Saturday, 23rd November 2024

ಪ್ರತಿ ಸಿಲಿಂಡರ್‌ಗೆ 25 ರೂ. ಹೆಚ್ಚಳ ಇಂದಿನಿಂದ

ನವದೆಹಲಿ: ಸಬ್ಸಿಡಿ ರಹಿತ ಗ್ಯಾಸ್(LPG) ಸಿಲಿಂಡರ್ ಬೆಲೆಯನ್ನು ಬುಧವಾರದಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 25 ರೂ. ಹೆಚ್ಚಳ ಮಾಡಲಾಗಿದೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 75 ರೂ. ಹೆಚ್ಚಿಸಲಾಗಿದೆ. ತುಂಬಿದ 14.2 ಕೆಜಿ ಸಬ್ಸಿಡಿ ರಹಿತ ಗ್ಯಾಸ್(ಎಲ್‌ಪಿಜಿ) ಸಿಲಿಂಡರ್ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ 884.50 ರೂ.ಆಗಿದೆ.

ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ಆಗಸ್ಟ್ 17 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು.  ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಮತ್ತೆ 25 ರೂ. ಜಾಸ್ತಿಯಾಗಿದೆ. 2014 ರ ಮಾರ್ಚ್ 1 ರಂದು ಪ್ರತಿ ಸಿಲಿಂಡರ್‌ಗೆ 410.50 ರೂ. ಇದ್ದ ಎಲ್‌ಪಿಜಿ ಸಿಲಿಂಡರ್ ದರ ಈಗ 859.50 ರೂ.ಗಳಷ್ಟು ಆಗಿದೆ.

ಸರ್ಕಾರವು ಪ್ರತಿ ವರ್ಷ ಒಂದು ಮನೆಗೆ 12 ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುತ್ತದೆ. 12 ಮರು ಪೂರಣಗಳ ವಾರ್ಷಿಕ ಕೋಟಾದ ಮೇಲೆ ಸರ್ಕಾರವು ನೀಡುವ ಸಬ್ಸಿಡಿಯ ಮೊತ್ತವು ತಿಂಗಳಿಂದ ತಿಂಗಳಿಗೆ ಬದಲಾಗುತ್ತದೆ.

ಸಾಮಾನ್ಯವಾಗಿ, ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನದಂದು ದರ ಪರಿಷ್ಕರಣೆ ಮಾಡಿ ಜಾರಿಗೆ ತರಲಾಗುತ್ತದೆ.

ಅಡುಗೆ ಅನಿಲ ಬೆಲೆ ಏರಿಕೆಯಾದಂತೆ ಹೊಟೇಲ್ ಗಳಲ್ಲಿ ಆಹಾರ, ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಳವಾಗುವುದು ಸಾಮಾನ್ಯ. ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 862 ರೂಪಾಯಿ 50 ಪೈಸೆಯಾಗಿದೆ. ಕಳೆದ ವರ್ಷ ಕೇಂದ್ರ ಸರಕಾರ ಎಲ್‌ಪಿಜಿ ಸಿಲಿಂಡರ್‌ ಮೇಲಿನ ಸಬ್ಸಿಡಿ ಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿತ್ತು.