Thursday, 19th September 2024

ಪುರುಷರ ಜಾವೆಲಿನ್: ಚಿನ್ನ ಗೆದ್ದ ಸುಮಿತ್ ಆಂಟಿಲ್

ಟೋಕಿಯೊ : ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಪುರುಷರ ಜಾವೆಲಿನ್ (ಎಫ್ 64)ನಲ್ಲಿ ಭಾರತದ ಸುಮಿತ್ ಆಂಟಿಲ್ 68.55 ಮೀ. ಎಸೆತದೊಂದಿಗೆ ಚಿನ್ನ ಗೆದ್ದರು. ಫೈನಲ್ ನಲ್ಲಿ ಸುಮಿತ್ ಆಂಟಿಲ್ ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದರು.

ತಮ್ಮ ಎರಡನೇ ಎಸೆತದಿಂದ ಉತ್ತಮಗೊಳಿಸುವ ಮೊದಲು, ಮೊದಲ ಪ್ರಯತ್ನದಲ್ಲಿ 66.95 ಎಸೆದರು. ನಂತರ ತಮ್ಮ ಐದನೇ ಪ್ರಯತ್ನದಲ್ಲಿ, ಮತ್ತೆ 68.55 ಮೀ ಎಸೆತದೊಂದಿಗೆ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಸಂದೀಪ್ ಚೌಧರಿ 62.20 ಮೀ. ಅತ್ಯುತ್ತಮ ಎಸೆತದೊಂದಿಗೆ ಈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು.

ಆಸ್ಟ್ರೇಲಿಯಾದ ಮಿಚಲ್ ಬುರಿಯನ್ ಬೆಳ್ಳಿ ಪದಕ ಗೆದ್ದರೆ, ಶ್ರೀಲಂಕಾದ ದುಲನ್ ಕೊಡಿತುವಾಕ್ಕು ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

Leave a Reply

Your email address will not be published. Required fields are marked *