Thursday, 19th September 2024

ಐಸಿಸಿ ಟೆಸ್ಟ್ ಶ್ರೇಯಾಂಕ: ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್‌

ದುಬೈ: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಅವರನ್ನ ಹಿಂದಿಕ್ಕಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಶ್ರೇಯಾಂಕಿತ ಭಾರತೀಯ ಬ್ಯಾಟ್ಸ್ ಮನ್ ಆಗಿ ಬಡ್ತಿ ಪಡೆದಿದ್ದಾರೆ.

ಇಂಗ್ಲೆಂಡ್ʼನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಸರಣಿಯ 3 ಟೆಸ್ಟ್ʼಗಳ ನಂತ್ರ ವಿರಾಟ್ ಕೊಹ್ಲಿ 6ನೇ ಸ್ಥಾನಕ್ಕೆ ಜಾರಿದರೆ, ರೋಹಿತ್ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರೋಹಿತ್ 773 ರೇಟಿಂಗ್ ಪಾಯಿಂಟ್ʼಗಳನ್ನ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ʼಗಳಲ್ಲಿ ರೋಹಿತ್ 230 ರನ್ ಗಳಿಸಿದರೆ, ಕೊಹ್ಲಿ ಕೇವಲ 124 ರನ್ʼಗಳನ್ನು ಗಳಿಸಿದ್ದಾರೆ.

ರೋಹಿತ್ ಟೆಸ್ಟ್ ಬ್ಯಾಟಿಂಗ್ ಚಾರ್ಟ್ʼಗಳಲ್ಲಿ ಅಗ್ರ 5ಕ್ಕೆ ಪ್ರವೇಶಿಸಿರುವುದು ಇದೇ ಮೊದಲು. ಸೀಮಿತ ಓವರ್ʼಗಳ ಉಪನಾಯಕ 2019 ರಲ್ಲಿ ಆರಂಭಿಕ ಆಟಗಾರನ ಪಾತ್ರವನ್ನ ವಹಿಸಿಕೊಂಡ ನಂತರ ಭಾರತದ ಅತ್ಯಂತ ಸ್ಥಿರ ಬ್ಯಾಟ್ಸ್ ಮನ್ʼಗಳಲ್ಲಿ ಒಬ್ಬರಾಗಿದ್ದಾರೆ.

ಟಾಪ್ 10 ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್ ಗಳು 
ಜೋ ರೂಟ್ – 916 ಪಾಯಿಂಟ್ಗಳು
2. ಕೇನ್ ವಿಲಿಯಮ್ಸನ್ – 891
3. ಸ್ಟೀವ್ ಸ್ಮಿತ್ – 891
4. ಮಾರ್ನಸ್ ಲಾಬುಸ್ಚಾಗ್ನೆ – 878
5. ರೋಹಿತ್ ಶರ್ಮಾ – 773
6. ವಿರಾಟ್ ಕೊಹ್ಲಿ – 766
7. ಬಾಬರ್ ಅಜಮ್ – 749
8. ಡೇವಿಡ್ ವಾರ್ನರ್ – 724
9. ಕ್ವಿಂಟನ್ ಡಿ ಕಾಕ್ – 717
10. ಹೆನ್ರಿ ನಿಕೋಲ್ಸ್ – 714

ಚೇತೇಶ್ವರ ಪೂಜಾರ ಎರಡನೇ ಇನ್ನಿಂಗ್ಸ್ ನಲ್ಲಿ 91 ರನ್ʼಗಳೊಂದಿಗೆ ಹೋರಾಡುತ್ತಿರುವುದು ಶ್ರೇಯಾಂಕ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಜಿಗಿಯಲು ಮೂರು ಸ್ಥಾನಗಳ ಪ್ರಗತಿಯನ್ನು ಕಂಡಿದೆ.