ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಾಗಿ ನೇಮಕ ಮಾಡಲಾಗಿತ್ತು. ಈ ಸಮಾರಂಭದ ಅಧ್ಯಕ್ಷ ಭಾಷಣವನ್ನು ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಸಿದ್ಧಪಡಿಸಲಾಗಿತ್ತು.
ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಹಂಚೆ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿಿ ಬೆಳೆದ ಮಹಾತ್ಮ ಗಾಂಧೀಜಿ ಅವರು ಸ್ವಾಾತಂತ್ರ್ಯಕ್ಕಾಾಗಿ ಬ್ರಿಿಟಿಷರ ವಿರುದ್ಧ ನಡೆಸಿದ ಹೋರಾಟದಲ್ಲಿ ಫಕೀರನಂತೆ ನಡೆದುಕೊಂಡರು. ಆದರೆ, ಬಡ ಕುಟುಂಬದಲ್ಲಿ ಹುಟ್ಟಿಿದ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರ ಭೇಟಿಗೆ 10 ಲಕ್ಷ ರುಪಾಯಿ ಬೆಲೆಬಾಳುವ ವಿದೇಶಿ ಕೋಟು ಧರಿಸುತ್ತಾಾರೆ. ಜತೆಗೆ, ಅದರ ಮೇಲೆ ಮೋದಿ ಎಂದು ಬರೆಸಿಕೊಳ್ಳುತ್ತಾಾರೆ. ನನಗೆ ಗಾಂಧೀಜಿ ಅವರು ಜೈನ ತೀರ್ಥಂಕರರಂತೆ, ಮೋದಿ ಸಾಮ್ರಾಾಜ್ಯಶಾಹಿ ಭರತನಂತೆ ಕಾಣುತ್ತಾಾರೆ. ಇವರ ಎಲ್ಲ ಹಳ್ಳಿಿಗಳನ್ನು ಸ್ಮಶಾನ ಮಾಡುವ ಅಥವಾ ಪ್ರೇತಾತ್ಮಗಳ ಆವಾಸ ಸ್ಥಾಾನವನ್ನಾಾಗಿಸುವ ಹುನ್ನಾಾರದಂತೆ ಕಾಣುತ್ತಿಿದೆ ಎಂದು ಟೀಕಿಸಿದ್ದರು.
ಕೆಲವೇ ವರ್ಷಗಳ ಹಿಂದೆ ಮೋದಿ ನಡೆಯನ್ನು, ಬಿಜೆಪಿ ಸಿದ್ಧಾಾಂತಗಳನ್ನು ಟೀಕಿಸುತ್ತಿಿದ್ದ ವ್ಯಕ್ತಿಿ ಇದ್ದಕ್ಕಿಿದ್ದಂತೆ ಯಡಿಯೂರಪ್ಪ ಅವರಿಗೆ ಆಪ್ತವಾಗಿದ್ದು ಏಕೆ? ಇದರ ಹಿಂದೆ ಪ್ರಭಾವವಲ್ಲದೆ ಬೇರೆ ಏನು ಕೆಲಸ ಮಾಡಿದೆ ಎಂಬುದನ್ನು ಊಹಿಸಲಾರದಷ್ಟು ಕಷ್ಟಕರವೇನಲ್ಲ. ಒಟ್ಟಾಾರೆ, ಪಕ್ಷದ ಸಿದ್ಧಾಾಂತಗಳನ್ನು ವಿರೋಧಿಸಿದವರಿಗೆ ಸರಕಾರದಲ್ಲಿ ಸ್ಥಾಾನಮಾನ ಕಲ್ಪಿಿಸುವ ಮೂಲಕ ಪಕ್ಷಕ್ಕಾಾಗಿ ದುಡಿದ ಮತ್ತು ಪಕ್ಷದ ಸಿದ್ಧಾಾಂತಗಳ ಅಡಿಯಲ್ಲಿ ವ್ಯಕ್ತಿಿಗಳಿಗೆ ಇರುಸು-ಮುರುಸು ತಂದೊಡ್ಡುತ್ತಿಿದೆ.
