Sunday, 15th December 2024

ಕ್ಲಬ್‌ ಹೌಸ್‌ ಕೇಳುಗರ ಉತ್ತಮ ಜಾಲತಾಣ ವೇದಿಕೆ

ಅಭಿಪ್ರಾಯ 

ಶ್ವೇತಾ ಪ್ರಸನ್ನ ಹೆಗಡೆ

shwetaprasanna2008@gmail.com

ಒಂದು ನಿರ್ದಿಷ್ಟ ವಿಷಯದ ಬಗ್ಗೆ ಗುಂಪು ರಚಿಸಿಕೊಂಡು ಸಮಾನಾಸಕ್ತರು ಜಾಲತಾಣಗಳ ಮೂಲಕ ಸಂಭಾಷಣೆ ನಡೆಸುತ್ತಿರುವ ಕ್ಲಬ್‌ಹೌಸ್ ಆಪ್ ದಿನೇ ದಿನೆ ಜನಪ್ರಿಯತೆ ಪಡೆಯುತ್ತಿದೆ. ಸಮಾನ ಆಸಕ್ತಿ ಉತ್ತಮ ವಿಚಾರ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸಾಮಾಜಿಕ ಜಾಲತಾಣದ ವೇದಿಕೆ.

ಇಲ್ಲಿ ನಿರ್ದಿಷ್ಟ ವಿಷಯಗಳಿಗೆ ಸಂಬಂಧಪಟ್ಟಂತೆ ನಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಉತ್ತಮೋತ್ತಮ ಮಾಹಿತಿಗಳನ್ನು ನಾವು ಪಡೆಯಬಹುದು. ಹರಟೆಯೇ ಇರಲಿ, ಸಂಗೀತ, ವಿಚಾರ, ಸಾಹಿತ್ಯ ನಮಗಿಷ್ಟವಾದ ವಿಷಯಗಳನ್ನು ಆರಿಸಿಕೊಂಡು ಕ್ಲಬ್ ರೂಮ್ಗಳಿಗೆ ಪ್ರವೇಶಿಸಿ ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸಂವಹನ ಕಾರ್ಯಕ್ರಮ.

‘ವಿಶ್ವವಾಣಿ’ ಕ್ಲಬ್‌ಹೌಸ್ ನಡೆಸುವ ಕಾರ್ಯಕ್ರಮಗಳು ಜನಪ್ರಿಯತೆ ಪಡೆಯುತ್ತಿವೆ. ಅತ್ಯಧಿಕ ಸಂಖ್ಯೆ ಶ್ರೋತೃಗಳು ಇವರ ಕ್ಲಬ್‌ಹೌಸ್ ರೂಂಗೆ ಎಂಟ್ರಿ ಕೊಟ್ಟು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿzರೆ. ಕಾರಣ ಕಾರ್ಯಕ್ರಮದ ಗುಣಮಟ್ಟ ಮತ್ತು ಅಚ್ಚುಕಟ್ಟಾಗಿ ಅಚ್ಚುಕಟ್ಟಾದ ಆಯೋಜನೆ, ವಿವಿಧ ರಂಗಗಳಲ್ಲಿ ಹೆಸರುವಾಸಿ ಯಾಗಿರುವ ಖ್ಯಾತರು, ದಾರ್ಶನಿಕರು, ಸಂತರೂ ಸಾಧಕರು ಇವರುಗಳನ್ನು ಆಹ್ವಾನಿಸಿ ಅವರ ಅನುಭವಗಳು, ಸಾಧನೆಗಳು, ವಿಚಾರಗಳನ್ನು ಶೋತೃಗಳಿಗೆ ಕೇಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ಇರುವ ಗಣ್ಯರು ತಮ್ಮ ಅನುಭವಗಳನ್ನು ಅವರ ಜೀವನ ವಿಚಾರ ದಾರ್ಶನಿಕತೆ ಅನುಭವ ಅಭಿಪ್ರಾಯ ಗಳನ್ನು ಶೋತ್ರುಗಳಿಗೆ ಕೇಳಿಸುವ ಅವಕಾಶ ಮಾಡಿಕೊಡುತ್ತಿದ್ದಾರೆ. ದೇಶ ವಿದೇಶಗಳಿಂದ ಇವರ ಕ್ಲಬ್ ರೂಂಗೆ ಪ್ರವೇಶಿಸಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ. ಸದ್ಗುರು ಅವರ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯ ಕೇಳುಗರು ಭಾಗವಹಿಸಿದ್ದು ಆ ದಿನದ ದಾಖಲೆಯಾಗಿತ್ತು. ‘ವಿಶ್ವವಾಣಿ’ ಕ್ಲಬ್ ಕಾರ್ಯಕ್ರಮಗಳು ಟಾಪ್ 10ರಲ್ಲಿರುವದು ಗಮನಾರ್ಹವಾಗಿದೆ.

