Sunday, 24th November 2024

ಕನ್ನಡ ಬದಲು ಕರ್ನಾಟಕ ರಾಜ್ಯೋತ್ಸವ ಆಚರಿಸಿ-ಟಿ ಎಸ್ ನಾಗಾಭರಣ

ಜಿಕೆವಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮತ್ತು ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿದರು.

ರಾಜ್ಯದಲ್ಲಿ ಕನ್ನಡ ರಾಜ್ಯೋೋತ್ಸವದ ಬದಲಿಗೆ ಕರ್ನಾಟಕ ರಾಜ್ಯೋೋತ್ಸವದ ಆಚರಣೆ ಮಾಡುವಂತಾಗಬೇಕು ಎಂದು ಕನ್ನಡ ಅಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು.
ಜಿಕೆವಿಕೆ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಾನಿಲಯದ ಸಂಘದ ವತಿಯಿಂದ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋೋತ್ಸವ ಸಮಾರಂಭ ಉದ್ಘಾಾಟಿಸಿದ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕನ್ನಡದ ಜತೆಗೆ ಕನ್ನಡದ ಸೋದರ ಭಾಷೆಗಳಾದ ತುಳು, ಕೊಂಕಣಿ, ಕೊಡವ ಭಾಷೆಗಳು ಕನ್ನಡದ ಅವಿಭಾಜ್ಯ ಅಂಗಗಳಂತಿದ್ದು, ಕನ್ನಡದ ಹಿರಿಮೆ ಎತ್ತಿಿ ಹಿಡಿಯುವಲ್ಲಿ ತುಳುವರು, ಕೊಂಕಣಿಗರು ಹಾಗೂ ಕೊಡವರು ಮಹತ್ವದ ಪಾತ್ರ ವಹಿಸಿದ್ದಾಾರೆ. ಈ ನಿಟ್ಟಿಿನಲ್ಲಿ ನಾವು ಕನ್ನಡ ರಾಜ್ಯೋೋತ್ಸವಕ್ಕಿಿಂತ ಕರ್ನಾಟಕ ರಾಜ್ಯೋೋತ್ಸವ ಆಚರಿಸುವುದು ಹೆಚ್ಚು ಸೂಕ್ತ ಎಂದು ಕನ್ನಡ ಅಭಿವೃದ್ಧಿಿ ಪ್ರಾಾಧಿಕಾರದ ಟಿ.ಎಸ್. ನಾಗಾಭರಣ ತಿಳಿಸಿದರು.

ಪ್ರಸ್ತುತ ಸ್ಥಿಿತಿಯಲ್ಲಿ ಕನ್ನಡ ಭಾಷೆಯ ಸ್ಥಾಾನ-ಮಾನ ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಮಹತ್ವ ಕುರಿತು ತಿಳಿಸಿಕೊಡಬೇಕಾದ ಅಗತ್ಯವಿದೆ. ತಾಂತ್ರಿಿಕವಾಗಿ ಕನ್ನಡವನ್ನು ಹೆಚ್ಚು ಅನುಷ್ಠಾಾನಗೊಳಿಸಲು ಇರುವ ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಕನ್ನಡಕ್ಕೆೆ ಸಹಸ್ರಾಾರು ವರ್ಷಗಳ ಇತಿಹಾಸ, ಪರಂಪರೆ ಇರುವುದರಿಂದಲೇ ಅದರ ಭವಿಷ್ಯ ನಮಗೆ ಪ್ರಮುಖ ಎನಿಸುತ್ತದೆ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ, ಇತಿಹಾಸ ತಿಳಿದುಕೊಂಡು ಕನ್ನಡ ರಾಜ್ಯೋೋತ್ಸವ ಆಚರಿಸುವುದಕ್ಕಿಿಂತ ಕರ್ನಾಟಕ ಆಚರಿಸುವುದು ಹೆಚ್ಚು ಸೂಕ್ತ ಎನಿಸುತ್ತದೆ. ಇಂಗ್ಲೀಷ್ ಭಾಷೆಗೆ ಪರ್ಯಾಯ ಎನ್ನುವಷ್ಟರ ಮಟ್ಟಿಿಗೆ ನಾವು ಕನ್ನಡವನ್ನು ತಾಂತ್ರಿಿಕವಾಗಿ ಹಾಗೂ ಪ್ರಾಾಯೋಗಿಕವಾಗಿ ಹೆಚ್ಚು ಅನುಷ್ಠಾಾನಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಯೋಗ್‌ರಾಜ್ ಭಟ್ ಸೇರಿ ಕನ್ನಡ ಸಂಘದ ಪದಾಧಿಕಾರಿಗಳು ಉಪಸ್ಥಿಿತರಿದ್ದರು.