Friday, 18th October 2024

ನಕ್ಸಲ್ ದಾಳಿಯಲ್ಲಿ ಐಟಿಬಿಪಿ ಸಹಾಯಕ ಕಮಾಂಡೆಂಟ್ ಹುತಾತ್ಮ

ನಾರಾಯಣಪುರ: ಛತ್ತೀಸ್‌ಗಢ ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ನಕ್ಸಲ್ ದಾಳಿಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನ ಸಹಾಯಕ ಕಮಾಂಡೆಂಟ್ ಹಾಗೂ ಸಹೋದ್ಯೋಗಿಯೊಬ್ಬರು ಹುತಾತ್ಮರಾದರು.

ಛೋಟೆಡೊಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಐಟಿಬಿಪಿಯ 45ನೇ ಬೆಟಾಲಿಯನ್ ನ ಕಡಮೆಟ ಕ್ಯಾಂಪ್ ಬಳಿ ನಕ್ಸಲ್ ದಾಳಿ ನಡೆದಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸುಂದರರಾಜ್ ಪಿ. ಹೇಳಿದ್ದಾರೆ. ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆಯಲ್ಲಿದ್ದ ಐಟಿಬಿಪಿಯ 45ನೇ ಬೆಟಾಲಿಯನ್ ಸಿಬ್ಬಂದಿ ಮೇಲೆ ನಕ್ಸಲರ ಒಂದು ತಂಡ ಗುಂಡಿನ ದಾಳಿ ನಡೆಸಿದೆ. ಅದು ಶಿಬಿರ ದಿಂದ ಸರಿಸುಮಾರು 600 ಮೀಟರ್ ದೂರದಲ್ಲಿದೆ ಎಂದು ಹೇಳಿದರು.

ಐಟಿಬಿಪಿಯ 45 ನೇ ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್ ಸುಧಾಕರ್ ಶಿಂಧೆ ಮತ್ತು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗುರುಮುಖ್ ಸಿಂಗ್ ಅವರು ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಐಜಿ ತಿಳಿಸಿದ್ದಾರೆ.

ದಾಳಿಯ ನಂತರ, ನಕ್ಸಲರು ಒಂದು ಎಕೆ -47 ರೈಫಲ್, ಎರಡು ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಭದ್ರತಾ ಸಿಬ್ಬಂದಿಯ ಒಂದು ವೈರ್‌ಲೆಸ್ ಸೆಟ್ ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಿದರು.