Friday, 20th September 2024

ಮತ್ತೆ ಟಿಎಂಸಿ ಸೇರ್ಪಡೆಯಾದ ಬಿಸ್ವಜಿತ್ ದಾಸ್

ಕೋಲ್ಕತ್ತಾ: ಬಾಗ್ದಾ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್ ಅವರು ಮಂಗಳವಾರ ಮತ್ತೆ ಟಿಎಂಸಿ ಸೇರ್ಪಡೆಯಾಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಕೇಸರಿ ಪಕ್ಷ ತೊರೆಯು ತ್ತಿರುವ ಮೂರನೇ ಶಾಸಕರಾಗಿದ್ದಾರೆ.

ಟಿಎಂಸಿಯಿಂದ ಎರಡು ಬಾರಿ ಶಾಸಕರಾಗಿದ್ದ ದಾಸ್ 2019ರಲ್ಲಿ ಬಿಜೆಪಿ ಸೇರಿದ್ದರು. ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಬಾಗ್ದಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

ನಾನು ಬಹಳ ಹಿಂದೆಯೇ ಟಿಎಂಸಿಗೆ ಮರಳಲು ಬಯಸಿದ್ದೆ. ಬಿಜೆಪಿ ಬಂಗಾಳಕ್ಕೆ ಏನೂ ಮಾಡಿಲ್ಲ” ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಸಮ್ಮುಖದಲ್ಲಿ ಟಿಎಂಸಿ ಸೇರಿದ ನಂತರ ಮಾತನಾಡಿದ ನಂತರ ಪ್ರತಿಕ್ರಿಯಿಸಿದರು.

ಕಳೆದ ಸೋಮವಾರ ಶಾಸಕ ತನ್ಮಯ್ ಘೋಷ್ ಅವರು ಟಿಎಂಸಿಗೆ ಮರಳಿದ್ದರು. ಈ ಹಿಂದೆ, ಜೂನ್ ನಲ್ಲಿ, ಬಿಜೆಪಿ ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತೊರೆದು ನಾಲ್ಕು ವರ್ಷಗಳ ನಂತರ ಮತ್ತೆ ಟಿಎಂಸಿಗೆ ಸೇರಿಕೊಂಡಿದ್ದರು.