ಬಿಜೆಪಿ ಸಿದ್ಧಾಾಂತಗಳನ್ನು ಮತ್ತು ನರೇಂದ್ರ ಮೋದಿ ಅವರ ನಡೆಯನ್ನು ಟೀಕಿಸುತ್ತಿಿದ್ದ ವ್ಯಕ್ತಿಿ ಇದ್ದಕ್ಕಿಿದ್ದಂತೆ ಪ್ರಮುಖ ಹುದ್ದೆೆಯೊಂದರ ಮೇಲೆ ಕಣ್ಣಿಿಟ್ಟು ತಮ್ಮ ಸಿದ್ಧಾಾಂತ ಬದಲಾಯಿಸಿಕೊಂಡರೋ ಅಥವಾ ಸರಕಾರವು ಸೈದ್ಧಾಾಂತಿಕ ಭಿನ್ನಾಾಭಿಪ್ರಾಾಯ ತೋರದೆ ಅರ್ಹತೆ ಮಾನದಂಡದಲ್ಲಿ ಪ್ರಾಾಧಿಕಾರದ ಅಧ್ಯಕ್ಷ ಸ್ಥಾಾನಗಳಿಗೆ ನೇಮಕ ಮಾಡಿತೋ? ಪ್ರಬಲ ಶಿಫಾರಸ್ಸಿಿಗೆ ಮಣಿದು ಸೈದ್ಧಾಾಂತಿಕ ವೈರತ್ವ ಮರೆತು ನಂದೀಶ್ ಹಂಚೆ ಅವರನ್ನು ನೇಮಿಸಿತೋ? ಬಿಜೆಪಿ ಸಿದ್ಧಾಾಂತಗಳಲ್ಲಿ ಬೆಳೆದ ವ್ಯಕ್ತಿಿಗಳ ಕೊರತೆಯಿಂದ ಹಂಚೆ ಅವರು ಎಂಬುದು ಮಾತ್ರ ನಿಗೂಢವಾಗಿಯೇ ಇದೆ.
ಒಟ್ಟಾಾರೆ, ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ ಹಂಚೆ ಅವರನ್ನು ಹತ್ತಿಿರದಿಂದ ಬಲ್ಲ ಬಿಜೆಪಿ ಮತ್ತು ಬಲಪಂಥೀಯ ಸಾಹಿತ್ಯಿಿಕ ವಲಯದಲ್ಲಿ ಹಂಚೆ ಅವರ ಬಿಜೆಪಿ ವಿರೋಧಿ ಧೋರಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿಿದ್ದ ನೀತಿಯನ್ನು ಇಷ್ಟು ಬೇಗನೇ ಪಕ್ಷದ ನಾಯಕರು ಮರೆತ ಬಗ್ಗೆೆ ಮಾತ್ರ ಬಹಳ ಬೇಸರವಿದೆ.
ನೇಮಕ ವಿರೋಧಿಸಿ ಸಚಿವರಿಗೆ ಪತ್ರ
ಬಿಜೆಪಿ ವಿರೋಧಿ ವ್ಯಕ್ತಿಿಯನ್ನು ಪ್ರಭಾವಕ್ಕೊೊಳಗಾಗಿ ಪ್ರಾಾಧಿಕಾರದ ಸ್ಥಾಾನಕ್ಕೆೆ ನೇಮಕ ಮಾಡಿರುವ ಸಂಬಂಧ ಮೈಸೂರಿನ ಬಿಜೆಪಿ ಬೆಂಬಲಿತ ಸಾಂಸ್ಕೃತಿಕ ವಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಅವರಿಗೆ ಪತ್ರ ಬರೆಯುವ ಮೂಲಕ ಆಕ್ರೋೋಶ ವ್ಯಕ್ತಪಡಿಸಿವೆ. ಮೋದಿ ಅವರ ವಿರುದ್ಧ ನಂದೀಶ್ ಹಂಚೆ ಮಾಡಿರುವ ಟೀಕೆಗಳನ್ನು ಅವರ ಗಮನಕ್ಕೆೆ ತಂದು ಸ್ಥಾಾನದಿಂದ ವಜಾಗೊಳಿಸುವಂತೆ ಒತ್ತಾಾಯಿಸಿದೆ. ಜತೆಗೆ, ಒತ್ತಡಕ್ಕೆೆ ಒಳಗಾಗಿ ಇವರ ನೇಮಕಕ್ಕೆೆ ಮುಂದಾದ ಮುಖ್ಯಮಂತ್ರಿಿ ಯಡಿಯೂರಪ್ಪ ಅವರ ವಿರುದ್ಧವೂ ಆಕ್ರೋೋಶ ವ್ಯಕ್ತಪಡಿಸಿದೆ.