ಸವಾರರು ನಿಯಮ ಪಾಲಿಸಲ್ಲ
ಪೊಲೀಸರ ವರ್ತನೆ ಸರಿಯಿಲ್ಲ
ಘರ್ಷಣೆಗಳಿಗೆ ಬೀಳಬೇಕಿದೆ ಕಡಿವಾಣ
ವಿಶೇಷ ವರದಿ: ರಂಗನಾಥ ಕೆ. ಮರಡಿ ತುಮಕೂರು
ಜಿಲ್ಲೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ದಿನೇ ದಿನೆ ಘರ್ಷಣೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ನಿಯಮ ಪಾಲಿಸಲ್ಲ, ಪೊಲೀಸರ ವರ್ತನೆ ಸರಿಯಿಲ್ಲ ಎಂದು ಸಂಚಾರಿ ಪೊಲೀಸರು ಮತ್ತು ವಾಹನ ಸವಾರರ ನಡುವೆ ಗಲಾಟೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಪೊಲೀಸರ ಅಸಭ್ಯ ವರ್ತನೆ: ನಿಯಮ ಪಾಲಿಸದ ಸವಾರರಿಗೆ ದಂಡ ವಿಽಸುವ ಸಂದರ್ಭದಲ್ಲಿ ಕೆಲ ಪೊಲೀಸರು ಅಸಭ್ಯವಾಗಿ ವರ್ತಿಸುತ್ತಾರೆ. ಇದು ಸವಾರ ರನ್ನು ಕೆರಳಿಸುತ್ತದೆ. ಅಲ್ಲದೆ ದಂಡ ವಿಽಸಲು ವಾಹನಗಳನ್ನು ತಡೆದ ಸಂದರ್ಭದಲ್ಲಿ ಕೆಲ ಪೊಲೀಸರು ಕಾನೂನಿನ ಪ್ರಕಾರ ನೀವು ಅಧಿಕ ದಂಡ ಕಟ್ಟಬೇಕು. ಈಗ ನಿಮ್ಮ ಬಳಿ ಎಷ್ಟಿದೆ, ಅಷ್ಟು ಕೊಟ್ಟು ಹೋಗಿ ಎಂದು ಹೇಳುತ್ತಾರೆ. ಇದರಿಂದ ಪೊಲೀಸರ ಜೇಬು ತುಂಬುತ್ತಿದೆ. ಸರಕಾರಕ್ಕೆ ನಷ್ಟವಾಗು ತ್ತಿದೆ. ಇಂತಹ ಪೊಲೀಸರ ಮೇಲೆ ಮೇಲಾಽಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ನಿಯಮ ಉಲ್ಲಂಘನೆ ಆರೋಪ: ಕಾನೂನಿನ ಪ್ರಕಾರ ನಿಯಮ ಉಲ್ಲಂಸುವ ವಾಹನ ಸವಾರರಿಗೆ ದಂಡ ವಿಧಿಸುವ ವೇಳೆ ಕೆಲವರು ವಿರೋಧ ವ್ಯಕ್ತಪಡಿಸು ತ್ತಾರೆ. ಇದರಿಂದ ಪೊಲೀಸರು ಮತ್ತು ಸವಾರರ ನಡುವೆ ಘರ್ಷಣೆಗಳಾಗಿ, ಹಲ್ಲೆ ಮಾಡುವ ಮಟ್ಟಕ್ಕೆ ಹೋಗುತ್ತದೆ. ಇದರಿಂದ ಕರ್ತವ್ಯಕ್ಕೆ ಅಡ್ಡಿ ಉಂಟಾಗುತ್ತದೆ. ಇಂತಹ ಸವಾರರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಆರೋಪಿಸುತ್ತಾರೆ.
ಹೊಸಬರಿಗೆ ಕೆಲಸವೇ ಗೊತ್ತಿಲ್ಲ: ಹೊಸದಾಗಿ ಪೊಲೀಸರಾಗಿರುವವರಿಗೆ ಸಾರ್ವಜನಿಕರ ಜೊತೆ ಯಾವ ರೀತಿ ವರ್ತಿಸಬೇಕು ಎಂಬುದು ತಿಳಿದಿಲ್ಲ. ನಿಯಮ ಉಲ್ಲಂಸುವ ಸವಾರರಿಗೆ ದಂಡ ವಿಧಿಸುವ ವೇಳೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದರಿಂದ ಸವಾರರು ಕೋಪಗೊಂಡು ನಿಮ್ಮ ವರ್ತನೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂದರೆ, ನೀವು ಯಾರಿಗೆ ಬೇಕಾದರೂ ಹೇಳಿಕೊಳ್ಳಿ ನಾವು ಹೆದರುವುದಿಲ್ಲ ಎನ್ನುತ್ತಾರೆ. ಇಲಾಖೆ ಸಮವಸ್ತ್ರ ಕೊಟ್ಟಿರುವುದು ಪೊಲೀಸರ ದೇಹಕ್ಕಲ್ಲ, ಸಂವಿಧಾನದ ನ್ಯಾಯವನ್ನು ಕಾಪಾಡಲು ಎಂಬುದನ್ನು ಹೊಸ ಸಿಬ್ಬಂದಿ ತಿಳಿದುಕೊಳ್ಳಬೇಕಾಗಿದೆ ಎನ್ನುತ್ತಾರೆ ಹೆಸರೇಳದ ನಾಗರಿಕರು.
