Friday, 20th September 2024

ಆರಗ ಜ್ಞಾನೇಂದ್ರ ಹೇಳಿದ್ದರಲ್ಲಿ ತಪ್ಪೇನು ?

ಪ್ರಚಲಿತ

ನಿತ್ಯಾನಂದ ಹೆಗಡೆ ಮೂರೂರು

ಒಂದು ವಿಚಾರ. ಮೊನ್ನೆ ಮೈಸೂರಿನಲ್ಲಿ ಹೆಣ್ಣುಮಗಳೊಬ್ಬಳಮೇಲೆ ಸಾಮೂಹಿಕ ಅತ್ಯಾಚಾರನಡೆಸಿ ಕಿರಾತಕರು ಪರಾರಿಯಾದರಷ್ಟೆ! ಆಕೆ ಚಾಮುಂಡಿಬೆಟ್ಟದ ಅಪಾಯಕಾರಿ ನಿರ್ಜನ ಪ್ರದೇಶಕ್ಕೆ ಓರ್ವ ಹುಡುಗನ ಜತೆ ಅನೈತಿಕವಾದ ರೀತಿಯಲ್ಲಿ ಕತ್ತಲಲ್ಲಿ ಹೋಗಿದ್ದಾಳೆ.

ನಾವು ನಮ್ಮ ಮನೆಯ ಹೆಣ್ಣುಮಗಳಾದರೆ ಮಗೂ ಸಂಜೆಯ ನಂತರ ಪರಿಚಿತ ಸ್ಥಳವೇ ಆಗಿದ್ದರೂ ಎಲ್ಲೂ ಹೊರಗೆ ಹೋಗಬೇಡ. ಕಾಲ ಸರಿಯಿಲ್ಲ ಅಂತ
ಎಚ್ಚರಿಸುತ್ತೇವೆ. ಸ್ವಲ್ಪ ತಡವಾದರೂ ಪದೇಪದೆ ಕರೆ ಮಾಡಿ ವಿಚಾರಿಸುತ್ತೇವೆ. ಏಕೆ?ನಮ್ಮ ಜಾಗ್ರತೆ ನಮಗೆ ಅವಶ್ಯತಾನೆ? ಅದನ್ನು ಬಿಟ್ಟು ನೀನು ತಡರಾತ್ರಿ ಆದರೂ ತೊಂದರೆಯಿಲ್ಲ ಹೇಗೂ ಕಾಯಲು ಪೋಲೀಸ್ ಡಿಪಾರ್ಟಮೆಂಟ್‌ನವರು ಇದ್ದಾರೆ. ಸರಕಾರವಿದೆ ಅದು ಅವರ ಕರ್ತವ್ಯವಲ್ಲವೇ ಅಂತ ಏಕೆ ಹೇಳುವ ದಿಲ್ಲ.

ಪೋಲೀಸರು ಬೀಟ್ ಮಾಡುವುದು ಎಲ್ಲಿ? ಅದು ರಾತ್ರಿ ಹೊತ್ತಿನಲ್ಲಿ ಬೆಲೆ ಬಾಳುವ ಸ್ವತ್ತುಗಳಿರುವ ಶಹರ ಪಟ್ಟಣ ಪ್ರಮುಖ ಹೆದ್ದಾರಿಗಳು, ಬಳಸು ರಸ್ತೆಗಳು ಪೇಟೆಯ ಅನೈತಿಕ ಅಡ್ಡೆ ಹೀಗೆ ನಿರ್ದಿಷ್ಟ ಸ್ಥಳಗಳಲ್ಲಿ ಅಲ್ಲವೇ? ಅಲ್ಲಿಗೆ ನಿಯೋಜಿಸಲೇ ಸಾಕಾಗುವಷ್ಟು ಪೋಲೀಸು ಪೇದೆಗಳು ನಮ್ಮಲ್ಲಿಲ್ಲ. ಆದರೂ ದರೋಡೆ, ಕೊಲೆ, ಅತ್ಯಾಚಾರಗಳು ನಡೆದುಬಿಡುತ್ತವೆ. ಇಂತಹದ್ದರಲ್ಲಿ ಹೆಣ್ಣು ಮಗಳೊಬ್ಬಳು ಚಾಮುಂಡಿ ಬೆಟ್ಟದ ಮರೆಗೆ ನಿರ್ಜನ ಸ್ಥಳಕ್ಕೆ ಅದಾವು ದೋ ಪರ ಪುರುಷನ ಜತೆ ಅದೂ ಕತ್ತಲಲ್ಲಿ ಸಿ.ಸಿ ಕ್ಯಾಮೆರಾ ಇಲ್ಲದೆಡೆ ಹೋಗಿ ಮಾಡಬಾರದ್ದು ಮಾಡಿ ಆಗಬಾರದ್ದು ಆಗಿ ಅದೆಲ್ಲವೂ ಪೋಲೀಸು ಡಿಪಾರ್ಟಮೆಂಟಿನ ನಿಷ್ಕಾಳಜಿ ಅನ್ನುವುದು ಎಷ್ಟುಸರಿ.??

ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿzದರೂ ಏನು? ಅಂತ ಸ್ಥಳಕ್ಕೆ ಅಪವೇಳೆಯಲ್ಲಿ ಹೋಗ ಬಾರದಿತ್ತು ಅಷ್ಟೆ! ನಾವು ನಮ್ಮ ಮಕ್ಕಳ ಬಗೆಗೆ ತೋರುವ ಸಾಮಾನ್ಯ ಕಳಕಳಿಯ ವಿಚಾರ. ಅಲ್ಲಿಗೂ ಪರಿಚಿತ ಸ್ಥಳ ರಸ್ತೆ ಬೆಳಕು ಜನ ಸಂಚಾರವಿರುವೆಡೆಯಾದರೆ ಖಂಡಿತವಾಗಿಯೂ ಅರಗ ಜ್ಞಾನೇಂದ್ರರ ಮಾತು ಅಪರಾಧ ದ್ದಾಗುತ್ತಿತ್ತು. ಇಲ್ಲಿ ಅವರು ಆಡಿದ ಕಾಳಜಿಯ ಮಾತನ್ನು ಮೀಡಿಯಾದವರಾರೋ ಮೊದಲು ಎತ್ತಿದರು. ತಕ್ಷಣ ಎಚ್ಚೆತ್ತ ಎಲ್ಲ ನ್ಯೂಸ್ ಚಾನೆಲ್‌ನವರು ತಾರಾಮಾರ ಬಯ್ದದ್ದೇ ಬಯ್ದದ್ದು, ಅರಚಿದ್ದೇ ಅರಚಿದ್ದು ತಲೆ ಚಿಟ್ಟು ಹಿಡಿದು ಹೋಯಿತು. ಜ್ಞಾನೇಂದ್ರರು ಅಷ್ಟಕ್ಕೂ ಸುಮ್ಮನೇನೂ ಕುಳಿತಿಲ್ಲ. ಅದಕ್ಕೆ ತಕ್ಕುದಾದ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮಿಂದ ಅಸಾಧ್ಯ ಅಂತೇನೂ ಹೇಳಿಲ್ಲ. ತಪ್ಪು ಮಾಡಿದವರಿಗೆ ಮಾಫಿ ಮಾಡುತ್ತೇನೆಂದೂ ಹೇಳಿಲ್ಲ. ಏನೂ ಸಬೂಬು ಸಿಗದಿರುವಾಗ ಶತಪ್ರಯತ್ನದಲ್ಲಿ ಪೋಲೀಸಿನವರೂ ಶ್ರಮಿಸುತ್ತಿದ್ದಾರೆ.

ವಿಡಿಯೊ ಫೂಟೇಜ್ ಅಥವಾ ಮೊಬೈಲ್ ಅಥವಾ ನೀಚರ ಕುರುಹು ಸಿಗದೇ ಒದ್ದಾಡುತ್ತಿದ್ದರು, ಈನಡುವೆ ರಾಜಕೀಯ ವಿರೋಧಿಗಳು ಉಪಾಸಬಿದ್ದ ಭಿಕ್ಷುಕನಿಗೆ ಅನ್ನ ಸಿಕ್ಕಹಾಗೆ ಮುಗಿಬಿದ್ದಿದ್ದಾರೆ. ನಿರ್ಭಯಾರಂತಹ ನಾಮಧೇಯರ ಕೇಸೇ ತಿಂಗಳಾನುಗಟ್ಟಲೆ ವರ್ಷಾನುಗಟ್ಟಲೆ ಹಿಡಿದಿಲ್ಲವೇ? ಪೋಲೀಸರೂ ಮನುಷ್ಯ ರೆಂಬುದು ನೆನಪಿರಲಿ. ಮೀಡಿಯಾದವರು ಹೇಳಿದರಂತ ಎಲ್ಲರೂ ಅದೇ ಮೂಡಿನಲ್ಲಿ ಏಕೆ ಯೋಚಿಸಬೇಕು? ಇನ್ನೊಂದು ಸಾಧ್ಯತೆಯನ್ನು ಊಹಿಸಬಾರದೇಕೆ?
ಅರಗ ಜ್ಞಾನೇಂದ್ರ ಅವರೇನು ನನ್ನ ಸಂಬಽಯಲ್ಲ ಕೂಲಾಗಿ ಒಂದು ಕ್ಷಣ ಈ ಸ್ಥಿತಿಯನ್ನು ಪರಾಮರ್ಶಿಸಲೇಬೇಕು. ಸ್ವಾತಂತ್ರ್ಯ ಎಂದರೆ ಸ್ವೇಚೆಯಲ್ಲ. ಅಪರಾತ್ರಿ ಅಡ್ಡಾಡುವ ಗರ್ಜು ಇತ್ತೇ ಹೇಗೆ ಎಂಬಕಡೆ ನಿಮ್ಮ ಮನದಲ್ಲಿ ಬೆಳಕು ಬಿಟ್ಟು ಪುನರ್ವಿಮರ್ಶಿಸುವ ಅಗತ್ಯವಿದೆ.