Friday, 22nd November 2024

ಐದನೇ ದಿನದಾಟಕ್ಕೆ ವರುಣನ ಅಡ್ಡಿ

ನಾಟಿಂಗ್‌ಹ್ಯಾಂ: ಇಂಗ್ಲೆಂಡ್‌ ಎದುರು ಗೆಲುವು ಸಾಧಿಸಲು ಭಾರತ ತಂಡವು 157 ರನ್‌ ಗಳಿಸ ಬೇಕಿದೆ. ಆದರೆ, ಮಳೆಯು ಭಾರತದ ಗೆಲುವಿನ ಆಟಕ್ಕೆ ಪ್ರಮುಖ ಅಡಚಣೆಯಾಗಿ ಪರಿಣಮಿಸಿದೆ. ಮೊದಲ ಟೆಸ್ಟ್ ಪಂದ್ಯದ ಐದನೇ ದಿನದ ಆಟಕ್ಕೆ ಮಳೆಯಿಂದ ಅಡ್ಡಿಯಾಗಿದೆ.

ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 303 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 209 ರನ್ ಗುರಿ ನೀಡಿತು. ಬ್ಯಾಟಿಂಗ್‌ ಆರಂಭಿಸಿದ ಭಾರತ ಒಂದು ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿದೆ. 26 ರನ್‌ ಗಳಿಸಿದ್ದ ಕೆ.ಎಲ್‌.ರಾಹುಲ್‌, ಸ್ಟುವರ್ಟ್‌ ಬ್ರಾಡ್‌ ಎಸೆತದಲ್ಲಿ ಕ್ಯಾಚ್‌ ಕೊಟ್ಟು ಹೊರ ನಡೆದರು. ರೋಹಿತ್‌ ಶರ್ಮಾ (12) ಮತ್ತು ಚೇತೇಶ್ವರ್ ಪೂಜಾರಾ (12) ಕಣದಲ್ಲಿದ್ದಾರೆ. ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ 157 ರನ್‌ ಅಗತ್ಯವಿದೆ.

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್ 109 ರನ್ ಸಿಡಿಸಿದರು. ಭಾರತದ ಬೌಲರ್‌ಗಳ ಪೈಕಿ ಜಸ್‌ಪ್ರೀತ್ ಬೂಮ್ರಾ 64 ರನ್ ನೀಡಿ 5 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 278 ರನ್‌ಗೆ ಆಲೌಟ್ ಆಗಿತ್ತು. ಇಂಗ್ಲೆಂಡ್, 183 ರನ್‌ ಗಳಿಸಿತ್ತು.

ಸ್ಕೋರ್ ಪಟ್ಟಿ

ಇಂಗ್ಲೆಂಡ್: 183 ಮತ್ತು 303
ಭಾರತ: 278 ಮತ್ತು 52/1