Thursday, 19th September 2024

ಆವಂತಿಪೊರ ಎನ್’ಕೌಂಟರ್: ಹಿಜ್ ಬುಲ್ ಉಗ್ರರ ಹತ್ಯೆ

ಆವಂತಿಪೊರ: ಶುಕ್ರವಾರ ಭದ್ರತಾ ಪಡೆ ಮತ್ತು ಉಗ್ರಗಾಮಿಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಹಿಜ್ ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೊರ ಪಟ್ಟಣದ ಪಂಪೊರೆ ಪ್ರದೇಶದಲ್ಲಿ ಘಟನೆ ಸಂಭವಿ ಸಿದೆ.

ಜಿಲ್ಲೆಯ ಪಂಪೋರ್ ಪ್ರದೇಶದ ಖ್ರೆವ್ ನಲ್ಲಿ ಭದ್ರತಾ ಪಡೆಗಳು ಪ್ರದೇಶ ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು. ಈ ವೇಳೆ ಇದ್ದಕ್ಕಿದ್ದಂತೆ ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ ಕೌಂಟರ್ ಆಗಿ ಬದಲಾಯಿತು.

ಎನ್ ಕೌಂಟರ್ ನಲ್ಲಿ ಇದುವರೆಗೆ ಇಬ್ಬರು ಉಗ್ರಗಾಮಿಗಳು ಹತ್ಯೆಗೊಂಡಿದ್ದಾರೆ.