ಅಗತ್ಯ ತುರ್ತು ಸೇವೆಗಳ ಸೌಲಭ್ಯ ಕೆಲ ಜಿಲ್ಲೆೆಗಳಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಕಿರಿಯ ವೈದ್ಯರು ಮಾಡುತ್ತಿಿರುವ ಪ್ರತಿಭಟನೆ ಏಳನೇ ದಿನಕ್ಕೆೆ ಕಾಲಿಟ್ಟಿಿದ್ದು, ಶುಕ್ರವಾರ ರಾಜ್ಯಾಾದ್ಯಂತ ಹೊರರೋಗಿಗಳ ವಿಭಾಗ (ಒಪಿಡಿ) ಬಂದ್ ಆಗಲಿವೆ. ಇದರ ಪ್ರಭಾವ ರೋಗಿಗಳ ಮೇಲೆ ಬೀರಲಿದೆ.
ಶುಕ್ರವಾರ 6 ಗಂಟೆಯಿಂದ ಶನಿವಾರ ಬೆಳಗ್ಗೆೆ 6 ಗಂಟೆವರೆಗೂ ಒಪಿಡಿ ಬಂದ್ ಮಾಡಲು ಐಎಂಎ ಕರೆ ನೀಡಿದೆ. ಹಾಗಾಗಿ ಅಗತ್ಯ ತುರ್ತು ಸೇವೆಗಳು ಮಾತ್ರ ದೊರೆಯಲಿವೆ. ಕೆಲ ಜಿಲ್ಲೆೆಗಳಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ನ.1ರಂದು ಬೆಂಗಳೂರಿನ ಮಿಂಟೊ ಆಸ್ಪತ್ರೆೆಯಲ್ಲಿ ಕಣ್ಣು ಕಳೆದುಕೊಂಡಿರುವ ಸಂತ್ರಸ್ತರ ಪರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟ ಮಾಡುವ ಸಂದರ್ಭದಲ್ಲಿ ಕಿರಿಯ ವೈದ್ಯರೊಬ್ಬರ ಮೇಲೆ ಹಲ್ಲೆೆ ಮಾಡಿದ್ದಾಾರೆಂದು ಆರೋಪಿಸಿ ವೈದ್ಯರು ಕಳೆದ ದಿನಗಳಿಂದ ಪ್ರತಿಭಟನೆ ಮಾಡುತ್ತಿಿದ್ದಾಾರೆ. ಇದೀಗ ಸಂತ್ರಸ್ತರ ನೋವಿಗೆ ಸ್ಪಂದಿಸದ ವೈದ್ಯರು ಹಲ್ಲೆೆ ನಡೆದಿರುವ ಪ್ರಕರಣವನ್ನೇ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿಿದ್ದಾಾರೆ. ಹಲ್ಲೆೆ ನಡೆಸಿರುವ ಕುರಿತು ವಿಚಾರಣೆ ನಡೆಸಲು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದರೂ ಮೊಂಡುತನದಿಂದ ಪ್ರತಿಭಟನೆ ಮುಂದುವರಿಸಿದ್ದಾಾರೆ.
ದೃಷ್ಟಿಿ ಕಳೆದುಕೊಂಡವರಿಗೆ ನ್ಯಾಾಯ ಒದಗಿಸಲು ಕರವೇ ಮಹಿಳಾ ಘಟಕದ ಅಧ್ಯಕ್ಷೆೆ ಅಶ್ವಿಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆೆಗೆ ತೆರಳಿದ್ದರು. ಆಗ ಕರವೇ ಕಾರ್ಯಕರ್ತರು-ವೈದ್ಯರ ವಾಗ್ವಾಾದ ಇಂಗ್ಲಿಿಷ್, ಕನ್ನಡ ಹೋರಾಟದ ರೂಪ ಅಲ್ಲದೆ, ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ವೈದ್ಯರ ದೂರು. ರೋಗಿಗಳಿಗೆ ಆಗುತ್ತಿಿರುವ ತೊಂದರೆ ಅರ್ಥ ಮಾಡಿಕೊಳ್ಳದೆ ಹಿರಿಯ ವೈದ್ಯರ ಕುಮ್ಮಕ್ಕಿಿನಿಂದ ಪ್ರತಿಭಟನೆ ಕೈಬಿಡದಿರುವ ಶಂಕೆ ಇದೆ. ಗುರುವಾರ ನಡೆದ ಪ್ರತಿಭಟನೆಯಿಂದ ಚಿಕಿತ್ಸೆೆಯಲ್ಲಿ ವ್ಯತ್ಯ ಉಂಟಾಗಿತ್ತು.
