Thursday, 21st November 2024

ರಾಜ್ಯಾದ್ಯಂತ ವೈದ್ಯರ ಪ್ರತಿಭಟನೆ: ರೋಗಿಗಳ ಪರದಾಟ

ಮೈಸೂರಿನ ಕೆ.ಆರ್.ಆಸ್ಪತ್ರೆೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾಾರ್ಥಿಗಳು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾಾರ್ಥಿಗಳು ಪ್ರತಿಭಟನೆ ಮಾಡಿದರು.

 ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕರೆ ನೀಡಿರುವ ಹೊರ ವಿಭಾಗ (ಒಪಿಡಿ) ಬಂದ್‌ಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಿಯೆ:
ಬೃಂದಾವನ, ಸುಗುಣಾ, ಫೋರ್ಟಿಸ್ ಸೇರಿದಂತೆ ಕೆಲ ಆಸ್ಪತ್ರೆೆಗಳಲ್ಲಿ ಒಪಿಡಿ ಬಂದ್ ಮಾಡಿದ್ದು, ಚಿಕಿತ್ಸೆೆ ನೀಡಲಾಯಿತು. ಕಿಮ್ಸ್ ಸೇರಿದಂತೆ ಇನ್ನೂ ಕೆಲವು ಆಸ್ಪತ್ರೆೆಗಳಲ್ಲಿ ಒಪಿಡಿ ಎಂದಿನಂತೆ ಕಾರ್ಯನಿರ್ವಹಿಸಿದವು. ಮಿಂಟೊ ಕಣ್ಣಿಿನ ಆಸ್ಪತ್ರೆೆ, ವಿಕ್ಟೋೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆೆ ಅಡಿಯಲ್ಲಿ ಬರುವ ಆಸ್ಪತ್ರೆೆಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಪ್ರತಿಭಟನಾನಿರತ ಹಿರಿಯ ವೈದ್ಯರು ಪ್ರಧಾನಿಗೆ ವೈದ್ಯರ ಮೇಲಿನ ಹಲ್ಲೆಯ ಕುರಿತು ಪತ್ರ ಬರೆದಿದ್ದಾಾರೆ.
ಯಾದಗಿರಿಯಲ್ಲಿ ಆಸ್ಪತ್ರೆೆ, ಸ್ಕ್ಯಾಾನಿಂಗ್ ಕೇಂದ್ರ ಬಂದ್:
ಯಾದಗಿರಿ ಜಿಲ್ಲೆಯ ವಿವಿಧೆಡೆ ಖಾಸಗಿ ಆಸ್ಪತ್ರೆೆ, ಕೇಂದ್ರಗಳನ್ನು ಬಂದ್ ಮಾಡಿ ಆಸ್ಪತ್ರೆೆಗಳ ಮುಂದೆ ನೋಟಿಸ್ ಅಂಟಿಸಲಾಗಿತ್ತು. ಜಿಲ್ಲಾಸ್ಪತ್ರೆೆಯಲ್ಲಿ ರೋಗಿಗಳ ಸಂಖ್ಯೆೆ ಎಂದಿಗಿಂತ ಹೆಚ್ಚಾಾಗಿಯೇ ಇತ್ತು.
ಮಂಗಳೂರಿನಲ್ಲಿ ಓಪಿಡಿ ಬಂದ್:
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಖಾಸಗಿ ಆಸ್ಪತ್ರೆೆಗಳ ಒಪಿಡಿ ವಿಭಾಗಗಳು ಕಾರ್ಯ ಸ್ಥಗಿತಗೊಳಿಸಿದ್ದವು. ಬೇರೆ ಜಿಲ್ಲೆಗಳಿಂದ ಬಂದಿದ್ದ ಹಲವು ರೋಗಿಗಳು ಪರದಾಡುವಂತಾಯಿತು. ಪ್ರಮುಖವಾಗಿ ಕಾಸರಗೋಡಿನಿಂದ ಬಂದಿದ್ದ ರೋಗಿಗಳು, ವೈದ್ಯಕೀಯ ಚಿಕಿತ್ಸೆೆ ಸಿಗದೇ ಊರಿಗೆ ಮರಳಿದರು.
ಕಲಬುರ್ಗಿಯ ಜಿಮ್ಸ್ ಬಂದ್:
ಖಾಸಗಿ ಆಸ್ಪತ್ರೆೆಗಳ (ಹೊರರೋಗಿಳ ವಿಭಾಗ) ಬಂದ್ ಕರೆಗೆ ನಗರದಲ್ಲಿ ಉತ್ತಮ ಪ್ರತಿಕ್ರಿಿಯೆ ವ್ಯಕ್ತವಾಗಿದೆ. ನಗರದ ಯುನೈಟೆಡ್ ಆಸ್ಪತ್ರೆೆ ಹಾಗೂ ಖಾಜಾ ಬಂದೇನವಾಜ ವೈದ್ಯಕೀಯ ಕಾಲೇಜಿನ ಒಪಿಡಿ ವಿಭಾಗಗಳು ಬಂದ್ ಆಗಿದ್ದವು. ತುರ್ತು ಚಿಕಿತ್ಸೆೆ ಅಗತ್ಯವಿರುವ ರೋಗಿಗಳ ನೋಂದಣಿ ಪಡೆಯಲಾಯಿತು. ಘಟನೆ ಖಂಡಿಸಿ ಐಎಂಎ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಿಯೆ:
ಮೈಸೂರಿನ ಜೆಎಸ್‌ಎಸ್ ಸೇರಿದಂತೆ ಕೆಲವು ಖಾಸಗಿ ಆಸ್ಪತ್ರೆೆಗಳಲ್ಲಿ ಒಪಿಡಿ ಸೇವೆ ಇದ್ದರೆ, ಭಾನವಿ ಸೇರಿದಂತೆ ಆಸ್ಪತ್ರೆೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಂಡಿತ್ತು. ಕೆ.ಆರ್.ಆಸ್ಪತ್ರೆೆಯಲ್ಲಿ ಸ್ನಾಾತಕೋತ್ತರ ವೈದ್ಯಕೀಯ ವಿದ್ಯಾಾರ್ಥಿಗಳು ಪ್ರತಿಭಟನೆ ಮಾಡಿದರೆ, ಹಿರಿಯ ಕಾರ್ಯನಿರ್ವಹಿಸಿದರು. ಖಾಸಗಿ ಕ್ಲಿಿನಿಕ್ ಹಾಗೂ ಆಸ್ಪತ್ರೆೆಗಳಿಗೆ ಬಂದ ರೋಗಿಗಳು ಚಿಕಿತ್ಸೆೆ ಸಿಗದೆ ಪರದಾಡುವಂತಾಯಿತು.

ಕರವೇ ಕಾರ್ಯಕರ್ತರ ಬಂಧನ: ಪ್ರತಿಭಟನೆ ಅಂತ್ಯ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಅಶ್ವಿಿನಿ ಗೌಡ ಸೇರಿದಂತೆ 10 ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾದರು. ಬೆಂಗಳೂರು ಪಶ್ಚಿಿಮ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಕಾರ್ಯಕರ್ತರು ಶರಣಾದ ಬೆನ್ನಲ್ಲೇ ವೈದ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಿ ಪ್ರತಿಭಟನೆ ಹಿಂದಕ್ಕೆೆ ಪಡೆಯಲಾಯಿತು.