Saturday, 23rd November 2024

ಪೈಲಟ್‍ಗೆ ಹೃದಯಾಘಾತ: ನಾಗ್ಪುರದಲ್ಲಿ ವಿಮಾನ ತುರ್ತು ಭೂ ಸ್ಪರ್ಶ

ನಾಗ್ಪುರ: ವಿಮಾನದ ಪೈಲಟ್‍ಗೆ ಹೃದಯಾಘಾತಕ್ಕೊಳಗಾದ ಕಾರಣ, ಬಾಂಗ್ಲಾದೇಶದ ಬಿಮನ್ ಏರ್‍ಲೈನ್ ವಿಮಾನ ನಾಗ್ಪುರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.

ಮಸ್ಮತ್‍ನಿಂದ ಬಾಂಗ್ಲಾ ದೇಶದ ರಾಜಧಾನಿ ಢಾಕಾಗೆ ವಿಮಾನದ ಪೈಲಟ್‍ಗೆ ಹೃದಯಾಘಾತಕ್ಕೊಳಗಾಗಿ ನಾಗ್ಪುರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ್ದು , ತಕ್ಷಣ ಸಿಬ್ಬಂದಿಗಳು ಸ್ಪಂದಿಸಿದ್ದಾರೆ. 126 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಶುಕ್ರವಾರ ರಾತ್ರಿ ಏಕಾಏಕಿ ನಿಯಂತ್ರಣ ಗೊಂಡಿತ್ತು. ಪೈಲೆಟ್‍ಗೆ ಹೃದಯಾಘಾತವಾಗಿದೆ. ಯಾರೂ ಆತಂಕಗೊಳ್ಳಬೇಡಿ ಎಂದು ತಿಳಿಸಲಾಯಿತು. ಸುಮಾರು 11 ಗಂಟೆಗೆ ಕಾಲ ಪ್ರಯಾಣಿಕರು ವಿಮಾನದಲ್ಲೇ ಸಿಲುಕಿ ಕೆಲವರು ಗಾಬರಿಗೊಂಡಿದ್ದರು. ಪೈಲೆಟ್ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಅವರನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನ ರಾಯಪುರದ ಬಳಿ ಇದ್ದಾಗ ಸಹ ಪೈಲೆಟ್ ಕೊಲ್ಕೊತ್ತಾದ ಎಟಿಸಿಗೆ ಮಾಹಿತಿ ನೀಡಿ ಭಾರತದಲ್ಲಿ ಇಳಿಯಲು ಅನುಮತಿ ಕೇಳಿದ್ದರು. ಅದಕ್ಕೆ ಸ್ಪಂದಿಸಲಾಯಿತು ಎನ್ನಲಾಗಿದೆ.