ರೋಗಿಗಳಿಗೆ ತೊಂದರೆಯಾಗುತ್ತಿಿರುವ ವಿಚಾರ ಪರಿಗಣಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬುಧವಾರ ಮನವಿ ಮಾಡಿದರೂ ವೈದ್ಯರು ಪ್ರತಿಭಟನೆಯಲ್ಲಿ ಕೈಬಿಟ್ಟಿಿಲ್ಲ. ರಾಜ್ಯಾಾದ್ಯಂತ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಮುಂತಾದ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಶ್ವಿಿನಿ ಗೌಡ ಅವರ ಬಂಧನಕ್ಕೆೆ ಆಗ್ರಹಿಸುತ್ತಿಿವೆ. ವಿಕ್ಟೋೋರಿಯಾ, ವಾಣಿ ವಿಲಾಸ್, ಮಿಂಟೊ ಆಸ್ಪತ್ರೆೆ ಕಿರಿಯ ವೈದ್ಯರು ಮತ್ತು ವಿದ್ಯಾಾರ್ಥಿಗಳು ಪ್ರತಿಭಟನೆಯ ರೂವಾರಿಗಳಾಗಿದ್ದಾಾರೆ.
ಆಸ್ಪತ್ರೆೆಗಳಲ್ಲಿ ಕಡ್ಡಾಾಯ ಹಾಜರಿಗೆ ಇಲಾಖೆ ಸೂಚನೆ
ಖಾಸಗಿ ಆಸ್ಪತ್ರೆೆ ವೈದ್ಯರು ಹಾಗೂ ಹಲವು ಸಂಘಟನೆಗಳು ರಾಜ್ಯಾಾದ್ಯಂತ ಬಂದ್ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಹಲವೆಡೆ ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ. ಜನರಿಗೆ ತೊಂದರೆ ಆಗದಂತೆ ಸರಕಾರಿ ಆಸ್ಪತ್ರೆೆಗಳು ಮತ್ತು ಆರೋಗ್ಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕು. ವೈದ್ಯರು ಮತ್ತು ವೈದ್ಯಕೀಯ ಸಹಾಯಕರು (ಶುಕ್ರವಾರ) ರಜೆ ರದ್ದುಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆೆಗಳ ಹೊರ ರೋಗಿಗಳ ವಿಭಾಗ ಬಂದ್ ಮಾಡಲಿದ್ದೇವೆ. ಮೂರು ದಿನಗಳ ಹಿಂದೆ ಬಂದ್ ಕುರಿತು ಮಾಹಿತಿ ನೀಡಲಾಗಿತ್ತು. ಕೇವಲ ತುರ್ತು ಸೇವೆ ನೀಡಲು ಮಾತ್ರ ನಿರ್ಧರಿಸಿದ್ದೇವೆ. ಸದ್ಯ ಬೆಂಗಳೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ಆಸ್ಪತ್ರೆೆಗಳಿದ್ದು, ಸಣ್ಣ ಕ್ಲಿಿನಿಕ್ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾಾರೆ. ವೈದ್ಯರ ಬೇಡಿಕೆ ಈಡೇರದ ಕಾರಣ ಉಗ್ರ ಹೋರಾಟ ಮಾಡಲು ನಿರ್ಧರಿಸಿದ್ದೇವೆ.
-ಡಾ.ಶ್ರೀನಿವಾಸ್, ಐಎಂಎ ಕಾರ್ಯದರ್ಶಿ