ಬೆಂಗಳೂರು : ರಾಜ್ಯದಲ್ಲಿ ಭಾನುವಾರ ಕರೋನಾ 3ನೇ ಸೋಂಕಿನ ಭೀತಿಯ ನಡುವೆಯೂ, 24 ಗಂಟೆಯಲ್ಲಿ 1,189 ಜನರಿಗೆ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಸೋಂಕಿನಿಂದ 22 ಜನರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ 267, ದಕ್ಷಿಣ ಕನ್ನಡದಲ್ಲಿ 286, ಉಡುಪಿ 132 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,189 ಜನರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಸೋಂಕಿತರು ಸಂಖ್ಯೆ 29,38,616ಕ್ಕೆ ಏರಿಕೆಯಾಗಿದೆ. 1456 ಸೋಂಕಿತರು ಸೇರಿದಂತೆ ಇದುವರೆಗೆ 28,80,889 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಾನುಬಾರ 22 ಸೋಂಕಿತರು ಮೃತಪಟ್ಟಿದ್ದು, ಈ ಸಂಖ್ಯೆ 37,145ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.