ಸವಾರರು ಕಾನೂನು ಪಾಲಿಸಲ್ಲ: ಜಿಲ್ಲಾದ್ಯಂತ ಬಹುತೇಕ ವಾಹನ ಸವಾರರು ನಿಯಮ ಪಾಲಿಸುವುದಿಲ್ಲ. ಹೆಲ್ಮೆಟ್ ಧರಿಸುವುದಿಲ್ಲ, ತ್ರಿಬ್ಬಲ್ ರೈಡಿಂಗ್, ವ್ಹೀಲಿಂಗ್, ಸೀಟ್ ಬೆಲ್ಟ್ ಹಾಕುವುದಿಲ್ಲ. ಸಿಗ್ನಲ್ ಜಂಪ್, ಡ್ರಿಂಕ್ ಅಂಡ್ ಡ್ರೈವ್ ಮತ್ತಿತರ ರೀತಿಯಲ್ಲಿ ನಿಯಮ ಉಲ್ಲಂಸುತ್ತಾರೆ. ಇಂತಹವರ ವಿರುದ್ಧ ಪ್ರತಿದಿನ ಪೊಲೀಸರು ದೂರು ದಾಖಲಿಸಿ ದಂಡ ವಿಧಿಸುತ್ತಿದ್ದರೂ ಜನರಲ್ಲಿ ಅರಿವು ಮೂಡಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆ ಶ್ರಮಿಸುತ್ತಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮಾನವ ಹಕ್ಕು ಹೋರಾಟಗಾರ ಸಿದ್ದಲಿಂಗೇಗೌಡ.
ಜೇಬು ತುಂಬಿಸಿಕೊಳ್ಳುವ ಪೊಲೀಸರು: ಆರೋಪ ಕೆಲವು ಪೊಲೀಸರು ದಂಡ ವಿಧಿಸುವ ನೆಪದಲ್ಲಿ ಕಾನೂನಿಗೆ ಮೋಸ ಮಾಡಿ ಅವರ ಜೇಬುಗಳನ್ನು ತುಂಬಿಸಿ ಕೊಳ್ಳುತ್ತಾರೆ ಎಂಬ ಆರೋಪವಿದೆ. ಇದರಿಂದ ಸರಕಾರಕ್ಕೆ ಭಾರಿ ಅನ್ಯಾಯವಾಗುತ್ತಿದೆ. ವಸೂಲಿ ಮಾಡಿಕೊಂಡ ಹಣ ಹಂಚಿಕೊಳ್ಳುವ ಸಂದರ್ಭದಲ್ಲಿ ಹಿರಿಯ ಮತ್ತು ಕಿರಿಯ ಪೊಲೀಸ್ ಸಿಬ್ಬಂದಿ ನಡುವೆ ಜಗಳವಾಗಿ, ಪ್ರಕರಗಣಳು ಬಹಿರಂಗಗೊಳ್ಳುತ್ತವೆ. ಅಂತಹ ಉದಾಹರಣೆಗಳಿವೆ ಎನ್ನುತ್ತಾರೆ ಹೆಸರೇಳದ ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರು.
***
ಒಮ್ಮೆ ತಿಪಟೂರಿನಿಂದ ತುಮಕೂರಿಗೆ ಬರುವಾಗ ಡಿಎಲ್ ಮರೆತು ಬಂದಿದ್ದೆ. ಪೊಲೀಸರು ವಾಹನ ತಡೆದು ಪರಿಶೀಲಿಸಿದರು. ಡಿಎಲ್ ಇಲ್ಲದ್ದಕ್ಕೆ, ದಂಡ ವಿಧಿಸಿ, ರಸೀದಿ ಕೊಟ್ಟರೆ ಜಾಸ್ತಿ ಹಣ ಕಟ್ಟಬೇಕು. ನಿನ್ನ ಬಳಿ ಎಷ್ಟಿದೆ ಕೊಟ್ಟು ಹೋಗು ಎಂದರು. ಆಗ ನನ್ನ ಬಳಿ ಇದ್ದ ೫೦೦ ರು. ಕೊಟ್ಟೆ.
ಹೆಸರೇಳದ ಚಾಲಕ
ನಿಯಮ ಪಾಲಿಸದ ಸವಾರರಿಗೆ ದಂಡ ವಿಧಿಸುವುದು ನಮ್ಮ ಕರ್ತವ್ಯ. ಇಂತಹ ಸವಾರರನ್ನು ತಡೆದು ದಂಡ ವಿಽಸಲು ಮುಂದಾದರೆ ಪ್ರಭಾವಿಗಳ
ಹೆಸರು ಹೇಳುತ್ತಾರೆ, ಇಲ್ಲವಾದರೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸುತ್ತಾರೆ. ಕಾನೂನು ಪಾಲಿಸಿದರೆ ನಾವು ಪ್ರಶ್ನಿಸುವುದಿಲ್ಲ.
ಹೆಸರೇಳದ ಪೊಲೀಸ್ ಸಿಬ್ಬಂದಿ.