ಸಾಮಾನ್ಯ ಜನರ ಧ್ವನಿಗೆ ವೇದಿಕೆಯೇ ಇಲ್ಲದಿದ್ದ, ಕೇವಲ ಕೆಲವೇ ವರ್ಗದ ಸ್ವತ್ತಾಗಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸುವ ವೇದಿಕೆ ಗಳಿಗೆ ಪರ್ಯಾಯವಾಗಿ ಸಾಮಾಜಿಕ ಜಾಲತಾಣಗಳು ಸಮೂಹ ಸಂಪರ್ಕ ಕ್ರಾಂತಿಯನ್ನೇ ಮಾಡುತ್ತಿವೆ.

ಎಲ್ಲಾ ರೀತಿಯಲ್ಲೂ ಅಂದರೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಗ್ರಾಮೀಣ ಲಿಂಗಾಧಾರಿತ ಮುಂತಾದ ಅತ್ಯಂತ ಕೆಳಮಟ್ಟದ ಜನರಿಗೂ ಇಂದು ವಿಶ್ವಮಟ್ಟದ ವೇದಿಕೆಗಳನ್ನು ಸಾಮಾಜಿಕ ಜಾಲತಾಣಗಳು ಕಲ್ಪಿಸುತ್ತಿವೆ. ಇದರ ಸದುಪಯೋಗ ಪಡೆಯುವದು ನಮ್ಮ ಕೈಲಿದೆ. ನಮ್ಮ ತಿಳಿವಳಿಕೆಗೆ ಸಂಬಂಧಪಟ್ಟಂತೆ, ಜ್ಞಾನಕ್ಕೆ ಅನುಗುಣವಾಗಿ ವಿಷಯ ವಿಚಾರ ವಿನಿಮಯಗಳಿಗೆ ಚರ್ಚೆ ಸಮರ್ಪಕ ವೇದಿಕೆಯಾಗಬೇಕು. ಕಲಿಕೆ, ತಿಳಿವಳಿಕೆ, ಸತ್ಯದ ದರ್ಶನಕ್ಕೆ ಪ್ರಯತ್ನಿಸುವುದು
ಚರ್ಚೆಯ ಬಹುದೊಡ್ಡ ಆಶಯವಾಗಿರಬೇಕು.

ಭಿನ್ನಾಭಿಪ್ರಾಯಗಳ ನಿವಾರಣೆ, ಗುರಿ – ಮಾರ್ಗಗಳ ಸಮಾಲೋಚನೆ, ಸಹಬಾಳ್ವೆ, ಸಹಕಾರದ ಹಿತವೂ ಕೂಡ ಚರ್ಚೆಯ ಮುಖ್ಯ ಅಂಶವಾಗಿರಬೇಕು. ಇದೆಲ್ಲದರ ನಂತರ ಅತಿಮುಖ್ಯವಾಗಿ ಇಲ್ಲಿ ಅಧ್ಯಯನ ಚಿಂತನೆ ಮಾನವೀಯ ಮೌಲ್ಯಗಳು, ಅದರಿಂದ ಸಿಗುವ ಮಾಹಿತಿ ಜ್ಞಾನ, ಅದನ್ನು ವ್ಯಕ್ತಪಡಿಸುವ ರೀತಿ ನೀತಿಗಳು, ನೈತಿಕತೆ, ಕಾನೂನು, ಜೀವಪರ ನಿಲುವು ಎಲ್ಲದರ ಅರಿವು ಇರಬೇಕಾಗುತ್ತದೆ. ಆಗ ಮಾತ್ರ ಈ ವೇದಿಕೆಗಳು ವಿಕಾಸಕ್ಕೆ ಕಾರಣವಾಗುತ್ತದೆ.
ಅಂಗೈಯಲ್ಲಿ ಜಗತ್ತನ್ನು ನೋಡುವ ಈ ಜಮಾನಾದಲ್ಲಿ ಸೋಶಿಯಲ್ ಮೀಡಿಯಾಗಳಿಂದ ಅಡ್ಡಪರಿಣಾಮಗಳೇ ಆಗುತ್ತದೆ ಎನ್ನುವ ಅಡ್ಡಗೆರೆ ಬೇಡ.. ಸದುಪಯೋಗ ಬಳಸುವವರ ಕೈಯಲ್ಲಿದೆ.

ಕ್ಲಬ್ ಹೌಸ್ ಕೇಳುಗರ ಉತ್ತಮ ಜಾಲತಾಣ ವೇದಿಕೆ.ಕೇಳುಗರು ಯಾವ ವಿಷಯಗಳಿಗೆ ಒಳಪಟ್ಟಂತೆ ಕ್ಲಬ್ ರೂಮ್ ಗಳಿಗೆ ಪ್ರವೇಶ ಕೊಡುವದು ಅವರ ಸ್ವಾತಂತ್ರ್ಯವಾಗಿದೆ.