Saturday, 23rd November 2024

ಗೋವಾದಲ್ಲಿ ಕರ್ಪ್ಯೂ: ಸೆಪ್ಟೆಂಬರ್ 16 ರವರೆಗೆ ವಿಸ್ತರಣೆ

ಪಣಜಿ : ಕರೋನಾ ವೈರಸ್ 3 ಅಲೆ ಭೀತಿ ಹಿನ್ನೆಲೆಯಲ್ಲಿ ಗೋವಾದಲ್ಲಿ ಕೊವೀಡ್ ಕರ್ಪ್ಯೂವನ್ನು ಗೋವಾ ಸರ್ಕಾರ ಸೆಪ್ಟೆಂಬರ್ 16 ರವರೆಗೆ ವಿಸ್ತರಿಸಲಾಗಿದೆ.

ಕೋವಿಡ್ ಕರ್ಪ್ಯೂ ಸೆಪ್ಟೆಂಬರ್ 16 ವರೆಗೆ ವಿಸ್ತರಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದ್ದು, ಈ ಮೂಲಕ ಕಳೆ ಮೇ 9 ರಿಂದ ಕೋವಿಡ್ ಕರ್ಪ್ಯೂ ಮುಂದುವರೆ ದಿದೆ. ಗೋವಾ ಸರ್ಕಾರವು ಪ್ರವಾಸಿ ರಾಜ್ಯದಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ತೆರೆದಿದೆ ಆದರೆ ಕ್ಯಾಸಿನೊಗಳಂತಹ ಪ್ರದೇಶಗಳನ್ನು ಇನ್ನೂ ನಿರ್ಬಂಧ ಮುಂದು ವರೆಸಿದೆ.

ಗೋವಾದ ಕೋವಿಡ್-19 ಸಂಖ್ಯೆ ಭಾನುವಾರ 74 ರಷ್ಟು ಏರಿಕೆಯಾಗಿ 1,73,791 ಕ್ಕೆ ತಲುಪಿದೆ ಸದ್ಯ ರಾಜ್ಯದಲ್ಲಿ 945 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿದುಬಂದಿದೆ.