Friday, 22nd November 2024

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇನ್ನೂ ಇದೆ ಸಮಯಾವಕಾಶ !

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2019-20ರ ಹಣಕಾಸು ವರ್ಷಕ್ಕೆ ಸಂಬಂಧಿಸಿ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸ ಲಾಗಿದ್ದು, ಸೆ. 30, 2021ರವರೆಗೆ ಸಮಯಾವಕಾಶ ಸಿಕ್ಕಿದೆ.

ಕರೋನಾದಿಂದ ದೇಶದ ಅನೇಕ ರಾಜ್ಯಗಳಲ್ಲಿ ನಿರ್ಬಂಧಗಳಿದ್ದು, ತೆರಿಗೆದಾರರಿಗೆ ಪರಿಹಾರ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದಿನಾಂಕ ಬದಲಾಗಿಲ್ಲ. ಈ ಐಟಿಆರ್ ಅನ್ನು ಸೆ. 30, 2021 ಸಲ್ಲಿಸಬೇಕು. ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸ ಬೇಕಾಗಿಲ್ಲ. ಆದಾಯ ತೆರಿಗೆ ರಿಟರ್ನ್‌ಗಾಗಿ ಹಲವು ನಮೂನೆ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.

ಐಟಿಆರ್ ಸಲ್ಲಿಸುವಲ್ಲಿನ ಅಸಮರ್ಥತೆಯನ್ನು ಉಲ್ಲೇಖಿಸಿ ಹಲವಾರು ತೆರಿಗೆದಾರರು ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳ ಕುರಿತು ದೂರು ನೀಡಿದ ನಂತರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕದ ವಿಸ್ತರಣೆ ಬಂದಿದೆ.

ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳನ್ನು ಗಮನಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರನ್ನು ಕರೆಸಿ ವಿಚಾರಿಸಿದ್ದರು. ಅಲ್ಲದೆ ಐಟಿ ಪೋರ್ಟಲ್ ದೋಷಗಳನ್ನು ಪರಿಹರಿಸಲು ಸೆಪ್ಟೆಂಬರ್ 15ರವರೆಗೆ ಗಡುವು ಸಹ ನೀಡಲಾಗಿದೆ. 2019ರಲ್ಲಿ ಇನ್ಫೋಸಿಸ್‌ಗೆ ಈ ಪೋರ್ಟಲ್‌ನ ಟೆಂಡರ್‌ನ್ನು 4,242 ಕೋಟಿ ರೂ.ಗೆ ನೀಡಲಾಗಿತ್ತು.